ಪ್ರಿಯಾಮಣಿ ಅವರು 2003ರಲ್ಲಿ ತೆಲುಗು ಚಿತ್ರ ಇವರೇ ಆಟಗಾಡು ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. 2007 ರ ತಮಿಳು ರೋಮ್ಯಾಂಟಿಕ್ ಸಿನಿಮಾ ಪರುತಿವೀರನ್‌ನಲ್ಲಿ ಮುತ್ತಜಗು ಎಂಬ ಹಳ್ಳಿ ಹುಡುಗಿಯ ಪಾತ್ರಕ್ಕಾಗಿ ಅವರು ವ್ಯಾಪಕ ಮೆಚ್ಚುಗೆ ಪಡೆದರು. ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ತಮಿಳಿನಲ್ಲಿ ಅತ್ಯುತ್ತಮ ನಟಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದರು.
ನವ ವಸಂತಂ ಸಿನಿಮಾದ ಚಿತ್ರೀಕರಣದ ವೇಳೆ ನಾನು ಮತ್ತು ತರುಣ್ ಪ್ರೀತಿಸುತ್ತಿದ್ದೇವೆ. ಮದುವೆಯಾಗುತ್ತಿದ್ದೇವೆ ಎಂಬ ಮಾತುಗಳು ಕೇಳಿ ಬಂದಿದ್ದವು. ತರುಣ್ ಅವರ ತಾಯಿ ರೋಜಾ ರಮಣಿ ಶೂಟಿಂಗ್ ಸ್ಥಳಕ್ಕೆ ಬಂದು ಭೇಟಿಯಾದರು. ನೀವಿಬ್ಬರೂ ಒಬ್ಬರನ್ನೊಬ್ಬರು ನಿಜವಾಗಿಯೂ ಪ್ರೀತಿಸುತ್ತೀರಾ ಎಂದು ಅವರು ಹೇಳಿದರು. ಇದು ನಿಜವಾಗಿದ್ದರೆ ನಿಮ್ಮ ಮದುವೆಗೆ ನನ್ನ ಅಭ್ಯಂತರವಿಲ್ಲ. ಏನಾದರೂ ಇದ್ದರೆ, ನನಗೆ ಧೈರ್ಯದಿಂದ ಹೇಳಿ ಎಂದಿದ್ದರು.