ಒಂದು ತಿಂಗಳ ಹಿಂದೆ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಕೇರಳದಲ್ಲಿ ಹಲವು ಪ್ರತಿಭಟನೆಗಳು ನಡೆದಿದ್ದವು. ಸಿನಿಮಾವನ್ನು ಸುದಿಪ್ಟೋ ಸೆನ್ ನಿರ್ದೇಶಿಸಿದ್ದಾರೆ. ಇದನ್ನು ವಿಪುಲ್ ಶಾ ಅವರು ನಿರ್ಮಿಸಿದ್ದಾರೆ. ಕೇರಳದ ಉತ್ತರ ಭಾಗದಿಂದ 2016ರಲ್ಲಿ 21 ಜನ ನಾಪತ್ತೆಯಾದ ಪ್ರಕರಣದ ಮೇಲೆ ಈ ಸಿನಿಮಾ ಬೆಳಕು ಚೆಲ್ಲುತ್ತದೆ. ಇವರು ಇಸ್ಲಾಮಿಕ್ ಸ್ಟೇಟ್ ಪ್ರಭಾವ ಇರುವಂತಹ ಸಿರಿಯಾ ಹಾಗೂ ಅಫ್ಘಾನಿಸ್ತಾನದಲ್ಲಿ ಐಸಿಸ್ ಸೇರಿಕೊಂಡರು ಎನ್ನಲಾಗಿದೆ.
ಈ ಸಿನಿಮಾ ಸುಳ್ಳಿನ ಕಂತೆ. ಇದರಲ್ಲಿ 32 ಸಾವಿರ ಮಹಿಳೆಯರನ್ನು ಮತಾಂತರಿಸಲಾಗಿದೆ ಹಾಗೂ ಇಸ್ಲಾಮಿಕ್ ಸ್ಟೇಟ್ ಅಧಿಕಾರದ ಪ್ರದೇಶಗಳಿಗೆ ಕಳುಹಿಸಲಾಗಿದೆ ಎನ್ನಲಾಗಿದೆ. ಟ್ರೈಲರ್ನಲ್ಲಿ ಈ ಸಿನಿಮಾ ಕುರಿತು ಬೇಕಾದಷ್ಟು ಮಾಹಿತಿ ರಿವೀಲ್ ಆಗಿದೆ. ಇದು ರಾಜ್ಯದ ಖ್ಯಾತಿಗೆ ಚ್ಯುತಿ ತರಲು ಮಾಡಲಾಗಿದೆ. ಸಮುದಾಯವನ್ನು ಅವಮಾನಿಸಲು ಉದ್ದೇಶಿಸಲಾಗಿದೆ. ಇದರ ಹಿಂದೆ ಸಂಘ ಪರಿವಾರದ ಕೈವಾಡವಿದೆ ಎಂದು ಪ್ರತಿಪಕ್ಷ ನಾಯಕ ವಿ.ಡಿ. ಸತೀಶನ್ ಆರೋಪಿಸಿದ್ದಾರೆ.