The Kerala Story: ಮೊದಲ ವಾರ 80 ಕೋಟಿ ಬಾಚಿದ ಕೇರಳ ಸ್ಟೋರಿ! ಬಜೆಟ್ ಎಷ್ಟು ಗೊತ್ತಾ?

The Kerala Story: ದಿ ಕೇರಳ ಸ್ಟೋರಿ ಸಿನಿಮಾ ಭರ್ಜರಿಯಾಗಿ ಕಲೆಕ್ಷನ್ ಮಾಡಿದ್ದು ಮೊದಲ ಏಳು ದಿನದಲ್ಲಿ ಈಗಾಗಲೇ 80 ಕೋಟಿ ಗಳಿಸಿದೆ. ಈ ಸಿನಿಮಾದ ಬಜೆಟ್ ಎಷ್ಟಿದೆ ಗೊತ್ತಾ?

First published:

  • 18

    The Kerala Story: ಮೊದಲ ವಾರ 80 ಕೋಟಿ ಬಾಚಿದ ಕೇರಳ ಸ್ಟೋರಿ! ಬಜೆಟ್ ಎಷ್ಟು ಗೊತ್ತಾ?

    ಭಾರೀ ವಿವಾದ ಮಧ್ಯೆಯೂ ದಿ ಕೇರಳ ಸ್ಟೋರಿ ಸಿನಿಮಾ ರಿಲೀಸ್ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ದೇಶಾದ್ಯಂತ ರಿಲೀಸ್ ಆಗಿರುವ ಸಿನಿಮಾ ಭಾರೀ ವಿರೋಧವನ್ನೂ ಮೆಚ್ಚುಗೆಯನ್ನೂ ಪಡೆದಿದೆ. ಆದರೆ ಎಷ್ಟೇ ಟೀಕೆ, ಟ್ರೋಲ್, ಚರ್ಚೆಯಾದರೂ ಸಿನಿಮಾದ ಬಾಕ್ಸ್ ಆಫೀಸ್ ರೇಸ್ ಮುಂದುವರಿದಿದೆ.

    MORE
    GALLERIES

  • 28

    The Kerala Story: ಮೊದಲ ವಾರ 80 ಕೋಟಿ ಬಾಚಿದ ಕೇರಳ ಸ್ಟೋರಿ! ಬಜೆಟ್ ಎಷ್ಟು ಗೊತ್ತಾ?

    ಸಿನಿಮಾದ ಕುರಿತು ಜನರು ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಬಹಳಷ್ಟು ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಲಾಭ ಗಳಿಸಲು ಪರದಾಡುತ್ತಿದ್ದು ದಿ ಕೇರಳ ಸ್ಟೋರಿ ಸುಲಭವಾಗಿ ಬಾಕ್ಸ್ ಆಫೀಸ್​ ರೇಸ್ ಮುಂದುವರಿಸಿದೆ.

    MORE
    GALLERIES

  • 38

    The Kerala Story: ಮೊದಲ ವಾರ 80 ಕೋಟಿ ಬಾಚಿದ ಕೇರಳ ಸ್ಟೋರಿ! ಬಜೆಟ್ ಎಷ್ಟು ಗೊತ್ತಾ?

    ಕೇರಳ ಸ್ಟೋರಿ ಮೊದಲ ವಾರದಲ್ಲಿ ಬರೋಬ್ಬರಿ 81.36 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸಿನಿಮಾ ರಿಲೀಸ್ ಆಗಿ ಒಂದೇ ವಾರದಲ್ಲಿ ಇಷ್ಟು ಗಳಿಸಿದ್ದು ಭರ್ಜರಿಯಾಗಿದೆ. ಇದು ಮೊದಲ ಏಳು ದಿನಗಳ ಗಳಿಕೆಯಾಗಿದೆ.

    MORE
    GALLERIES

  • 48

    The Kerala Story: ಮೊದಲ ವಾರ 80 ಕೋಟಿ ಬಾಚಿದ ಕೇರಳ ಸ್ಟೋರಿ! ಬಜೆಟ್ ಎಷ್ಟು ಗೊತ್ತಾ?

    ಈ ಸಿನಿಮಾ ದೊಡ್ಡ ಬಜೆಟ್​ನಲ್ಲಿ ನಿರ್ಮಾಣವಾಗಿದ್ದಲ್ಲ. 30 ಕೋಟಿ ರೂಪಾಯಿಯಲ್ಲಿ ರೆಡಿಯಾದ ಈ ಸಿನಿಮಾ 80 ಕೋಟಿ ರೂಪಾಯಿ ಗಳಿಸಿದ್ದು ನಿಜಕ್ಕೂ ಒಳ್ಳೆಯ ಕಲೆಕ್ಷನ್ ಎನ್ನುತ್ತಿದ್ದಾರೆ ನೆಟ್ಟಿಗರು.

    MORE
    GALLERIES

  • 58

    The Kerala Story: ಮೊದಲ ವಾರ 80 ಕೋಟಿ ಬಾಚಿದ ಕೇರಳ ಸ್ಟೋರಿ! ಬಜೆಟ್ ಎಷ್ಟು ಗೊತ್ತಾ?

    ಸಿನಿಮಾ ಶುಕ್ರವಾರ ರಿಲೀಸ್ ಆಗಿ 8 ಕೋಟಿ ಗಳಿಸಿದ್ದು, ಶನಿವಾರ 11.22 ಕೋಟಿ, ಭಾನುವಾರ 16.40 ಕೋಟಿ, ಸೋಮವಾರ 10.07 ಕೋಟಿ. ಮಂಗಳವಾರ 11.14 ಕೋಟಿ, ಬುಧವಾರ 12 ಕೋಟಿ, ಗುರುವಾರ 12.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

    MORE
    GALLERIES

  • 68

    The Kerala Story: ಮೊದಲ ವಾರ 80 ಕೋಟಿ ಬಾಚಿದ ಕೇರಳ ಸ್ಟೋರಿ! ಬಜೆಟ್ ಎಷ್ಟು ಗೊತ್ತಾ?

    ಈಗಾಗಲೇ ಸಿನಿಮಾ ಒಂದು ವಾರದಲ್ಲಿ 100 ಕೋಟಿಯ ಸಮೀಪ ತಲುಪಿದ್ದು ಎರಡನೇ ವಾರದ ವೇಳೆಗೆ 100 ಕೋಟಿ ದಾಟುವುದು ಫಿಕ್ಸ್ ಆಗಿದೆ. ಸಿನಿಮಾ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ 100 ಕೋಟಿ ಈಗಾಗಲೇ ಗಳಿಸಿದೆ. ಇದೇ ರೀತಿ ಸಿನಿಮಾ ಬಾಕ್ಸ್ ಆಫೀಸ್ ರೇಸ್ ಮುಂದುವರಿಸಿದರೆ ಕಾಶ್ಮೀರ್ ಫೈಲ್ಸ್ ಸಿನಿಮಾದ 200 ಕೋಟಿಯ ಮೈಲುಗಲ್ಲು ಬ್ರೇಕ್ ಆಗಲಿದೆ.

    MORE
    GALLERIES

  • 78

    The Kerala Story: ಮೊದಲ ವಾರ 80 ಕೋಟಿ ಬಾಚಿದ ಕೇರಳ ಸ್ಟೋರಿ! ಬಜೆಟ್ ಎಷ್ಟು ಗೊತ್ತಾ?

    ಸುದಿಪ್ತೋ ಸೆನ್ ನಿರ್ದೇಶನದ ದಿ ಕೇರಳ ಸ್ಟೋರಿ ಸಿನಿಮಾವನ್ನು ವಿಪುಲ್ ಅಮೃತ್​ಲಾಲ್ ಶಾ ಅವರು ನಿರ್ಮಿಸಿದ್ದಾರೆ. ಇದರಲ್ಲಿ ಬಾಲಿವುಡ್ ನಟಿ ಆದಾ ಶರ್ಮಾ ಪ್ರಮುಖ ಪಾತ್ರ ಮಾಡಿದ್ದಾರೆ. ಸಿನಿಮಾ ಮೇ5ರಂದು ಥಿಯೇಟರ್​ನಲ್ಲಿ ರಿಲೀಸ್ ಆಯಿತು. ಇದಕ್ಕೆ ಮುಸ್ಲಿಂ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

    MORE
    GALLERIES

  • 88

    The Kerala Story: ಮೊದಲ ವಾರ 80 ಕೋಟಿ ಬಾಚಿದ ಕೇರಳ ಸ್ಟೋರಿ! ಬಜೆಟ್ ಎಷ್ಟು ಗೊತ್ತಾ?

    ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಈ ಸಿನಿಮಾವನ್ನು ನಿಷೇಧಿಸಲಾಗಿದೆ. ಆದರೆ ಉತ್ತರಪ್ರದೇಶದಂತಹ ರಾಜ್ಯಗಳಲ್ಲಿ ಸಿನಿಮಾವನ್ನು ಟ್ಯಾಕ್ಸ್ ಫ್ರೀ ಮಾಡಲಾಗಿದೆ.

    MORE
    GALLERIES