The Kerala Story: ಕೇರಳ ಸ್ಟೋರಿ 4ನೇ ದಿನ ಗಳಿಸಿದ್ದೆಷ್ಟು? ವಿರೋಧದ ನಡುವೆಯೂ ಭರ್ಜರಿ ಕಲೆಕ್ಷನ್

The Kerala Story 4 Days Box Office Collections: ‘ದಿ ಕೇರಳ ಸ್ಟೋರಿ’ ಸಿನಿಮಾ ದೇಶಾದ್ಯಂತ ಸಂಚಲನ ಮೂಡಿಸುತ್ತಿದೆ. ಕೇರಳದ ನೈಜ ಘಟನೆಗಳನ್ನು ಆಧರಿಸಿದ ಈ ಚಿತ್ರವು ಬಾಕ್ಸ್ ಆಫೀಸ್​ನಲ್ಲಿ ಕಮರ್ಷಿಯಲ್ ಸಕ್ಸಸ್ ಆಗಿ ಹೊರಹೊಮ್ಮಿದೆ. ಒಂದು ಕಡೆ ಹೊಗಳಿಕೆಯ ಜೊತೆಗೆ ಇನ್ನೊಂದು ಕಡೆ ಟೀಕೆಯೂ ವ್ಯಕ್ತವಾಗುತ್ತಿದೆ. ಈ ಸಿನಿಮಾ 4ನೇ ದಿನವೂ ಬಾಕ್ಸ್ ಆಫೀಸ್​ ಓಟ ಮುಂದುವರಿಸಿದೆ.

First published:

  • 17

    The Kerala Story: ಕೇರಳ ಸ್ಟೋರಿ 4ನೇ ದಿನ ಗಳಿಸಿದ್ದೆಷ್ಟು? ವಿರೋಧದ ನಡುವೆಯೂ ಭರ್ಜರಿ ಕಲೆಕ್ಷನ್

    ಕಳೆದ ಕೆಲವು ವರ್ಷಗಳಿಂದ ಬಾಲಿವುಡ್‌ನಲ್ಲಿ ನೈಜ ಘಟನೆಗಳನ್ನು ಆಧರಿಸಿ ಸಿನಿಮಾಗಳು ತಯಾರಾಗುತ್ತಿವೆ. ಅದರಲ್ಲಿ ಕೆಲವು ಚಿತ್ರಗಳು ವಿವಾದಕ್ಕೆ ಕೇರಾಫ್ ಅಡ್ರೆಸ್ ಆಗಿವೆ. ಕಳೆದ ವರ್ಷ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಸಂಚಲನ ಮೂಡಿಸಿತ್ತು. ಈ ಸಿನಿಮಾದ ಬಗ್ಗೆ ಕೆಲವು ವಿವಾದಗಳು ಎದ್ದರೂ ದೊಡ್ಡ ಯಶಸ್ಸು ಕಂಡಿತ್ತು.

    MORE
    GALLERIES

  • 27

    The Kerala Story: ಕೇರಳ ಸ್ಟೋರಿ 4ನೇ ದಿನ ಗಳಿಸಿದ್ದೆಷ್ಟು? ವಿರೋಧದ ನಡುವೆಯೂ ಭರ್ಜರಿ ಕಲೆಕ್ಷನ್

    ಇತ್ತೀಚೆಗಷ್ಟೇ ಈ ವರ್ಗದ ಮತ್ತೊಂದು ಸಿನಿಮಾ ‘ದಿ ಕೇರಳ ಸ್ಟೋರಿ’ಈಗ ಚಿತ್ರರಂಗದಲ್ಲಿ ಹೈಲೈಟ್ ಆಗಿದೆ. ಸಿನಿಮಾ ಕೇರಳದ ಹಲವೆಡೆ ವಿರೋಧಿಸಲ್ಪಟ್ಟರೂ ಕೊನೆಗೂ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಆಗಿದೆ. ಈ ಸಿನಿಮಾ ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ.

    MORE
    GALLERIES

  • 37

    The Kerala Story: ಕೇರಳ ಸ್ಟೋರಿ 4ನೇ ದಿನ ಗಳಿಸಿದ್ದೆಷ್ಟು? ವಿರೋಧದ ನಡುವೆಯೂ ಭರ್ಜರಿ ಕಲೆಕ್ಷನ್

    ಸದ್ಯ ‘ದಿ ಕೇರಳ ಸ್ಟೋರಿ’ ಸಿನಿಮಾ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ಲವ್ ಜಿಹಾದ್ ಹೆಸರಿನಲ್ಲಿ 32 ಸಾವಿರಕ್ಕೂ ಹೆಚ್ಚು ಅಮಾಯಕ ಹಿಂದೂ ಮತ್ತು ಕ್ರೈಸ್ತ ಯುವತಿಯರನ್ನು ಇಸ್ಲಾಂಗೆ ಮತಾಂತರಿಸಿ ಐಸಿಸ್ ಶಿಬಿರಗಳಿಗೆ ಕಳುಹಿಸಿ ದೇಶವಿರೋಧಿಗಳನ್ನಾಗಿ ಪರಿವರ್ತಿಸಿದ ಕಥೆ ಇದು ಎಂದು ಟ್ರೈಲರ್​​ನಲ್ಲಿ ಹೇಳಲಾಗಿದೆ.

