ಆದರೆ ಅಷ್ಟೊಂದು ದಪ್ಪ ಇದ್ದ ಗಾಯಕ ಅದ್ನಾನ್ ಸಾಮಿ ಕೆಲವು ವರ್ಷಗಳ ನಂತರ ನೋಡಿದರೆ, ಅಕ್ಷರಶಃ ಬಹುತೇಕರು ಅವರನ್ನು ಗುರುತಿಸಲು ಸಾಧ್ಯವಾಗಲೇ ಇಲ್ಲ, ಅಷ್ಟೊಂದು ಸ್ಲಿಮ್ ಆಗಿ ಬಂದಿದ್ದರು ಅದ್ನಾನ್. ಅಷ್ಟು ಬೇಗ ಈ ಗಾಯಕ ದೇಹದ ತೂಕವನ್ನು ಕಡಿಮೆ ಮಾಡಿಕೊಂಡಿದ್ದನ್ನು ನೋಡಿ ಅನೇಕರು ಅದ್ನಾನ್ ಸಾಮಿ ಶಸ್ತ್ರಚಿಕಿತ್ಸೆಯ ಮೂಲಕ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ ಅಂತ ಸಹ ಹೇಳಿದರು.
ಜನಪ್ರಿಯ ವೆಬ್‌ಸೈಟ್ ಗೆ ನೀಡಿದ ಒಂದು ಸಂದರ್ಶನದಲ್ಲಿ ಒಂದು ಸಮಯದಲ್ಲಿ 230 ಕೆಜಿ ತೂಕವನ್ನು ಹೊಂದಿದ್ದ ಅದ್ನಾನ್ ಸಾಮಿ, ತನ್ನ ತೂಕ ಇಳಿಸಿಕೊಂಡಿರುವ ಪ್ರಕ್ರಿಯೆಯನ್ನು ಹಂಚಿಕೊಂಡರು. 2006 ರಲ್ಲಿ ಅವರು ಅತಿಯಾದ ತೂಕ ಹೊಂದಿರುವುದರಿಂದ ಅವರು ಬದುಕುವುದು ಕೇವಲ ಆರೇ ಆರು ತಿಂಗಳು ಮಾತ್ರ ಅಂತ ವೈದ್ಯರು ಹೇಳಿದ್ದರಂತೆ" ಎಂದು ತೇರಾ ಚೆಹ್ರಾ ಹಾಡಿನ ಗಾಯಕ ಹೇಳಿಕೊಂಡಿದ್ದಾರೆ.
ನಾನು ಹಂತ ಹಂತವಾಗಿ ಪೌಷ್ಟಿಕ ತಜ್ಞರು ಹೇಳಿದಂತೆ ಡಯಟ್ ಅನ್ನು ಫಾಲೋ ಮಾಡಿದೆ. ಆದರೆ ನಾನು ಇಷ್ಟು ತೂಕವನ್ನು ಕಡಿಮೆ ಮಾಡಿಕೊಳ್ಳುತ್ತೇನೆ ಅಂತ ಎಂದಿಗೂ ಭಾವಿಸಿರಲಿಲ್ಲ” ಎಂದು ಹೇಳಿದರು. ತೂಕ ಇಳಿಸಿಕೊಳ್ಳುವುದು ತುಂಬಾನೇ ಕಷ್ಟದ ಕೆಲಸ ಅಂತ ಗಾಯಕ ಒಪ್ಪಿಕೊಂಡರು. ಹಲವಾರು ಆಹಾರಕ್ರಮಗಳನ್ನು ಪ್ರಯತ್ನಿಸಿದರೂ, ಅವರು ಅಂತಿಮವಾಗಿ ತಮ್ಮ ಲೈಫ್ ಸ್ಟೈಲ್ ಅನ್ನು ಸಂಪೂರ್ಣವಾಗಿ ಬದಲಾಯಿಸಿಕೊಳ್ಳಲು ನಿರ್ಧರಿಸಿದರು ಎಂದು ಅವರು ಹೇಳಿದರು.