ಈ ಸಿರೀಸ್ನ ಪಾತ್ರಗಳಂತೂ ಎಲ್ಲರಿಗೂ ಅಚ್ಚುಮೆಚ್ಚು. ಈ ಸಿರೀಸ್ನ ಕಥೆ ಏನಂದ್ರೆ ಬ್ಯಾಂಕ್ ರಾಬರಿ ಮಾಡಿ ಅಲ್ಲಿಂದ ಹೇಗೆ ಬಚಾವಾಗ್ತಾರೆ ಅನ್ನೋದೇ ಜೀವಾಳ. ಪ್ರೊಫೆಸರ್, ರಿಯೋ, ಟೊಕ್ಯೊ, ಡೆನ್ವರ್, ನೈರೋಭಿ, ಬರ್ಲಿನ್, ಮೋನಿಕಾ ಸೇರಿದಂತೆ ಹಲವು ಪಾತ್ರಗಳು ಇಂದಿಗೂ ನೋಡುಗರ ಮನಸ್ಸಿನಲ್ಲಿದೆ.
ಈತನ ಫೋಟೋ ನೋಡುತ್ತಿದ್ದರೆ ನಿಮ್ಮ ತಲೆಯಲ್ಲಿ ಒಂದು ಫೇಮಸ್ ಸಿರೀಸ್ ಹೆಸರು ಬರುತ್ತೆ. ಅದು ಬೇರೆ ಯಾವುದು ಅಲ್ಲ, ಅದುವೇ ಮನಿ ಹೀಸ್ಟ್. ಹೌದು, ಬಹುತೇಕ ಜನರು ಈ ಸ್ಪಾನಿಶ್ ಭಾಷೆಯ ಈ ಸಿರೀಸ್ನ ಬಹಳ ಮೆಚ್ಚಿದ್ದಾರೆ.
2/ 8
ಅದರಲ್ಲೂ ಈ ಸಿರೀಸ್ನ ಪಾತ್ರಗಳಂತೂ ಎಲ್ಲರಿಗೂ ಅಚ್ಚುಮೆಚ್ಚು. ಈ ಸಿರೀಸ್ನ ಕಥೆ ಏನಂದ್ರೆ ಬ್ಯಾಂಕ್ ರಾಬರಿ ಮಾಡಿ ಅಲ್ಲಿಂದ ಹೇಗೆ ಬಚಾವಾಗ್ತಾರೆ ಅನ್ನೋದೇ ಜೀವಾಳ. ಪ್ರೊಫೆಸರ್, ರಿಯೋ, ಟೊಕ್ಯೊ, ಡೆನ್ವರ್, ನೈರೋಭಿ, ಬರ್ಲಿನ್, ಮೋನಿಕಾ ಸೇರಿದಂತೆ ಹಲವು ಪಾತ್ರಗಳು ಇಂದಿಗೂ ನೋಡುಗರ ಮನಸ್ಸಿನಲ್ಲಿದೆ.
3/ 8
ನೀವು ಈ ಸಿರೀಸ್ ನೋಡುವಾಗ ಮತ್ತೊಂದು ಅಂಶ ಎಲ್ಲರಿಗೂ ಇಷ್ಟವಾಗಿರುತ್ತೆ. ಅದು ಏನು ಅಂದ್ರೆ ಎಲ್ಲ ಪಾತ್ರಗಳು ಮುಖಕ್ಕೆ ಹಾಕುವ ಮಾಸ್ಕ್. ಹೌದು, ವಿಚಿತ್ರವಾಗಿರುವ ಈ ಮಾಸ್ಕ್ ಪ್ರೇರಣೆ ಯಾರು ಗೊತ್ತಾ? ಆತನ ಬಗ್ಗೆ ನೀವು ತಿಳಿದುಕೊಂಡ್ರೆ ನಿಜಕ್ಕೂ ಅಚ್ಚರಿಯಾಗುತ್ತೆ.
