ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ ಪ್ರಕರಣದ ಕಥೆ ಏನಾಯ್ತು?
Sharmila Mandre: ಬೆಂಗಳೂರಿನ ಸ್ಯಾಂಕಿ ರೋಡ್ನಲ್ಲಿರುವ ಆಬ್ಶಾಟ್ ಅಪಾರ್ಟ್ಮೆಂಟ್ ಒಂದರಲ್ಲಿ ಫ್ರೆಂಡ್ಸ್ ಆಯೋಜಿಸಿದ್ದ ಪಾರ್ಟಿಯಲ್ಲಿ ನಟಿ ಭಾಗವಹಿಸಿದ್ದರು. ಅಲ್ಲಿಂದ ಮರಳುವಾಗ ಆ್ಯಕ್ಸಿಡೆಂಟ್ ನಡೆದಿತ್ತು.
ಏಪ್ರಿಲ್ 4 ನಸುಕಿ ಜಾವ ಸ್ಯಾಂಡಲ್ವುಡ್ ನಟಿ ಶರ್ಮಿಳಾ ಮಾಂಡ್ರೆ ಚಲಾಯಿಸಿದ್ದ ಕಾರು ಅಪಘಾತವಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಮುಂದುವರೆಸುವುದಾಗಿ ತಿಳಿಸಿದ್ದರು. ಅಂದು ಏನಾಗಿತ್ತು?
2/ 15
ಅಂದು ಅಪಘಾತ ಬೆನ್ನಲ್ಲೇ ನಾನು ಯಾವುದೇ ಪಾರ್ಟಿಯಲ್ಲಿ ಭಾಗವಹಿಸಿಲ್ಲ. ಬದಲಾಗಿ ಜಾಲಿ ರೈಡ್ ಹೋದಾಗ ಅಪಘಾತವಾಗಿದೆ ಎನ್ನಲಾಗಿತ್ತು. ಆ ಬಳಿಕ ಔಷಧಿ ತರಲು ಹೊರಹೋಗಿದ್ದಾಗ ಆ್ಯಕ್ಸಿಡೆಂಟ್ ಸಂಭವಿಸಿದೆ ಎಂದು ನಟಿ ಹೇಳಿದ್ದರು.
3/ 15
ಬೆಂಗಳೂರಿನ ಸ್ಯಾಂಕಿ ರೋಡ್ನಲ್ಲಿರುವ ಆಬ್ಶಾಟ್ ಅಪಾರ್ಟ್ಮೆಂಟ್ ಒಂದರಲ್ಲಿ ಫ್ರೆಂಡ್ಸ್ ಆಯೋಜಿಸಿದ್ದ ಪಾರ್ಟಿಯಲ್ಲಿ ನಟಿ ಭಾಗವಹಿಸಿದ್ದರು. ಅಲ್ಲಿಂದ ಮರಳುವಾಗ ಆ್ಯಕ್ಸಿಡೆಂಟ್ ನಡೆದಿದೆ.
4/ 15
ಲಾಕ್ಡೌನ್ ಉಲ್ಲಂಘಿಸಿ 25ಕ್ಕೂ ಹೆಚ್ಚಿನ ಗೆಳೆಯರೊಂದಿಗೆ ಮೋಜು ಮಸ್ತಿಯಲ್ಲಿ ನಟಿ ತೊಡಗಿಸಿಕೊಂಡಿದ್ದಲ್ಲದೆ, ಎಮರ್ಜೆನ್ಸಿ ಪಾಸ್ ಇರುವ ಕಾರಿನಲ್ಲಿ ಪ್ರಯಾಣಿಸಿದ್ದರು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿತ್ತು.
5/ 15
ಆದರೆ ಈ ಎಮರ್ಜೆನ್ಸಿ ಪಾಸ್ ನಟಿಗೆ ಹೇಗೆ ಲಭಿಸಿತು ಎಂದು ಕೆದಕಿದಾಗ ಸಿಕ್ಕ ಉತ್ತರ ಈ ಪಾರ್ಟಿಯಲ್ಲಿ ಭಾಗವಹಿಸಿದ್ದ ರಾಜಕಾರಣಿಗಳ ಮಕ್ಕಳು ಸಹ ಈ ಪಾರ್ಟಿಯಲ್ಲಿದ್ದರು ಎಂಬ ಮಾಹಿತಿ. ಅವರ ಮೂಲಕವೇ ಐವರಿಗೆ ಪಾಸ್ ನೀಡಲಾಗಿತ್ತು ಎಂಬುದು ಇದರಿಂದ ಸ್ಪಷ್ಟವಾಗಿತ್ತು.
6/ 15
ಹಾಗೆಯೇ ಕಾರು ಅಪಘಾತವಾಗುವ ವೇಳೆ ವಾಹನದಲ್ಲಿ ಐದು ಮಂದಿ ಇದ್ದರು ಎನ್ನಲಾಗಿತ್ತು. ಮುಂಬದಿಯಲ್ಲಿದ್ದ ಲೊಕೇಶ್ ಹಾಗೂ ಶರ್ಮಿಳಾ ಮಾಂಡ್ರೆಗೆ ಗಾಯವಾಗಿದ್ದು, ಇವರನ್ನು ಆಸ್ಪತ್ರೆ ಸೇರಿಸಿ ಉಳಿದವರು ಗೆಳೆಯರ ಬೇರೊಂದು ಕಾರಿನಲ್ಲಿ ತೆರಳಿದ್ದರು ಎಂದು ಹೇಳಲಾಗಿತ್ತು.
7/ 15
ಆಸ್ಪತ್ರೆಗೆ ದಾಖಲಾದಾಗ ನೀಡಿದ ವಿವರದಲ್ಲಿಯೂ ಶರ್ಮಿಳಾ ಮತ್ತು ಗೆಳೆಯರು ಸುಳ್ಳು ಮಾಹಿತಿ ನೀಡಿದ್ದರು. ಕಾರು ಜಯನಗರದಲ್ಲಿ ಅಪಘಾತಕ್ಕೀಡಾಯಿತು ಎಂದು ಸುಳ್ಳು ಹೇಳಿದ್ದರು. ಆದರೆ ಅಫಘಾತ ಸಂಭವಿಸಿದ್ದು ಬೆಂಗಳೂರಿನ ವಸಂತ ನಗರ ಬಳಿಯ ರೈಲ್ವೆ ಪೋಲ್ ಬಳಿ.
8/ 15
ಇನ್ನು ಶರ್ಮಿಳಾ ಅವರ ಜೊತೆಗಿದ್ದ ಲೊಕೇಶ್ ಎನ್ನುವ ವ್ಯಕ್ತಿಯು ರಾಜಕಾರಣಿಗಳಿಗೆ ಹಾಗೂ ದೊಡ್ಡ ಉದ್ಯಮಿಗಳಿಗೆ ಆಪ್ತರಾಗಿದ್ದು, ಆರಂಭದಲ್ಲೇ ಕೇಸನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು.
9/ 15
ಇವೆಲ್ಲಕ್ಕಿಂತ ಮುಖ್ಯವಾಗಿ ಲಾಕ್ಡೌನ್ ಉಲ್ಲಂಘಿಸಿ ಅಪಾರ್ಟ್ಮೆಂಟ್ನಲ್ಲಿ ಭರ್ಜರಿ ಪಾರ್ಟಿ ಆಯೋಜಿಸಿದವರಲ್ಲಿ ಪ್ರಭಾವಿ ರಾಜಕರಾಣಿಗಳ ಮಕ್ಕಳೂ ಸಹ ಇದ್ದರೂ ಎಂಬ ಮಾತುಗಳು ಹರಿದಾಡಿದ್ದವು. ಇವರ ಮೂಲಕವೇ ಎಮರ್ಜೆನ್ಸಿ ಪಾಸ್ಗಳು ನಟಿಗೆ ಲಭಿಸಿದೆ ಎನ್ನಲಾಗಿತ್ತು.
10/ 15
ಅಲ್ಲದೆ ಕಾರಿನ ಮಾಲೀಕ ಥಾಮಸ್ ಇಲ್ಲಿ ಸಂಪೂರ್ಣ ಜವಾಬ್ಧಾರಿವಹಿಸಿಕೊಳ್ಳಲು ಮುಂದಾಗಿದ್ದು, ಈ ಮೂಲಕ ರಾಜಕಾರಣಿಗಳ ಮಕ್ಕಳು ಯಾರೆಂಬುದನ್ನು ಗೌಪ್ಯವಾಗಿಡಲು ಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.
11/ 15
ಹಾಗೆಯೇ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ವಯಂ ಪ್ರೇರಿತವಾಗಿ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 187, 134 ಬಿ, 279, 337ರ ಅಡಿ ಪ್ರಕರಣ ದಾಖಲಿಸಿದ್ದರು.
12/ 15
ಇನ್ನು ಅಪಘಾತದಿಂದ ಗಾಯಗೊಂಡಿದ್ದ ಶರ್ಮಿಳಾ ಮಾಂಡ್ರೆ ಚಿಕಿತ್ಸೆ ಬಳಿಕ ಠಾಣೆಗೆ ಹಾಜರಾಗುವುದಾಗಿ ತಿಳಿಸಿದ್ದರು. ಅಲ್ಲದೆ ಅವರ ವಿರುದ್ಧ ಲಾಕ್ಡೌನ್ ಉಲ್ಲಂಘನೆ ಸೇರಿದಂತೆ ವಿವಿಧ ಪ್ರಕರಣ ದಾಖಲಿಸುವುದಾಗಿ ಪೊಲೀಸರು ತಿಳಿಸಿದ್ದರು.
13/ 15
ಇದೀಗ ಈ ಪ್ರಕರಣ ಕಳೆದು ತಿಂಗಳು ಕಳೆದಿದೆ. ಆದರೆ ಅಪಘಾತಕ್ಕೆ ಸಂಬಂಧಿಸಿದಂತೆ ಯಾರು ತಪ್ಪಿತಸ್ಥ, ಲಾಕ್ಡೌನ್ ಉಲ್ಲಂಘನೆ ಮಾಡಿದ್ದು ಯಾರು, ಪಾರ್ಟಿಯಲ್ಲಿ ಭಾಗವಹಿಸಿದವರು ಯಾರೆಲ್ಲಾ ಎಂಬ ಮಾಹಿತಿ ಮಾತ್ರ ಇನ್ನೂ ಹೊರಬಿದ್ದಿಲ್ಲ.
14/ 15
ಹಾಗೆಯೇ ಈ ಪ್ರಕರಣದ ತನಿಖೆಯ ಕುರಿತಾದ ಯಾವುದೇ ಅಪ್ಡೇಟ್ಗಳು ಕೇಳಿ ಬರುತ್ತಿಲ್ಲ. ಇದೀಗ ಈ ಹಿಂದೆ ಹಬ್ಬಿದ್ದ ಊಹಾಪೋಹಗಳು ನಿಜವಾಗುತ್ತಿದೆ ಎನ್ನಲಾಗಿದೆ. ಏಕೆಂದರೆ ಕಾರ್ನಲ್ಲಿದ್ದ ಪ್ರಭಾವಿಗಳು ಪ್ರಕರಣವನ್ನು ಮುಚ್ಚಿ ಹಾಕಿದ್ದಾರಾ ಎಂಬ ಅನುಮಾನ ಹುಟ್ಟಿಕೊಂಡಿದೆ.
15/ 15
ದೇಶದ ಗಮನ ಸೆಳೆದ ಆ್ಯಕ್ಸಿಡೆಂಟ್ ಪ್ರಕರಣದ ತನಿಖೆ ಯಾವ ಮಟ್ಟದಲ್ಲಿದೆ. ಕಾರು ಅಪಘಾತದ ಬಗ್ಗೆ ನಟಿ ಶರ್ಮಿಳಾ ಮಾಂಡ್ರೆ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆಯೇ? ಕಾನೂನು ಉಲ್ಲಂಘಿಸಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆಯೇ ಎಂಬ ಪ್ರಶ್ನೆಗಳಿಗೆ ಮಾತ್ರ ಉತ್ತರ ದೊರಕಿಲ್ಲ.