ಇನ್ನು ವಿಜಯ್ ಹಾಗೂ ವಿಜಯ್ ಸೇತುಪತಿ ಜುಗಲ್ಬಂಧಿ ಮಾಸ್ಟರ್ ಸಿನಿಮಾ ಈಗಾಗಲೇ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದು, ಕೊರೋನಾ ಕಾರಣದಿಂದ ಚಿತ್ರದ ರಿಲೀಸ್ ಡೇಟ್ ಮುಂದೂಡಲಾಗಿದೆ. ಇತ್ತ ಮಾಸ್ಟರ್ ಚಿತ್ರವನ್ನು ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಬಿಡುಗಡೆ ಮಾಡಲು ಅಮೆಜಾನ್ ಪ್ರೈಂ ಪ್ರಯತ್ನಪಟ್ಟರೂ, ಅತ್ತ ನಿರ್ಮಾಪಕರು ಇಳಯ ದಳಪತಿ ಅಭಿಮಾನಿಗಳಿಗೆ ನಿರಾಸೆ ಮಾಡುವುದಿಲ್ಲ. ಮಾಸ್ಟರ್ ಥಿಯೇಟರ್ನಲ್ಲೇ ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದಾರೆ.