ಏನಾಗಬೇಕೋ ಅದು ಆಗುತ್ತದೆ. ಆದರೆ ಆರಾಮಾಗಿ ಸುತ್ತಾಡಬಹುದು ಎಂದು ಅದರರ್ಥ ಅಲ್ಲ. ನಾನು ಎಲ್ಲಾ ಕಡೆಗೆ ಫುಲ್ ಸೆಕ್ಯುರಿಟಿ ಜೊತೆ ಹೋಗುತ್ತೇನೆ. ನಾವೇನು ಮಾಡಿದರೂ ಏನಾಗಬೇಕೋ ಅದು ಆಗುತ್ತದೆ. ಹಾಗಂತ ನಾನು ಆರಾಮಾಗಿ ಸುತ್ತಾಡಬಹುದು ಎಂದರ್ಥವಲ್ಲ. ಹಲವಾರು ಗನ್ ನನ್ನ ಕಡೆ ಗುರಿ ಮಾಡಿವೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ನನಗೆ ನನ್ನ ಬಗ್ಗೆಯೇ ಭಯವಿದೆ ಎಂದಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಸಾಕಷ್ಟು ಪ್ಲಾನ್ ಮಾಡುತ್ತಿರುವುದು ರಿವೀಲ್ ಆಗಿದೆ. ಈ ತಿಂಗಳ ಆರಂಭದಲ್ಲಿ ನಟನಿಗೆ ಬೆದರಿಕೆ ಕರೆ ಬಂದಿತ್ತು. ರಾಕಿ ಭಾಐ್ ಎಂಬಾಯ್ ನಟನನ್ನು ಏಪ್ರಿಲ್ 30ರಂದು ಕೊಲ್ಲುವುದಾಗಿ ಬೆದರಿಸಿದ್ದ. ನಂತರ ಈ ಮೇಲ್ ಮೂಲಕ ಮತ್ತೊಮ್ಮೆ ಕೊಲೆ ಬೆದರಿಕೆ ಬಂದಿತ್ತು. ಇದರಲ್ಲಿ ರಾಖಿ ಸಾವಂತ್ ಅವರನ್ನೂ ಬೆದರಿಸಲಾಗಿತ್ತು.