The Kashmir Files: 'ಪಠಾಣ್'ಗೆ ಸೆಡ್ಡು ಹೊಡೆಯಲು ಮತ್ತೆ ಥಿಯೇಟರ್ ನಲ್ಲಿ ಬರ್ತಿದೆ 'ದಿ ಕಾಶ್ಮೀರಿ ಫೈಲ್ಸ್'!
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ದಿ ಕಾಶ್ಮೀರ್ ಫೈಲ್ಸ್ ಮತ್ತೆ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಪಠಾಣ್ಗೆ ಸೆಡ್ಡು ಹೊಡೆಯಲು ಮತ್ತೆ ರೀ ರಿಲೀಸ್ ಮಾಡ್ತಾ ಇದ್ದಾರೆ ಎಂದು ಹಲವರು ಕೇಳ್ತಾ ಇದ್ದಾರೆ.
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಹಿಟ್ ಆಗಿತ್ತು. ಈ ಚಿತ್ರದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ತೋರಿಸಲಾಗಿತ್ತು.
2/ 8
ಈ ಸಿನಿಮಾ 2022ರ ಮಾರ್ಚ್ 11 ರಂದು ರಿಲೀಸ್ ಆಗಿತ್ತು. ರಿಲೀಸ್ ಆದಾಗ ಸಿನಿಮಾ ಸರಿ ಇಲ್ಲ ಎಂದು ಕೆಲವರು ವದಂತಿ ಹಬ್ಬಿಸಿದ್ರು. ಆದ್ರೆ, ಸಿನಿಮಾ ಸೂಪರ್ ಹಿಟ್ ಆಗಿ ಪ್ರದರ್ಶನ ಕಂಡಿತ್ತು. ಜನ ಮೆಚ್ಚಿಕೊಂಡಿದ್ರು.
3/ 8
ವಿವೇಕ್ ಅಗ್ನಿಹೋತ್ರಿ ಅವರು ನಿರ್ದೇಶನವನ್ನು ಮೆಚ್ಚಿಕೊಂಡಿದ್ರು. ಹಾಕಿದ ಬಂಡವಾಳಕ್ಕಿಂತ ಭಾರೀ ಹೆಚ್ಚು ಲಾಭ ಗಳಿಸಿತ್ತು. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು.
4/ 8
1990ರ ದಶಕದಲ್ಲಿ ಕಾಶ್ಮೀರ್ ಕಣಿವೆಯಲ್ಲಿ ಹಿಂದೂ ಪಂಡಿತರ ಮೇಲೆ ನಡೆದ ದೌರ್ಜನ್ಯದ ಸತ್ಯ ಸಂಗತಿಗಳನ್ನೆ ನಾನು ಚಿತ್ರದಲ್ಲಿ ಬಿಂಬಿಸಿದ್ದೇನೆ ಹೊರತು ಅಲ್ಲಿ ನಾನು ಎಲ್ಲೂ ಮುಸ್ಲಿಂ ಅಥವಾ ಪಾಕಿಸ್ತಾನ್ , ಪಾಕಿಸ್ತಾನಿ ಎಂದು ಪದ ಕೂಡ ಬಳಸಿಲ್ಲ ಎಂದು ವಿವೇಕ್ ಅಗ್ನಿಹೋತ್ರಿ ಅವರು ಹೇಳಿದ್ದರು.
5/ 8
ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಜನವರಿ 19ರಂದು ರೀ ರಿಲೀಸ್ ಮಾಡಲಾಗುತ್ತಿದೆ. ಈ ಬಗ್ಗೆ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹಾಗೂ ಅವರ ಪತ್ನಿ, ನಟಿ ಪಲ್ಲವಿ ಜೋಶಿ ಮಾಹಿತಿ ಹಂಚಿಕೊಂಡಿದ್ದಾರೆ.
6/ 8
ಅಲ್ಲದೇ ದಿ ಕಾಶ್ಮೀರ್ ಫೈಲ್ಸ್ ಮತ್ತೆ ರಿಲೀಸ್ ಆಗ್ತಾ ಇರೋದಕ್ಕೆ ಪಠಾಣ್ ಗೆ ಸೆಡ್ಡು ಹೊಡೆಯಲು ಬರ್ತಿದೆ ಎಂದು ಕೆಲವರು ಹೇಳ್ತಾ ಇದ್ದಾರೆ. ಶಾರುಖ್ ಖಾನ್ ಚಿತ್ರಕ್ಕೆ ಸ್ಪರ್ಧೆ ನೀಡುತ್ತಾ ನೋಡಬೇಕು.
7/ 8
ಇದೇ ತಿಂಗಳು ಜನವರಿ 25ರಂದು ಪಠಾಣ್ ಸಿನಿಮಾ ರಿಲೀಸ್ ಆಗಲಿದೆ. ಶಾರುಖ್ ಖಾನ್ ಅವರ ಕಂಬ್ಯಾಕ್ ಸಿನಿಮಾ ಇದಾಗಿದ್ದು, ಅಭಿಮಾನಿಗಳು ಕಾಯ್ತಾ ಇದ್ದಾರೆ.
8/ 8
ಜನರ ಬೇಡಿಕೆ ಮೇರೆಗೆ ಈ ಸಿನಿಮಾ ಮತ್ತೆ ಚಿತ್ರಮಂದಿರಗಳಲ್ಲಿ ರಾರಾಜಿಸಲು ಸಿದ್ಧವಾಗಿದೆ. ಕಳೆದ ಬಾರಿ ಚಿತ್ರಮಂದಿರಗಳಲ್ಲಿ ನೋಡದವರು ಈ ಬಾರಿ ನೋಡಬಹುದು.