    MORE
    GALLERIES

  • 47

    The Kerala Story: ಕೇರಳ ಸ್ಟೋರಿ 4ನೇ ದಿನ ಗಳಿಸಿದ್ದೆಷ್ಟು? ವಿರೋಧದ ನಡುವೆಯೂ ಭರ್ಜರಿ ಕಲೆಕ್ಷನ್

    ಒಂದಷ್ಟು ಜನ ಕೇರಳದ ಸ್ಟೋರಿಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಕೇರಳದಲ್ಲಿ ಇಂತಹ ಘಟನೆಗಳು ನಡೆದಿದ್ದರೂ 32 ಸಾವಿರ ಯುವತಿಯರು ನಾಪತ್ತೆಯಾಗಿಲ್ಲ ಎನ್ನಲಾಗಿದೆ. ಇನ್ನೊಂದೆಡೆ ‘ದಿ ಕೇರಳ ಸ್ಟೋರಿ’ಯಲ್ಲಿರುವಂತೆಯೇ ಚಿತ್ರೀಕರಿಸಲಾಗಿದೆ ಎಂದು ಪ್ರಧಾನಿ ಸೇರಿದಂತೆ ಹಲವು ನಾಯಕರು ಈ ಸಿನಿಮಾವನ್ನು ಪ್ರಚಾರ ಮಾಡುತ್ತಿದ್ದಾರೆ.

    MORE
    GALLERIES

  • 57

    The Kerala Story: ಕೇರಳ ಸ್ಟೋರಿ 4ನೇ ದಿನ ಗಳಿಸಿದ್ದೆಷ್ಟು? ವಿರೋಧದ ನಡುವೆಯೂ ಭರ್ಜರಿ ಕಲೆಕ್ಷನ್

    ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವು ಗುಂಪುಗಳು ಈ ಸಿನಿಮಾವನ್ನು ವಿರೋಧಿಸುತ್ತಿದ್ದರೆ, ಇನ್ನು ಕೆಲವು ಗುಂಪುಗಳು ನಿರ್ದೇಶಕರನ್ನು ಕೊಂಡಾಡುತ್ತಿವೆ. ಕೇರಳದಂತಹ ರಾಜ್ಯಗಳು ಈ ಚಿತ್ರವು ಶಾಂತಿ ಮತ್ತು ಭದ್ರತೆಗೆ ಭಂಗ ತರುತ್ತದೆ ಎಂದು ನಿಷೇಧಿಸಿದೆ.

    MORE
    GALLERIES

  • 67

    The Kerala Story: ಕೇರಳ ಸ್ಟೋರಿ 4ನೇ ದಿನ ಗಳಿಸಿದ್ದೆಷ್ಟು? ವಿರೋಧದ ನಡುವೆಯೂ ಭರ್ಜರಿ ಕಲೆಕ್ಷನ್

    ಈ ಚಲನಚಿತ್ರವು ತನ್ನ ಮೊದಲ ದಿನದಲ್ಲಿ ವಿಶ್ವದಾದ್ಯಂತ ರೂ. 8 ಕೋಟಿ ಸಂಗ್ರಹಿಸಿದೆ. ಎರಡನೇ ದಿನ ರೂ. 11.22 ಕೋಟಿ, ಮೂರನೇ ದಿನ ರೂ. 16.40 ಕೋಟಿ, ನಾಲ್ಕನೇ ದಿನ ರೂ. 10.07 ಕೋಟಿ ಗಳಿಸಿದೆ. ಒಟ್ಟಾರೆ ಈ ಸಿನಿಮಾ ರೂ. 45.72 ಕೋಟಿ ಕಲೆಕ್ಷನ್ ಮಾಡಿದೆ ಎಂದು ಬಾಲಿವುಡ್ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಬಹಿರಂಗಪಡಿಸಿದ್ದಾರೆ.

    MORE
    GALLERIES

  • 77

    The Kerala Story: ಕೇರಳ ಸ್ಟೋರಿ 4ನೇ ದಿನ ಗಳಿಸಿದ್ದೆಷ್ಟು? ವಿರೋಧದ ನಡುವೆಯೂ ಭರ್ಜರಿ ಕಲೆಕ್ಷನ್

    ಕೇರಳ ಸ್ಟೋರಿ ಸಿನಿಮಾದ ಮೇಲೆ ಕೇರಳದ ಆಡಳಿತಾರೂಢ ಕಮ್ಯುನಿಸ್ಟ್ ಸರ್ಕಾರ ಸೇರಿದಂತೆ ವಿರೋಧ ಪಕ್ಷ ಕಾಂಗ್ರೆಸ್ ಪಕ್ಷ ಕೂಡಾ ವಿರೋಧ ವ್ಯಕ್ತಪಡಿಸಿದೆ. ಇದು ಕಟ್ಟುಕಥೆ ಎಂದು ಚಿತ್ರದ ನಿರ್ಮಾಪಕರನ್ನು ನಿಂದಿಸುತ್ತಿವೆ. ಇದು ನಮ್ಮ ಕೇರಳದ ಕಥೆ ಅಲ್ಲ ಎಂದಿದ್ದಾರೆ.

    MORE
    GALLERIES