ದಿ ಕೇರಳ ಸ್ಟೋರಿ ಮೊದಲ ದಿನದಲ್ಲಿ ವಿಶ್ವದಾದ್ಯಂತ ರೂ. 8 ಕೋಟಿ ಸಂಗ್ರಹಿಸಿದೆ. ಎರಡನೇ ದಿನ ರೂ. 11.22 ಕೋಟಿ, ಮೂರನೇ ದಿನ ರೂ. 16.40 ಕೋಟಿ, ನಾಲ್ಕನೇ ದಿನ ರೂ. 10.07 ಕೋಟಿ ಗಳಿಸಿದೆ. ಒಟ್ಟಾರೆ ಈ ಸಿನಿಮಾ ರೂ. 45.72 ಕೋಟಿ ಕಲೆಕ್ಷನ್ ಮಾಡಿದೆ ಎಂದು ಬಾಲಿವುಡ್ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಬಹಿರಂಗಪಡಿಸಿದ್ದಾರೆ.