ದಕ್ಷಿಣದ ಸೂಪರ್ಸ್ಟಾರ್ ವಿಜಯ್ ಈ ದಿನಗಳಲ್ಲಿ ತಮ್ಮ ಮುಂಬರುವ ಚಿತ್ರ ವಾರಿಸು ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದರಲ್ಲಿ ಅವರು ರಶ್ಮಿಕಾ ಮಂದಣ್ಣ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಆದರೆ ಈಗ ನಟ 23 ವರ್ಷಗಳ ದಾಂಪತ್ಯದ ನಂತರ ಪತ್ನಿ ಸಂಗೀತಾಗೆ ವಿಚ್ಛೇದನೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
2/ 9
ತೆರೆಯ ಮೇಲೆ ಎಷ್ಟು ಚೆನ್ನಾಗಿ ನಟಿಸಿ ಜನರ ಮನ ಗೆಲ್ಲುತ್ತಾರೋ ಅದೇ ರೀತಿ ಸಂಗೀತಾ ಅವರನ್ನೂ ವಿಜಯ್ ಮೆಚ್ಚಿಸಿದ್ದಾರೆ. ಮೊದಲ ಭೇಟಿಯಲ್ಲಿಯೇ ಇಬ್ಬರೂ ಪರಸ್ಪರ ಹತ್ತಿರವಾಗಿದ್ದರು.
3/ 9
ಈ ಸೌತ್ ಜೋಡಿಯ ಮೊದಲ ಭೇಟಿ 1996 ರಲ್ಲಿ ನಡೆಯಿತು. ಸಂಗೀತಾ ಅವರು ವಿಜಯ್ ಅವರ ಕಟ್ಟಾ ಅಭಿಮಾನಿಯಾಗಿದ್ದರು.
4/ 9
ವಿಜಯ್ ಅಭಿಮಾನಿಯನ್ನು ಮದುವೆಯಾದ ಸುದ್ದಿ ಕೇಳಿದರೆ ವಿಚಿತ್ರ ಅನಿಸಬಹುದು. ಆದರೆ ಇದು ನಿಜ. ಸಂಗೀತಾ ಅವರು ಯಾವಾಗಲೂ ವಿಜಯ್ ಅವರ ಸಿನಿಮಾಗಳನ್ನು ಟಿವಿಯಲ್ಲಿ ಮತ್ತು ಥಿಯೇಟರ್ಗಳಲ್ಲಿ ನೋಡುತ್ತಿದ್ದರು.
5/ 9
ದಳಪತಿ ವಿಜಯ್ ಅವರ ಪೂವೆ ಉನಕ್ಕಾಗ ಸಿನಿಮಾ ರಿಲೀಸ್ ಆದ ಸಮಯವದು. ಅದರ ಮೂಲಕ ಸಂಗೀತಾ ಒಮ್ಮೆ ಪ್ರಭಾವಿತರಾದರು. ವಿಜಯ್ಗೆ ಶುಭಾಶಯ ತಿಳಿಸಲು ಅವರು ಅಮೆರಿಕಾದಿಂದ ನೇರವಾಗಿ ಚೆನ್ನೈಗೆ ಬಂದರು.
6/ 9
ಸಂಗೀತಾ ಅವರು ಪೂವೆ ಉನಕ್ಕಾಗ ಚಿತ್ರದಲ್ಲಿ ವಿಜಯ್ ಅವರ ಅದ್ಭುತ ಅಭಿನಯ ಮೆಚ್ಚಿದ್ದರು. ಅಮೆರಿಕಾದಿಂದ ಭಾರತಕ್ಕೆ ಪ್ರಯಾಣಿಸಿ ಬಂದು ನಟನನ್ನು ಮುಕ್ತವಾಗಿ ಹೊಗಳಿದರು. ನಂತರ ವಿಜಯ್ ತನ್ನ ಕಟ್ಟಾ ಅಭಿಮಾನಿ ಸಂಗೀತಾ ಅವರ ಪ್ರೀತಿಯಿಂದ ತುಂಬಾ ಪ್ರಭಾವಿತರಾದರು. ನಂತರ ತಮ್ಮ ಕುಟುಂಬಕ್ಕೆ ಸಂಗೀತಾರನ್ನು ಪರಿಚಯಿಸಿದರು.
7/ 9
ಕುಟುಂಬದಲ್ಲಿ ಎಲ್ಲರಿಗೂ ಸಂಗೀತಾ ಅವರ ಸ್ವಭಾವ ಇಷ್ಟವಾಯಿತು. ಅಂತೂ ಕ್ರಮೇಣ ಇಬ್ಬರೂ ಒಬ್ಬರಿಗೊಬ್ಬರು ಒಳ್ಳೆ ಸ್ನೇಹಿತರಾಗಿ ಅವರ ನಡುವೆ ಪ್ರೀತಿ ಅರಳಿತು. ಸಂಗೀತಾ ಮತ್ತು ವಿಜಯ್ ಆಗಸ್ಟ್ 25, 1999 ರಂದು ವಿವಾಹವಾದರು.
8/ 9
ವಿಜಯ್ ಶ್ರೀಲಂಕಾದಲ್ಲಿ ಜನಿಸಿದರು. ಆದರೆ ಅವರ ಕುಟುಂಬವು ಯುನೈಟೆಡ್ ಸ್ಟೇಟ್ಸ್ನಲ್ಲಿ ನೆಲೆಸಿದೆ.
9/ 9
ವಿಜಯ್ ಮತ್ತು ಸಂಗೀತಾ ಮದುವೆಯಾಗಿ 23 ವರ್ಷಗಳೇ ಕಳೆದಿವೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗ ಜೇಸನ್ ಮತ್ತು ಮಗಳು ದಿವ್ಯಾ. ಈ ಜೋಡಿ ತಮ್ಮ ಜೀವನದಲ್ಲಿ ಸಂತೋಷವಾಗಿದ್ದು, ವಿಚ್ಛೇದನದ ಸುದ್ದಿ ಕೇವಲ ವದಂತಿಯಾಗಿದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.