ಮೀನಾ 3 ದಶಕಗಳಿಗೂ ಹೆಚ್ಚು ಕಾಲ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಜನಪ್ರಿಯ ನಾಯಕಿಯಾಗಿ ಮಿಂಚುತ್ತಿದ್ದಾರೆ. 6 ವರ್ಷವಿದ್ದಾಗಲೇ ಚಿತ್ರರಂಗ ಪ್ರವೇಶಿಸಿದ ಮೀನಾ ನಟಿಯಾಗಿ 40 ವರ್ಷ ಪೂರೈಸುತ್ತಿದ್ದಾರೆ. ಇದೇ ವೇಳೆ ತಮ್ಮ ಜೀವನದಲ್ಲಿ ಕೆಲವು ಸಂಗತಿಗಳ ಬಗ್ಗೆ ಮುಕ್ತ ಮನಸ್ಸಿನಿಂದ ನಟಿ ಮಾತಾಡಿದ್ದಾರೆ. ತಮಿಳು ಚಾನೆಲ್ ಸಿನಿ ಉಲಗಂನಲ್ಲಿ ನಟಿ ಸುಹಾಸಿನಿ ನಡೆಸಿಕೊಟ್ಟ ಚಾಟ್ ಶೋಗೆ ನಟಿ ಮೀನಾ ಅತಿಥಿಯಾಗಿ ಭಾಗವಹಿಸಿದ್ರು.