ಕೃಷ್ಣಂರಾಜು ಮತ್ತು ಶ್ಯಾಮಲಾದೇವಿ: ತೆಲುಗಿನ ಖ್ಯಾತ ನಟ ದಿವಂಗತ ಕೃಷ್ಣಂರಾಜು. ಕನ್ನಡದ ಸಿಂಹದ ಮರಿ ಸೇರಿದಂತೆ ಕೆಲ ಚಿತ್ರಗಳಲ್ಲೂ ನಟಿಸಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೃಷ್ಣಂರಾಜು ಅವರು ಸಾವನ್ನಪ್ಪಿದ್ದಾಗ ಅವರ ವಯಸ್ಸು 83. ವಿಷಯ ಏನಂದ್ರೆ, ಇವರ ಮೊದಲ ಪತ್ನಿ ಸೀತಾದೇವಿ ಅಂತ. ಆದ್ರೆ ಅವರು ಚಿಕ್ಕ ವಯಸ್ಸಿನಲ್ಲೇ ಉಸಿರು ಚೆಲ್ಲಿದ್ರು. ಬಳಿಕ ಕೃಷ್ಣಂರಾಜು ಅವರು ಶ್ಯಾಮಲಾ ದೇವಿ ಅವರನ್ನ 1996ರಲ್ಲಿ ಎರಡನೇ ವಿವಾಹ ಆದ್ರು. ಬಳಿಕ ಅವರು 56 ವಯಸ್ಸಿನ ನಂತರ ಮೂವರು ಹೆಣ್ಣು ಮಕ್ಕಳಿಗೆ ತಂದೆಯಾದ್ರು.
ದಿಲ್ ರಾಜು ಮತ್ತು ವೈಗಾ ರೆಡ್ಡಿ: ಟಾಲಿವುಡ್‌ನ ಖ್ಯಾತ ನಿರ್ಮಾಪಕ ವೆಂಕಟ್ ರಮಣ ರೆಡ್ಡಿ ಅಲಿಯಾಸ್ ದಿಲ್ ರಾಜು. ದಿಲ್ ರಾಜು ಅವರ ಮೊದಲ ಪತ್ನಿ ಅನಿತಾ. ಅನಿತಾ ಹಾಗೂ ದಿಲ್ ರಾಜು ಅವರಿಗೆ ಒಂದು ಹೆಣ್ಣು ಮಗುವಿತ್ತು. ಆದ್ರೆ ಅನಿತಾ ಅವರ ಅಗಲಿಕೆ ಬಳಿಕ 33 ವರ್ಷದ ವೈಗಾ ರೆಡ್ಡಿ ಅವರನ್ನ ದಿಲ್‌ರಾಜು ವಿವಾಹ ಆದ್ರು. 2022ರಲ್ಲಿ ದಿಲ್‌ರಾಜು ಮತ್ತೊಮ್ಮೆ ತಂದೆ ಆದ್ರು. ಆಗ ಅವರ ವಯಸ್ಸು 42.
ಪ್ರಕಾಶ್ ರಾಜ್ ಮತ್ತು ಪೋನಿ ವರ್ಮಾ: ದಕ್ಷಿಣ ಭಾರತದ ಖ್ಯಾತ ನಟ, ಕನ್ನಡಿಗ ಪ್ರಕಾಶ್ ರೈ ಅವರು ಮೊದಲನೇ ವಿವಾಹ ಆಗಿದ್ದು 1994ರಲ್ಲಿ. ಲಲಿತಾ ಕುಮಾರಿ ಅವರನ್ನ ಮದ್ವೆಯಾದ ಅವರಿಗೆ ಇಬ್ಬರು ಮಕ್ಕಳು ಇದ್ವು. ಬಳಿಕ 2009ರಲ್ಲಿ ಇಬ್ಬರು ವಿಚ್ಚೇಧನ ಪಡೆದ್ರು. ನಂತರ, ನೃತ್ಯಗಾರ್ತಿ ಪೋನಿವರ್ಮಾ ಅವರನ್ನ ಪ್ರಕಾಶ್ ರಾಜ್ ಮದ್ವೆಯಾದ್ರು. 2010ರಲ್ಲಿ ಪೋನಿ ಅವರನ್ನ ಮದ್ವೆಯಾದ ಪ್ರಕಾಶ್ ರಾಜ್ 2015ರಲ್ಲಿ ವೇದಂತ್ ಎಂಬ ಗಂಡು ಮಗುವಿನ ತಂದೆಯಾದ್ರು.
