ದಿ ಕೇರಳ ಸ್ಟೋರಿ ಚಿತ್ರದಲ್ಲಿ ಶಾಲಿನಿ ಉನ್ನಿಕೃಷ್ಣನ್ ಪಾತ್ರವನ್ನು ಅದಾ ಶರ್ಮಾ ನಿರ್ವಹಿಸಿದ್ದಾರೆ. ಅವರು ಚಿತ್ರದ ನಾಯಕ ನಟಿ. ಅದಾ ಶರ್ಮಾ ಚಿತ್ರರಂಗಕ್ಕೆ ಬಂದು 15 ವರ್ಷಗಳಾಗಿವೆ. ಅವರ ಮೊದಲ ಚಿತ್ರ 1920 ಈ ಸಿನಿಮಾ ನಟನೆಯನ್ನು ಜನ ಮೆಚ್ಚಿಕೊಂಡಿದ್ದಾರೆ. ಈ ಚಿತ್ರದ ನಂತರ, ಹಸೀ ತೋ ಫಾಸಿ, ಫಿರ್, ಕಮಾಂಡೋ 2, ಸೆಲ್ಫಿ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದರು. ಸೌತ್ ಸಿನಿಮಾಗಳಲ್ಲಿ ಕೆಲಸ ಮಾಡಿದ ನಟಿಗೆ ಕೇರಳ ಸ್ಟೋರಿ ಒಳ್ಳೆ ಹೆಸರು ತಂದುಕೊಟ್ಟಿದೆ.
ಯೋಗಿತಾ ಬಿಹಾನಿ 'ದಿ ಕೇರಳ ಸ್ಟೋರಿ' ಚಿತ್ರದಲ್ಲಿ ನಿಮಾಹ್ ಪಾತ್ರದಲ್ಲಿ ನಟಿಸಿದ್ದಾರೆ. ಸಖತ್ ಅಭಿನಯ ಮಾಡಿದ್ದಾರೆ. 27 ವರ್ಷದ ಯೋಗಿತಾ, ಬಿಹಾನಿ ಕುಟುಂಬಕ್ಕೆ ಸೇರಿದವರು, ಅವರು ದೆಹಲಿಯಲ್ಲಿ ಜನಿಸಿದರು. ಏಕ್ತಾ ಕಪೂರ್ ಅವರ ಟಿವಿ ಶೋ 'ದಿಲ್ ಹಿ ತೋ ಹೈ' ಮೂಲಕ ಜನಪ್ರಿಯರಾದ್ರು. ಕರಣ್ ಕುಂದ್ರಾ ಎದುರು ನಾಯಕಿಯಾಗಿ ನಟಿಸಿದರು. ಇದಾದ ನಂತರ ‘ಕವಚ’ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. 'ವಿಕ್ರಮ್ ವೇದ' ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟ ನಟಿ, ಇದೀಗ 'ದಿ ಕೇರಳ ಸ್ಟೋರಿ' ಮೂಲಕ ಸುದ್ದಿಯಲ್ಲಿದ್ದಾರೆ.
'ದಿ ಕೇರಳ ಸ್ಟೋರಿ'ಯಲ್ಲಿ ಗೀತಾಂಜಲಿ ಪಾತ್ರದಲ್ಲಿ ನಟಿಸಿರುವ ಸಿದ್ಧಿ ಇದ್ನಾನಿ ಸೌತ್ ಇಂಡಸ್ಟ್ರಿಯಲ್ಲಿ ಖ್ಯಾತ ನಟಿಯಾಗಿ ಜನಪ್ರಿಯರಾಗಿದ್ದಾರೆ. ತನ್ನ ಗ್ಲಾಮರಸ್ ಚಿತ್ರಗಳಿಂದ ಸುದ್ದಿಯಾಗಿದ್ದಾರೆ. ಸಿದ್ಧಿ 2018 ರಲ್ಲಿ 'ಜಂಬ ಲಕಿಡಿ ಪಂಬ' ಚಿತ್ರದ ಮೂಲಕ ಸೌತ್ ಇಂಡಸ್ಟ್ರಿಗೆ ಕಾಲಿಟ್ಟರು. ಇಂಡಸ್ಟ್ರಿಯಲ್ಲಿ ಡಿಂಪಲ್ ಕ್ವೀನ್ ಎಂಬ ಹೆಸರಿನಿಂದಲೂ ಫೇಮಸ್ ಆಗಿದ್ದಾರೆ
‘ದಿ ಕೇರಳ ಸ್ಟೋರಿ’ಯಲ್ಲಿ ಸೋನಿಯಾ ಬಾಲಾನಿ, ಆಸಿಫಾ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಅವರದ್ದು ನೆಗೆಟಿವ್ ಪಾತ್ರವಾಗಿದೆ. ಹಿಂದಿ ಟಿವಿ ಶೋನ 'ಡಿಟೆಕ್ಟಿವ್ ದೀದಿ' ಎಂದು ಸೋನಿಯಾ ಪ್ರಸಿದ್ಧರಾಗಿದ್ದರು. ಸೀರಿಯಲ್ಗಳಲ್ಲಿಯೂ ನಟಿಸಿದ್ದಾರೆ. ಆಗ್ರಾದ ನಿವಾಸಿಯಾಗಿರುವ ಸೋನಿಯಾ ಟ್ರೆಂಡ್ ಡ್ಯಾನ್ಸರ್ ಕೂಡ. ಟಿವಿಯ ಹೊರತಾಗಿ, ಅವರು ಹಲವಾರು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. 2016ರಲ್ಲಿ ಮೊದಲ ಚಿತ್ರ ತುಮ್ ಬಿನ್ ಹೈ ತೆರೆಕಂಡಿತ್ತು. ಎರಡನೇ ಚಿತ್ರ ಬಜಾರ್ ಆಗಿದ್ದು, ಕೇರಳ ಸ್ಟೋರಿ ಸೋನಿಯಾ ಅವರ ಮೂರನೇ ಸಿನಿಮಾ ಆಗಿದೆ.