4/ 8
ಹೌದು, ಸಾಲ್ವಡಾರ್ ಡಾಲಿಯ ಮುಖವನ್ನೇ ಪ್ರೇರಣೆಯಾಗಿಟ್ಟುಕೊಂಡು ಮನಿ ಹೀಸ್ಟ್ ಮಾಸ್ಕ್ ರೆಡಿಯಾಗಿತ್ತು. ಈ ಸಾಲ್ವಡಾರ್ ಡಾಲಿ ಮೀಸೆ ನೋಡಿದ್ರೆ ಎಂಥವರಿಗೂ ಮೈ ಜುಮ್ ಅನ್ನಿಸುತ್ತೆ. ಈ ಸಾಲ್ವಡಾರ್ ಪೂರ್ಣ ಹೆಸರು ಸಾಲ್ವಡಾರ್ ಫೆಲಿಪೆ ಜಸಿಂಟೊ ಡಾಲಿ ವೈ ಡೊಮೆನೆಕ್ .
5/ 8
ಈ ಸಾಲ್ವಡಾರ್ ಡಾಲಿ ಮೇ 11, 1904ರಲ್ಲಿ ಜನಿಸಿದರು. ಜನವರಿ 23, 1989ರಲ್ಲಿ ನಿಧರಾಗುತ್ತಾರೆ. ಸಾಲ್ವಡಾರ್ ಡಾಲಿ ಸ್ಪ್ಯಾನಿಷ್ ನವ್ಯ ಸಾಹಿತ್ಯ ಸಿದ್ಧಾಂತದ ವರ್ಣಚಿತ್ರಕಾರ ಮತ್ತು ಪ್ರಿಂಟ್ ಮೇಕರ್ , ಉಪಪ್ರಜ್ಞೆಯ ಚಿತ್ರಣಗಳ ಅನ್ವೇಷಣೆಯಲ್ಲಿ ಪ್ರಭಾವಶಾಲಿಯಾಗಿದ್ದರು. ಇಂದು ಸಾಲ್ವಡಾರ್ ಡೆತ್ ಆನಿವರ್ಸರಿ.
6/ 8
ಸಾಲ್ವಡಾರ್ ಡಾಲಿ ಕಲಾತ್ಮಕ ಶೈಲಿಯಲ್ಲಿ ಜೀವನ ನಡೆಸಿದರು. ವರ್ಣಚಿತ್ರಕಾರರಾಗಿ ಮೆರೆದವರು. ಮನಿ ಹೀಸ್ಟ್ನಲ್ಲಿನ ಕೆಂಪು ಜಂಪ್ಸೂಟ್ಗಳು ಕಾರ್ಯಕ್ರಮದ ಕ್ರಾಂತಿಯ ಮುಖ್ಯ ವಿಷಯವನ್ನು ಬೆಂಬಲಿಸುತ್ತವೆ.
7/ 8
ಸಾಲ್ವಡಾರ್ ಡಾಲಿ ಮುಖವಾಡಗಳು ಮನಿ ಹೀಸ್ಟ್ನಲ್ಲಿ ಪ್ರತಿರೋಧ ಮತ್ತು ರಾಷ್ಟ್ರೀಯ ಹೆಮ್ಮೆಯ ಸಂಕೇತವಾಗಿ ಕಾರ್ಯನಿರ್ವಹಿಸುತ್ತವೆ. ಡಾಲಿಯು 20ನೇ ಶತಮಾನದ ಆರಂಭದಲ್ಲಿ ಅತಿವಾಸ್ತವಿಕತಾವಾದಿ ಚಳವಳಿಯ ಪ್ರಮುಖ ವ್ಯಕ್ತಿಯಾಗಿದ್ದರು.
8/ 8
ಎಲ್ಲಾ ಅತಿವಾಸ್ತವಿಕವಾದ ಕಲೆಯಂತೆ, ಡಾಲಿಯ ಕೆಲಸವು ಅಂತರ್ಗತವಾಗಿ ಬಂಡಾಯವಾಗಿತ್ತು.ನವ್ಯ ಸಾಹಿತ್ಯ ಸಿದ್ಧಾಂತದ ಚಳುವಳಿಯು ರೂಢಿಯನ್ನು ಅಡ್ಡಿಪಡಿಸಲು ಪ್ರಯತ್ನಿಸಿತ್ತು. ಮನಿ ಹೀಸ್ಟ್ನಲ್ಲಿ ದರೋಡೆಕೋರರು ಡಾಲಿ ಕ್ರಾಂತಿಯ ಸಂಕೇತವಾಗಿದೆ.