Thalapathy 66: ಏನ್ ಗುರೂ ಕೋಟಿಗಳಿಗೆ ಬೆಲೆನೇ ಇಲ್ವಾ.. ವಿಜಯ್ ಸಂಭಾವನೆ ಕೇಳಿದ್ರೆ ತಲೆ ತಿರುಗಿ ಬೀಳ್ತೀರಾ!
ಭಾರತ ಚಿತ್ರರಂಗದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ತಮಿಳಿನ ನಟ ವಿಜಯ್ ಕೂಡ ಇದ್ದಾರೆ. ವಿಜಯ್ ಸಿನಿಮಾಗಳೆಂದರೆ ಅಲ್ಲಿ ಹಬ್ಬ. ಬೇರೆ ಭಾಷೆಗಳ ರಾಜ್ಯದಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ ವಿಜಯ್.
ಭಾರತ ಚಿತ್ರರಂಗದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ತಮಿಳಿನ ನಟ ವಿಜಯ್ ಕೂಡ ಇದ್ದಾರೆ. ವಿಜಯ್ ಸಿನಿಮಾಗಳೆಂದರೆ ಅಲ್ಲಿ ಹಬ್ಬ. ಬೇರೆ ಭಾಷೆಗಳ ರಾಜ್ಯದಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ ವಿಜಯ್.
2/ 7
ವಿಜಯ್ ಸಿನಿಮಾಗಳು ರಿಲೀಸ್ ಆದ ಕೆಲವೇ ದಿನಗಳಲ್ಲಿ ನೂರು-ಇನ್ನುರು ಕೋಟಿ ಗಳಿಕೆಯನ್ನು ಸುಲಭಕ್ಕೆ ಮಾಡಿಬಿಡುತ್ತದೆ. ಹೀಗಾಗಿ ಇವರ ಕಾಲ್ಶೀಟ್ಗಾಗಿ ನಿರ್ಮಾಕರು ಕಾಯುತ್ತಾ ಕುಳಿತಿರುತ್ತಾರೆ.
3/ 7
ಉದಾಹರಣಗೆ ಕಳೆದ ವರ್ಷ ಕೊರೋನಾ ಸಮಯದಲ್ಲಿ ಬಿಡುಗಡೆಯಾದ ವಿಜಯ್ ಅಭಿನಯದ ಮಾಸ್ಟರ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಶೇ.50ರಷ್ಟೇ ಸೀಟು ಭರ್ತಿಗೆ ಅವಕಾಶ ಇತ್ತು. ಹೀಗಿದ್ದರೂ ಮಾಸ್ಟರ್ ಸಿನಿಮಾ ನೂರಾರು ಕೋಟಿ ಗಳಿಸಿತ್ತು.
4/ 7
ಇದೀಗ ವಿಜಯ್ ಕೂಡ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ವಿಜಯ್ ಕೆಲವು ದಿನಗಳ ಹಿಂದಷ್ಟೆ ತಮ್ಮ 66ನೇ ಸಿನಿಮಾ ಒಪ್ಪಿಕೊಂಡಿದ್ದಾರೆ. ತೆಲುಗಿನಲ್ಲಿ ಕೆಲವು ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಲಿರುವ ಈ ಸಿನಿಮಾಕ್ಕೆ ದೊಡ್ಡ ಸಿನಿಮಾಗಳ ನಿರ್ಮಾಪಕ ದಿಲ್ ರಾಜು ಬಂಡವಾಳ ಹೂಡಲಿದ್ದಾರೆ.
5/ 7
'ಮಾಸ್ಟರ್', 'ಬೀಸ್ಟ್' ಸಿನಿಮಾಗಳಿಗೆ ಕ್ರಮವಾಗಿ 70, 80 ಕೋಟಿ ಸಂಭಾವನೆ ಪಡೆದಿದ್ದ ನಟ ವಿಜಯ್ ತಮ್ಮ 66ನೇ ಸಿನಿಮಾಕ್ಕೆ 100 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ.
6/ 7
ಮೂಲಗಳ ಪ್ರಕಾರ ಈ ಸಿನಿಮಾಕ್ಕೆ ವಿಜಯ್ ಬರೋಬ್ಬರಿ 120 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಿದ್ದಾರಂತೆ. ಆ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಭಾರತದ ನಟ ಎಂಬ ಖ್ಯಾತಿಯನ್ನು ವಿಜಯ್ ಪಡೆಯುತ್ತಿದ್ದಾರೆ.
7/ 7
ಒಟಿಟಿ ಹಾಗೂ ಮನೊರಂಜನಾ ಚಾನೆಲ್ ಎರಡೂ ಹೊಂದಿರುವ ಮೀಡಿಯಾ ಸಂಸ್ಥೆಯೊಂದು ಈ ಸಿನಿಮಾದ ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕು ಎರಡಕ್ಕೂ ಸೇರಿ 200 ಕೋಟಿ ಆಫರ್ ನೀಡಿದೆಯಂತೆ. ಆದರೆ ಒಪ್ಪಂದಕ್ಕೆ ದಿಲ್ ರಾಜು ಇನ್ನೂ ಸಹಿ ಹಾಕಿಲ್ಲ.