ಪವನ್ ಕಲ್ಯಾಣ್ ಮತ್ತು ಆನಾ ಲೆಜ್ನೆವಾ: ಟಾಲಿವುಡ್‌ನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು 1997ರಲ್ಲಿ ನಂದಿನಿ ಅವರನ್ನ ಮದ್ವೆಯಾದ್ರು. ಕೆಲವೇ ದಿನಗಳಲ್ಲಿ ಅವರಿಗೆ ವಿಚ್ಚೇದನ ನೀಡಿದ್ರು. ನಂತರ ಚಿತ್ರರಂಗಕ್ಕೆ ಕಾಲಿಟ್ಟ ಪವನ್ ಕಲ್ಯಾಣ್, ನಟಿ ರೇಣು ದೇಸಾಯಿ ಜತೆ ಲಿವಿಂಗ್ ಟು ರಿಲೇಷನ್‌ಶಿಪ್‌ನಲ್ಲಿ ಇದ್ರು. 2005ರಲ್ಲಿ ಅವರಿಗೆ ಅಕಿರಾ ನಂದನಾ ಎಂಬ ಹೆಣ್ಣು ಮಗು ಜನಿಸಿತು. 2010ರಲ್ಲಿ ಮತ್ತೊಂದು ಗಂಡು ಮಗು ಜನಿಸಿತು. 2009ರಲ್ಲಿ ಪವನ್ ಮತ್ತು ರೇಣು ದೇಸಾಯಿ ಮದ್ವೆಯಾದ್ರು. ಆದ್ರೆ, ಮೂರೇ ವರ್ಷಕ್ಕೆ ಅವರ ದಾಂಪತ್ಯ ಮುರಿದು ಬಿತ್ತು. ಈ ನಡುವೆ ಗಬ್ಬರ್ ಸಿಂಗ್‌ಗೆ ರಷ್ಯಾ ಮೂಲದ ಆನಾ ಲೆಜ್ನೆವಾ ಜತೆ ಲವ್ ಆಗಿತ್ತು. 2011ರಲ್ಲಿ ಆನಾ ಅವರನ್ನ ಪವನ್ ವಿವಾಹವಾದ್ರು. ಬಳಿಕ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಒಂದು ಗಂಡು ಮಗು ಜನಿಸಿತು.
ಮಾಧವಿ ಮತ್ತು ರ‍್ಯಾಲ್ಪ್ ಶರ್ಮಾ: ಕನ್ನಡದ ಹಾಲುಜೇನು, ಆಕಸ್ಮಿಕ, ಒಡಹುಟ್ಟಿದವರು ಸೇರಿದಂತೆ ಹತ್ತಾರು ಸಿನಿಮಾಗಳಲ್ಲಿ ನಟಿಸಿರುವ ತಾರೆ ಮಾಧವಿ. ದಕ್ಷಿಣ ಭಾರತದಲ್ಲಿ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಮಾಧವಿ ಅವರು 1996ರಲ್ಲಿ ಹಿಂದೂಪರ ಹೋರಾಟಗಾರ ರ‍್ಯಾಲ್ಪ್ ಶರ್ಮಾ ಅವರನ್ನ ಮದ್ವೆಯಾದರು. ತಮ್ಮ 40 ವರ್ಷದ ಬಳಿಕ ಅವರು ಮೂವರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ರು.
ಊರ್ವಶಿ ಮತ್ತು ಶಿವಪ್ರಸಾದ್: ನಾನು ನನ್ನ ಹೆಂಡ್ತಿ, ರಾಮಾಶಾಮಾ ಭಾಮ ಸೇರಿದಂತೆ ಕನ್ನಡದಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿರುವ ನಟಿ ಊರ್ವಶಿ.. ದಕ್ಷಿಣ ಭಾರತದ ಈ ಖ್ಯಾತ ನಟಿ 2000ರಲ್ಲಿ ತೆಲುಗು ಚಿತ್ರನಟ ಮನೋಜ್ ಅವರನ್ನ ಮದ್ವೆಯಾದ್ರು. 2008ರಲ್ಲಿ ಅವರಿಂದ ವಿಚ್ಚೇದನ ಪಡೆದ ಊರ್ವಶಿ ಅವರು ಚೆನ್ನೈ ಮೂಲದ ಬಿಲ್ಡರ್ ಶಿವಪ್ರಸಾದ್ ಅವರನ್ನ 2013ರಲ್ಲಿ ಮದ್ವೆಯಾದ್ರು. 2014ರಲ್ಲಿ ದಂಪತಿಗೆ ಇಶಾನ್ ಪ್ರಜಾಪತಿ ಹೆಸರಿನ ಗಂಡು ಮಗು ಜನಿಸಿತು.
