Rajkumar Family: ಇವ್ರು ರಾಜ್ ಕುಟುಂಬ ಬೆಳಗಿದ ಮಹಿಳಾ ಮಣಿಯರು! ದೊಡ್ಮನೆಯ ಸಾಧಕಿಯರು

ಡಾ. ರಾಜ್​ಕುಮಾರ್ ಕುಟುಂಬ ಅಂದ್ರೆ ಸ್ಯಾಂಡಲ್​ವುಡ್​ನಲ್ಲಿ ವಿಶೇಷ ಗೌರವ ಇದೆ. ದೊಡ್ಮನೆ ಎಂದೇ ಕರೆಸಿಕೊಳ್ಳುವ ರಾಜ್ ಕುಟುಂಬಸ್ಥರ ಮೇಲೂ ಅದೇ ಪ್ರೀತಿಯಿದೆ. ರಾಜ್​ಕುಮಾರ್ ಹಾಗೂ ಅವರ ಮೂವರು ಗಂಡು ಮಕ್ಕಳ ಸಾಧನೆಗೆ ಈ ಮಹಿಳೆಯರೇ ಶಕ್ತಿ.

First published:

  • 19

    Rajkumar Family: ಇವ್ರು ರಾಜ್ ಕುಟುಂಬ ಬೆಳಗಿದ ಮಹಿಳಾ ಮಣಿಯರು! ದೊಡ್ಮನೆಯ ಸಾಧಕಿಯರು

    ನಟ ರಾಜ್ ಕುಮಾರ್ ಹಿಂದಿನ ಶಕ್ತಿ ಪತ್ನಿ ಪಾರ್ವತಮ್ಮ ಎಂದ್ರು ಹೇಳಿದ್ರೆ ತಪ್ಪಾಗುವುದಿಲ್ಲ. ದಿಟ್ಟ ಮಹಿಳೆ ಆಗಿದ್ದ ಪಾರ್ವತಮ್ಮ ರಾಜ್ ಕುಮಾರ್ ಸ್ಯಾಂಡಲ್​ವುಡ್​ನಲ್ಲಿ ನಿರ್ಮಾಪಕಿ ಆಗಿ ಹೆಸರು ಮಾಡಿದ್ದಾರೆ. 80 ಸಿನಿಮಾಗಳನ್ನು ನಿರ್ಮಿಸಿದ ಪಾರ್ವತಮ್ಮ ನಾವು ಯಾರಿಗೇನು ಕಡಿಮೆ ಇಲ್ಲ ಎಂದು ನಿರೂಪಿಸಿದ್ದಾರೆ.

    MORE
    GALLERIES

  • 29

    Rajkumar Family: ಇವ್ರು ರಾಜ್ ಕುಟುಂಬ ಬೆಳಗಿದ ಮಹಿಳಾ ಮಣಿಯರು! ದೊಡ್ಮನೆಯ ಸಾಧಕಿಯರು

    ನಟ ರಾಜ್​ಕುಮಾರ್ ಕೂಡ ಅನೇಕ ಕಾರ್ಯಕ್ರಮಗಳಲ್ಲಿ ಪತ್ನಿಯನ್ನು ಕೊಂಡಾಡಿದ ಉದಾಹರಣೆಗಳು ಇದೆ. ಪಾರ್ವತಮ್ಮ ರಾಜ್ಕುಮಾರ್ ಲೆಕ್ಕದಲ್ಲಿ ಪಕ್ಕ ಆಗಿದ್ರು. ಮನೆ ಹಾಗೂ ಸಿನಿಮಾಗಳ ವ್ಯವಹಾರಗಳನ್ನು ಅಷ್ಟೇ ಅಚ್ಚುಕಟ್ಟಾಗಿ ಪಾರ್ವತಮ್ಮ ನಿರ್ವಹಣೆ ಮಾಡ್ತಿದ್ರು.

