Shreya Dhanwanthary: ಬೀಚ್​ನಲ್ಲಿ ತುಂಡುಡುಗೆ ಅಲ್ಲ, ಸೀರೆ ಉಟ್ಟ ನಟಿಗೆ ಭೇಷ್ ಎಂದ ನೆಟ್ಟಿಗರು

Shreya Dhanwanthary Viral Photos: ನಟಿ ಶ್ರೇಯಾ ಧನ್ವಂತರಿ ಒಬ್ಬ ಸುಂದರ ನಟಿ ಮಾತ್ರವಲ್ಲ ಖ್ಯಾತ ರೂಪದರ್ಶಿ ಆಗಿಯೂ ಕೆಲಸ ಮಾಡುತ್ತಾರೆ. ಅವರು ಮುಖ್ಯವಾಗಿ ತೆಲುಗು ಉದ್ಯಮದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಹಿಂದಿ ಚಿತ್ರಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ಉತ್ತರ ಭಾರತದಲ್ಲಿ, ಮನೋಜ್ ಬಾಜಪೇಯಿ ಅವರ ದಿ ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್​ನಿಂದ ಶ್ರೇಯಾ ಧನ್ವಂತರಿ ಎಲ್ಲೆಡೆ ಖ್ಯಾತಿ ಪಡೆದರು. ಈ ಸಿರೀಸ್​ನಲ್ಲಿ ಅವರ ನಟನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ನಟನೆಯ ಹೊರತಾಗಿ, ನಟಿ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಂದಲೂ ಗಮನ ಸೆಳೆಯುತ್ತಾರೆ. ಅವರು ಇತ್ತೀಚೆಗೆ ತಮ್ಮ ಕೆಲವು ಸುಂದರವಾದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಬೀಚ್‌ನಲ್ಲಿ ಎಂಜಾಯ್ ಮಾಡುವುದನ್ನು ಕಾಣಬಹುದು.

First published: