ಹಿರಿಯ ನಟ ನರೇಶ್ ಅವರ ಮದುವೆ ಜನರಲ್ಲಿ ಹಾಟ್ ಟಾಪಿಕ್ ಆಗಿದೆ. ಅವರು ಈಗಾಗಲೇ ಮೂರು ಮದುವೆಯಾಗಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಈಗಾಗಲೇ ಮೂರನೇ ಪತ್ನಿ ಈ ವಿಚಾರವಾಗಿ ರಂಪಾಟ ಮಾಡಿದ್ದಾರೆ.
2/ 9
ಅವರ ವೈಯಕ್ತಿಕ ಜೀವನದಲ್ಲಿನ ಸಮಸ್ಯೆಗಳು ಹೊರಬರುತ್ತಿದ್ದಂತೆ, ಅವರಿಗೆ ಸಂಬಂಧಿಸಿದ ಸುದ್ದಿಗಳು ಟ್ರೆಂಡಿಂಗ್ನಲ್ಲಿದೆ. ಎಲ್ಲೆಡೆ ಜನರು ಅವರ ಮದುವೆಯ ಬಗ್ಗೆ ಮಾತನಾಡುತ್ತಿದ್ದಾರೆ.
3/ 9
ನರೇಶ್ ಈ ಹಿಂದೆ ಹಿರಿಯ ಸಿನಿಮಾಟೋಗ್ರಾಫರ್ ಶ್ರೀನು ಅವರ ಮಗಳನ್ನು ಮದುವೆಯಾಗಿದ್ದರು. ಇಬ್ಬರಿಗೂ ಒಬ್ಬ ಮಗನಿದ್ದಾನೆ. ಅವರ ಹೆಸರು ನವೀನ್ ವಿಜಯ್ ಕೃಷ್ಣ. ನವೀನ್ ವಿಜಯ್ ಕೃಷ್ಣ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಎರಡು ಮತ್ತು ಮೂರು ಚಿತ್ರಗಳಲ್ಲಿ ನಟಿಸಿದ್ದಾರೆ.
4/ 9
ಅದರ ನಂತರ, ನರೇಶ್ ಅವರು ಪ್ರಸಿದ್ಧ ಬರಹಗಾರ ದೇವುಲಪಲ್ಲಿ ಕೃಷ್ಣ ಶಾಸ್ತ್ರಿ ಅವರ ಮೊಮ್ಮಗಳು ರೇಖಾ ಸುಪ್ರಿಯಾ ಅವರನ್ನು ವಿವಾಹವಾದರು. ಇಬ್ಬರಿಗೂ ಗಂಡು ಮಗು ಜನಿಸಿದ ನಂತರ ನರೇಶ್ ಆಕೆಯಿಂದ ದೂರವಾಗಿದ್ದಾರೆ.
5/ 9
ಇದಾದ ನಂತರ ನರೇಶ್ ರಮ್ಯಾ ರಘಪತಿಯನ್ನು ಮದುವೆಯಾದರು. ನರೇಶ್ ಅವರಿಗೆ ಇದು ಮೂರನೇ ಮದುವೆ. ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘಪತಿ ಅವರು ಮಾಜಿ ಕಾಂಗ್ರೆಸ್ ಸಚಿವ ರಘುವೀರಾ ರೆಡ್ಡಿ ಅವರ ಸಹೋದರನ ಮಗಳು. ಅವರಿಗೆ ಒಬ್ಬ ಮಗನೂ ಇದ್ದಾನೆ.
6/ 9
ಈ ಮಧ್ಯೆ, ನಟಿ ಪವಿತ್ರಾ ಲೋಕೇಶ್ ಜೊತೆ ನರೇಶ್ ಸಂಬಂಧದ ಬಗ್ಗೆ ಬಹಳ ಸುದ್ದಿಯಾಗುತ್ತಿದೆ, ಇನ್ನೊಂದೆಡೆ ರಮ್ಯಾ ರಘಪತಿ ವಿಚ್ಛೇದನ ನೀಡಲ್ಲ ಎಂದಿರುವುದು ಸದ್ಯ ದೊಡ್ಡ ಸುದ್ದಿಯಾಗಿದ್ದು. ಎಲ್ಲೆಡೆ ಅದೇ ಚರ್ಚೆಯಾಗಿದೆ.
7/ 9
ನರೇಶ್ ಮತ್ತು ಪವಿತ್ರಾ ಲೋಕೇಶ್ ಒಳ್ಳೆಯ ಸ್ನೇಹಿತರು ಎಂದು ಹೇಳುತ್ತಿದ್ದಾರೆ, ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರ ವಿರುದ್ಧ ಹಲವಾರು ಆರೋಪಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ ಮೈಸೂರಿನ ಹೋಟೆಲ್ ಬಳಿ ಮೊನ್ನೆ ಹೈಡ್ರಾಮವೇ ಆಗಿದೆ.
8/ 9
ನರೇಶ್ ಮತ್ತು ಪವಿತ್ರಾ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ನರೇಶ್ ಅವರ ಮೂರನೇ ಪತ್ನಿ ರಮ್ಯಾ ಅವರು ವಿಚ್ಛೇದನ ನೀಡದೆ ಮತ್ತೊಬ್ಬ ಮಹಿಳೆಯೊಂದಿಗೆ ಮದುವೆಯಾವುದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.
9/ 9
ಒಟ್ಟಾರೆಯಾಗಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಪ್ರಕರಣಕ್ಕೆ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆಯುತ್ತಿದ್ದು, ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.