NBK108 ಸಿನಿಮಾ ಶೂಟಿಂಗ್ ಶರವೇಗದಲ್ಲಿ ಸಾಗುತ್ತಿದೆ. ಈ ಚಿತ್ರೀಕರಣದಲ್ಲಿ ಕಾಜಲ್ ಕೂಡ ಭಾಗವಹಿಸಲಿದ್ದಾರೆ. ಆಚಾರ್ಯ ನಂತರ ಇದು ಕಾಜಲ್ ಅವರ ಎರಡನೇ ಸಿನಿಮಾ ಆಗಿದೆ. ತೆಲುಗು ಚಿತ್ರದಲ್ಲಿ ಬಾಲಯ್ಯ ಪವರ್ಫುಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಥಮನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಅನಿಲ್ ರವಿಪುಡಿ ಈ ಸಿನಿಮಾವನ್ನು ಅದ್ಭುತವಾಗಿ ನಿರ್ದೇಶಿಸುತ್ತಿದ್ದಾರಂತೆ. ಅಕ್ಟೋಬರ್ 21 ರಂದು ದಸರಾ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಶೀಘ್ರದಲ್ಲೇ ಹೊರಬೀಳಲಿದೆ.