The Family Man 2 ಖ್ಯಾತಿಯ ನಟಿ ಪ್ರಿಯಾಮಾಣಿ ಈ ಹಿಂದೆ ಬಿಕಿನಿ ತೊಟ್ಟು ವಿವಾದಕ್ಕೀಡಾಗಿದ್ದರು..! ನಟಿ ಪ್ರಿಯಾಮಣಿ ಅವರ ಹುಟ್ಟುಹಬ್ಬ ಇಂದು. ಅಲ್ಲದೆ ಪ್ರಿಯಾಮಣಿ ಅಭಿನಯದ ದ ಫ್ಯಾಮಿಲಿ ಮ್ಯಾನ್ ಸೀಸನ್ 2 ನಿನ್ನೆ ರಿಲೀಸ್ ಆಗಿದ್ದು, ಪ್ರಿಯಾಮಣಿ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಾಟ್ ಹಾಗೂ ಬೋಲ್ಡ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ ಪ್ರಿಯಾಮಣಿ ಈ ಹಿಂದೆ ಬಿಕಿನಿ ತೊಟ್ಟು ವಿವಾದಕ್ಕೀಡಾಗಿದ್ದರು. (ಚಿತ್ರಗಳು ಕೃಪೆ: ಪ್ರಿಯಾಮಣಿ ಇನ್ಸ್ಟಾಗ್ರಾಂ ಖಾತೆ)
1 / 14
ಪ್ರಿಯಾಮಣಿ ಸಿನಿಮಾಗಳಲ್ಲಿ ಹೆಚ್ಚಾಗಿ ಗ್ಲಾಮರಸ್ ಹಾಗೂ ಬೋಲ್ಡ್ ಪಾತ್ರಗಳಲ್ಲಿ ನಟಿಸಿಲ್ಲ. ಇಂತಹ ನಟಿ ಒಮ್ಮೆ ಹಾಟ್ ಲುಕ್ಸ್ನಲ್ಲಿ ಕಾಣಿಸಿಕೊಂಡು ಚರ್ಚೆಯ ವಿಷಯವಾಗಿದ್ದರು.
2 / 14
ಹೌದು, ಪ್ರಿಯಾಮಣಿ ತೆಲುಗು ಸಿನಿಮಾ ಒಂಧರಲ್ಲಿ ಬಿಕಿನಿ ತೊಟ್ಟು ದೃಶ್ಯವೊಂದರಲ್ಲಿ ಕಾಣಿಸಿಕೊಂಡಿದ್ದರು.
3 / 14
ಅದು ನಿತಿನ್ ನಾಯಕರಾಗಿ ನಟಿಸಿರುವ ದ್ರೋಣ ಸಿನಿಮಾ. ಈ ಚಿತ್ರದಲ್ಲಿ ಪ್ರಿಯಾಮಣಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರು.
4 / 14
2009ರಲ್ಲಿ ತೆರೆಕಂಡ ದ್ರೋಣ ಸಿನಿಮಾವನ್ನು ನಿರ್ಮಿಸಿದ್ದು ಡಿಎಸ್ ರಾವ್.
5 / 14
ಬಾಕ್ಸಾಫಿಸ್ನಲ್ಲಿ ಈ ಸಿನಿಮಾ ನೆಲ ಕಚ್ಚಿದರೂ ಪ್ರಿಯಾಮಣಿ ಅವರ ಹೆಸರು ಮಾತ್ರ ಸಿಕ್ಕಾಪಟ್ಟೆ ಸುದ್ದಿಯಲ್ಲಿತ್ತು.
6 / 14
ಕಾರಣ, ಪ್ರಿಯಾಮಣಿ ಹೆಚ್ಚಿನ ಸಂಭಾವನೆ ಪಡೆದು ಈ ಸಿನಿಮಾದಲ್ಲಿ ಬಿಕಿನಿ ತೊಟ್ಟು ಕಾಣಿಸಿಕೊಂಡಿದ್ದಾರೆ ಎಂದೆಲ್ಲ ಸುದ್ದಿ ಹಬ್ಬಿತ್ತು.
7 / 14
ಹಣಕ್ಕಾಗಿ ಪ್ರಿಯಾ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದೂ ಆರೋಪಿಸಲಾಗಿತ್ತು.
8 / 14
ಪ್ರಿಯಾಮಣಿ ಅವರ ಬಿಕಿನಿ ವಿವಾದಕ್ಕೆ ಸಂಬಂಧಿಸಿದಂತೆ ದ್ರೋಣ ಸಿನಿಮಾದ ನಿರ್ಮಾಪಕ ಸ್ಪಷ್ಟನೆ ನೀಡಿದ್ದಾರೆ.
9 / 14
ಟಾಲಿವುಡ್ ಸಿನಿಮಾಗಳ ವೆಬ್ ಸೈಟ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ವಿಷಯದ ಬಗ್ಗೆ ರಾವ್ ಅವರು ಮಾತನಾಡಿದ್ದಾರೆ.
10 / 14
ನಟಿ ಪ್ರಿಯಾಮಣಿ ಬಿಕಿನಿ ತೊಡಲು ಓಕೆ ಎಂದಿದ್ದು ಹಣಕ್ಕಾಗಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
11 / 14
ದ್ರೋಣ ಸಿನಿಮಾದಲ್ಲಿ ಪ್ರಿಯಾಮಣಿ ಅವರ ಮೇಲೆಯೇ ಒಂದು ಸಿಂಗಲ್ ಹಾಡನ್ನು ಮಾಡುವುದಾಗಿ ಹೇಳಿದಕ್ಕೆ ಅವರು ಬಿಕಿನಿ ತೊಡಲು ಓಕೆ ಮಾಡಿದ್ದು ಎಂದು ನಿರ್ಮಾಪಕ ರಾವ್ ಅವರು ತಿಳಿಸಿದ್ದಾರೆ.
12 / 14
ನಟಿ ಪ್ರಿಯಾಮಣಿ ಅಭಿನಯದ ದ ಫ್ಯಾಮಿಲಿ ಮ್ಯಾನ್ ಸೀಸನ್ 2 ವೆಬ್ ಸರಣಿ ರಿಲೀಸ್ ಆಗಿದೆ.
13 / 14
ನಟಿ ಪ್ರಿಯಾಮಣಿ ಪಾತ್ರಕ್ಕೆ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.
14 / 14
ಜೊತೆಗೆ ನಟಿ ಪ್ರಿಯಾಮಣಿ ಅವರ ಹುಟ್ಟುಹಬ್ಬವೂ ಇಂದು.
First published: June 04, 2021, 11:09 IST