    MORE
    GALLERIES

  • 39

    Rajkumar Family: ಇವ್ರು ರಾಜ್ ಕುಟುಂಬ ಬೆಳಗಿದ ಮಹಿಳಾ ಮಣಿಯರು! ದೊಡ್ಮನೆಯ ಸಾಧಕಿಯರು

    ಪಾರ್ವತಮ್ಮ ರಾಜ್ ಕುಮಾರ್ ಅವರನ್ನು ಮದುವೆಯಾದಾಗ ಅವರಿಗೆ ಕೇವಲ 13 ವರ್ಷ ಆಗಿತ್ತು. ಸಣ್ಣ ವಯಸ್ಸಿನಲ್ಲೇ ಪಾರ್ವತಮ್ಮ ಅವರು ಮನೆ-ಮಕ್ಕಳ ಜವಾಬ್ದಾರಿ ಹೊತ್ತು ನಿಭಾಯಿಸಿದ್ದಾರೆ. ಮನೆಯ ಮಕ್ಕಳನ್ನು ಕೂಡ ಅಷ್ಟೇ ಶಿಸ್ತಿನಿಂದ ಬೆಳಸಿದ ಕೀರ್ತಿ ಪಾರ್ವತಮ್ಮ ಅವರಿಗೆ ಸಲ್ಲುತ್ತದೆ.

    MORE
    GALLERIES

  • 49

    Rajkumar Family: ಇವ್ರು ರಾಜ್ ಕುಟುಂಬ ಬೆಳಗಿದ ಮಹಿಳಾ ಮಣಿಯರು! ದೊಡ್ಮನೆಯ ಸಾಧಕಿಯರು

    ಶ್ರೀ ವಜ್ರೇಶ್ವರಿ ಕಂಬೈನ್ಸ್ ಮೂಲಕ ಪಾರ್ವತಮ್ಮ ನಿರ್ಮಿಸಿದ ಮೊಟ್ಟ ಮೊದಲ ಸಿನಿಮಾ ರಾಜ್ ಕುಮಾರ್ ಅವರ ತ್ರಿಮೂರ್ತಿ‘, ಈ ಸಿನಿಮಾ ಕೂಡ ಸೂಪರ್ ಸಕ್ಸಸ್ ಕಂಡಿದೆ. ಅನೇಕ ನಟಿಯರನ್ನು ಪಾರ್ವತಮ್ಮ ರಾಜ್ಕುಮಾರ್ ಸ್ಯಾಂಡಲ್​ವುಡ್​ಗೆ ಪರಿಚಯಿಸಿದ್ದಾರೆ.

    MORE
    GALLERIES

  • 59

    Rajkumar Family: ಇವ್ರು ರಾಜ್ ಕುಟುಂಬ ಬೆಳಗಿದ ಮಹಿಳಾ ಮಣಿಯರು! ದೊಡ್ಮನೆಯ ಸಾಧಕಿಯರು

    ರಾಜ್ಕುಮಾರ್ ಮೊದಲ ಮಗ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್​ ಕುಮಾರ್, ರಾಜ್ ಸೊಸೆಯಾಗಿ ದೊಡ್ಮನೆಗೆ ಕಾಲಿಟ್ರು. ಮಾಜಿ ಸಿಎಂ ಬಂಗಾರಪ್ಪ ಅವರ ಪುತ್ರಿಯಾಗಿದ್ದ ಗೀತಾ, ಮನೆ ಸಂಸಾರ ಎಂದು ಕೂರದೇ, ಒಂದು ಕೈ ನೋಡೇ ಬಿಡೋಣ ಅಂತ ರಾಜಕೀಯಕ್ಕೂ ಎಂಟ್ರಿ ಕೊಟ್ರು.

    MORE
    GALLERIES

  • 69

    Rajkumar Family: ಇವ್ರು ರಾಜ್ ಕುಟುಂಬ ಬೆಳಗಿದ ಮಹಿಳಾ ಮಣಿಯರು! ದೊಡ್ಮನೆಯ ಸಾಧಕಿಯರು

    ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿಗೆ ಸ್ಪರ್ಧಿಸಿದ್ರು. ಗೆಲುವು ಕಾಣದಿದ್ರು ಒಳ್ಳೆಯ ಫೈಟ್ ಕೊಟ್ಟಿದ್ರು. ಇದೀಗ ಸ್ಯಾಂಡಲ್ವುಡ್ನಲ್ಲಿ ನಿರ್ಮಾಪಕಿ ಆಗಿದ್ದಾರೆ. ಶಿವರಾಜ್ ಕುಮಾರ್ ಅಭಿನಯದ ವೇದ ಸಿನಿಮಾ ನಿರ್ಮಿಸಿದ್ದು, ಚಿತ್ರ ಕೂಡ ಸೂಪರ್ ಹಿಟ್ ಆಗಿದೆ.

    MORE
    GALLERIES

  • 79

    Rajkumar Family: ಇವ್ರು ರಾಜ್ ಕುಟುಂಬ ಬೆಳಗಿದ ಮಹಿಳಾ ಮಣಿಯರು! ದೊಡ್ಮನೆಯ ಸಾಧಕಿಯರು

    ರಾಜ್ 2ನೇ ಪುತ್ರ ರಾಘವೇಂದ್ರ ರಾಜ್ ಕುಮಾರ್ ಅವರ ಪತ್ನಿ ಮಂಗಳಾ ಅವ್ರು ಪಕ್ಕಾ ಗೃಹಿಣಿಯಾಗಿ ಮನೆ ಜವಾಬ್ದಾರಿ ಹೊತ್ತಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಮನೆಗೆ ಮಂಗಳಾ ಬೆಳಕಾಗಿದ್ದಾರೆ. ಅನೇಕ ಬಾರಿ ರಾಘಣ್ಣ ಮಡದಿ ಬಗ್ಗೆ ಕೊಂಡಾಡಿದ್ದಾರೆ.

    MORE
    GALLERIES

  • 89

    Rajkumar Family: ಇವ್ರು ರಾಜ್ ಕುಟುಂಬ ಬೆಳಗಿದ ಮಹಿಳಾ ಮಣಿಯರು! ದೊಡ್ಮನೆಯ ಸಾಧಕಿಯರು

    ರಾಜ್ 3ನೇ ಮಗ ದಿವಂಗತ ಪುನೀತ್ ರಾಜ್ ಕುಮಾರ್ ಅವರು ಪ್ರೀತಿಸಿ ಮದುವೆಯಾದ ಅಶ್ವಿನಿ ರಾಜ್ ಮುದ್ದಿನ ಸೊಸೆಯಾಗಿ ಮನೆ ಪ್ರವೇಶಿಸಿದ್ರು. ಪುನೀತ್ ರಾಜ್ ಕುಮಾರ್ ಮೆಚ್ಚಿನ ಮಡದಿ ಅಶ್ವಿನಿ ಅವರ ನಡೆ-ನುಡಿಯಿಂದಲೇ ಎಲ್ಲರ ಮನಗೆದ್ದಿದ್ದಾರೆ. ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರ ಪವರ್ ಆಗಿದ್ರು.

    MORE
    GALLERIES

  • 99

    Rajkumar Family: ಇವ್ರು ರಾಜ್ ಕುಟುಂಬ ಬೆಳಗಿದ ಮಹಿಳಾ ಮಣಿಯರು! ದೊಡ್ಮನೆಯ ಸಾಧಕಿಯರು

    ಪುನೀತ್ ನಿಧನದ ಬಳಿಕ ಮನೆ, ಮಕ್ಕಳ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಪಿಆರ್ಕೆ ಪ್ರೊಡೆಕ್ಷನ್ ಹೊಣೆ ಹೊತ್ತ ಅಶ್ವಿನಿ, ಸಿನಿಮಾ ನಿರ್ಮಾಣದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಪುನೀತ್ ನಿಧನದ ಬಳಿಕ ಅಪ್ಪು ಕನಸಿನ ಚಿತ್ರ ಗಂಧದ ಗುಡಿಯನ್ನು ಯಸಶ್ವಿಯಾಗಿ ತೆರೆ ಮೇಲೆ ತಂದಿದ್ದಾರೆ. ರಾಜ್​ ಮೊಮ್ಮಕ್ಕಳು ಕೂಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. 

    MORE
    GALLERIES