ಸಂಜಯ್ ದತ್ ಮತ್ತು ಮಾನ್ಯತಾ: ಬಾಲಿವುಡ್‌ನಲ್ಲಿ ಸಂಜಯ್ ದತ್‌ಗೂ ವಿವಾದಕ್ಕೂ ಒಂದಿಲ್ಲೊಂದು ನಂಟು. ಸ್ಟಾರ್ ಕುಟುಂಬದಲ್ಲಿ ಹುಟ್ಟಿದ ಸಂಜಯ್ ದತ್ ಅವರು, ಅನೇಕ ವಿವಾದಗಳಿಂದ ಸುದ್ದಿಯಾಗಿದ್ರು. ಜೈಲು ವಾಸ ಕೂಡ ಅನುಭವಿಸಿದ್ರು.. ಖ್ಯಾತ ನಟ ಸಂಜಯ್ ದತ್ ಅವರು ಮೂರು ಸಲ ಮದ್ವೆಯಾಗಿದ್ದಾರೆ. ತಮ್ಮ ಮೂರನೇ ಪತ್ನಿ ಮಾನ್ಯತಾ ಅವರು 2010ರಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ರು.
ಅಮಿರ್ ಖಾನ್ ಮತ್ತು ಕಿರಣ್ ರಾವ್: ಅಮಿರ್ ಖಾನ್ ಅವರ ದಾಂಪತ್ಯ ಜೀವನ ಸಾಕಷ್ಟು ಸುದ್ದಿಯಾಗಿತ್ತು. ಯಾಕಂದ್ರೆ, ಬಾಲಿವುಡ್ ನಟ ಅಮಿರ್ ಖಾನ್ ಅವರು ತಮ್ಮ ಲಗಾನ್ ಚಿತ್ರದ ಸಹಾಯಕ ನಿರ್ದೇಶಕಿ ಕಿರಣ್ ರಾವ್ ಅವರನ್ನ 2005ರಲ್ಲಿ ಮದ್ವೆಯಾದ್ರು. 2011ರಲ್ಲಿ ದಂಪತಿಗೆ ಆಜಾದ್ ಖಾನ್ ಎಂಬ ಗಂಡು ಮಗು ಜನಿಸಿತು. ಬಳಿಕ ದಂಪತಿ ನೆಮ್ಮದಿಯಾಗಿದ್ರು. ಆದ್ರೆ, ಕೆಲ ದಿನಗಳ ಹಿಂದಷ್ಟೇ ಅಮಿರ್ ಮತ್ತು ಕಿರಣ್ ರಾವ್ ಬೇರೆ ಬೇರೆಯಾಗಿದ್ದಾರೆ.. ಇಬ್ಬರು ಕೂಡ ಪರಸ್ಪರ ಒಪ್ಪಂದದ ಮೂಲಕ ವಿಚ್ಚೇದನ ಪಡೆದಿದ್ದಾರೆ..
ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್: 1970ರಲ್ಲಿ ಜನಿಸಿದ ಪಟೌಡಿ ಕುಟುಂಬದ ಸೈಫ್ ಅಲಿಖಾನ್ ಅವರು 1991ರಲ್ಲಿ ಅಮೃತಾ ಸಿಂಗ್ ಅವರನ್ನ ಮದ್ವೆಯಾದ್ರು. 2004ರಲ್ಲಿ ಅಮೃತಾ ಅವರಿಗೆ ವಿಚ್ಚೇದನ ನೀಡಿದ ಸೈಫ್ ಅಲಿ ಖಾನ್, 2012ರಲ್ಲಿ ಖ್ಯಾತ ನಟಿ ಕರೀನಾ ಕಪೂರ್ ಅವರನ್ನ ಮದ್ವೆಯಾದ್ರು. 2016 ಮತ್ತು 2021ರಲ್ಲಿ ದಂಪತಿಗೆ ಎರಡು ಮಕ್ಕಳು ಜನಿಸಿವೆ. ಸದ್ಯ ಸೈಫ್‌ಗೆ ನಾಲ್ಕು ಮಕ್ಕಳಿದ್ದು, ಮೊದಲ ಪುತ್ರಿಯಾಗಿರುವ ಸಾರಾ ಅಲಿ ಖಾನ್ ಈಗಾಗಲೇ ಬಾಲಿವುಡ್‌ನ ಹಲವು ಚಿತ್ರಗಳಲ್ಲಿ ನಟಿಯಾಗಿ ನಟಿಸುತ್ತಿದ್ದಾರೆ.