TThala Ajith: ವಿಶ್ವವಿಖ್ಯಾತ ಮಹಿಳಾ ಬೈಕರ್ ಮರಲ್ ಯಜರ್ಲೂ ಭೇಟಿಯಾದ ನಟ ತಾಲಾ ಅಜಿತ್
Thala Ajith Meets Maral Yazarloo : ತಾಲಾ ಅಜಿತ್ ತನ್ನದೇ ಆದ ನಟನೆಯ ಶೈಲಿಯಿಂದ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅಜಿತ್ ಕೇವಲ ಉತ್ತಮ ನಟ ಮಾತ್ರವಲ್ಲದೇ ಉತ್ಸಾಹಿ ಬೈಕರ್ ಸಹ ಹೌದು. ಅವರಿಗೆ ಬೈಕ್ನಲ್ಲಿ ಟ್ರಿಪ್ ಹೋಗುವುದೆಂದರೆ ಬಹಳ ಇಷ್ಟ. ಇತ್ತೀಚೆಗಷ್ಟೇ ಅವರ ಬೈಕ್ನಲ್ಲಿ ಸಿಕ್ಕಿಂ ಹೋಗಿ ಬಂದಿದ್ದರು, ಅವರ ಬಳಿ ವಿಭಿನ್ನವಾದ ಸ್ಪೋರ್ಟ್ಸ್ ಬೈಕ್ಗಳ ಸಂಗ್ರಹವಿದೆ. ಅಲ್ಲದೇ ಕಳೆದ ಕೆಲ ದಿನಗಳ ಹಿಂದೆ ತಾಲಾ ವಿಶ್ವದ ಅದ್ಭುತ ಬೈಕರ್ ಅನ್ನು ಭೇಟಿಯಾಗಿ ಸಲಹೆ ಪಡೆದಿದ್ದಾರೆ.
ನಟ ತಾಲಾ ಅಜಿತ್ ಉತ್ಸಾಹಿ ಬೈಕರ್ ಆಗಿದ್ದು, ಅವರು ವಿವಿಧ ಮಾದರಿಗಳಿಂದ ತುಂಬಿರುವ ಗ್ಯಾರೇಜ್ ಇಟ್ಟುಕೊಂಡಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ, ಅವರು ತನ್ನ ಸ್ಪೋರ್ಟ್ಸ್ ಬೈಕ್ಗಳಲ್ಲಿ ಟ್ರಿಪ್ ಹೋಗುತ್ತಾರೆ.
2/ 10
ಇತ್ತೀಚೆಗೆ, ಅಜಿತ್ ತನ್ನ ಅನುಭವಗಳನ್ನು ತಿಳಿದುಕೊಳ್ಳಲು ಮತ್ತು ಪ್ರಪಂಚದಾದ್ಯಂತದ ಅವರ ಮುಂದಿನ ಪ್ರವಾಸಗಳಿಗಾಗಿ ಸಲಹೆಗಳನ್ನು ಪಡೆಯಲು ವಿಶ್ವವಿಖ್ಯಾತ ಮಹಿಳಾ ಬೈಕರ್ ಮರಲ್ ಯಜರ್ಲೂ ಅವರನ್ನು ಭೇಟಿಯಾಗಿದ್ದಾರೆ.
3/ 10
ವರದಿಗಳ ಪ್ರಕಾರ, ಥಾಲಾ ಅಜಿತ್ ತನ್ನ ಬೈಕಿನಲ್ಲಿ ವಿಶ್ವ ಪ್ರವಾಸಕ್ಕೆ ಹೋಗಲು ಯೋಜಿಸುತ್ತಿರುವುದರಿಂದ ಅವರಿಗೆ ಅಗತ್ಯವಿರುವ ಎಲ್ಲ ಸಲಹೆಗಾಗಿ ಮರಲ್ ಅವರನ್ನು ಭೇಟಿಯಾಗಿದ್ದಾರೆ.
4/ 10
ಅಜಿತ್ ಮ್ಯಾನೇಜರ್ ಅಜಿತ್ ಮತ್ತು ಮರಾಲ್ ಅವರ ಫೋಟೋವನ್ನು ಹಂಚಿಕೊಂಡಿದ್ದು ಮರಲ್ ಯಜರ್ಲೂ ಜೊತೆ ಎಂದು ಬರೆದಿದ್ದಾರೆ.
5/ 10
ಮರಲ್ ಮೋಟಾರ್ ಸೈಕಲ್ನಲ್ಲಿ ಪ್ರಪಂಚದಾದ್ಯಂತ ಏಕಾಂಗಿಯಾಗಿ ಪ್ರಯಾಣಿಸಿದ್ದಾರೆ. ಅವರು 7 ಖಂಡಗಳು ಮತ್ತು 64 ದೇಶಗಳನ್ನು ಸುತ್ತಿದ್ದಾರೆ.
6/ 10
ಅಜಿತ್ ಆಕೆಯ ಅನುಭವಗಳನ್ನು ತಿಳಿದುಕೊಳ್ಳಲು ದೆಹಲಿಯಲ್ಲಿ ಅವರನ್ನು ಭೇಟಿಯಾಗಿದ್ದು ಮುಂಬರುವ ಭವಿಷ್ಯದಲ್ಲಿ ಪ್ರಪಂಚದಾದ್ಯಂತ ಅವರ ಮೋಟಾರ್ ಸೈಕಲ್ ಪ್ರವಾಸವನ್ನು ಯೋಜಿಸಲು ಅವರ ಸಲಹೆಗಳನ್ನು ಪಡೆದಿದ್ದಾರೆ.
7/ 10
ಅಜಿತ್ ಇತ್ತೀಚೆಗಷ್ಟೆ ತನ್ನ ಮುಂಬರುವ ಚಲನಚಿತ್ರ ವಲಿಮೈ ಚಿತ್ರದ ಕೊನೆಯ ಚಿತ್ರೀಕರಣಕ್ಕಾಗಿ ರಷ್ಯಾದಲ್ಲಿದ್ದಾಗ, ತನ್ನ ಬೈಕ್ನಲ್ಲಿ ಆ ದೇಶವನ್ನು ಸುತ್ತಾಡಿದ್ದಾರೆ. ಈ ಹಿಂದೆ ಕೂಡ ಅವರು ಸಿಕ್ಕಿಂಗೆ ಬೈಕ್ನಲ್ಲಿ ಪ್ರವಾಸಕ್ಕೆ ಹೋಗಿದ್ದರು.
8/ 10
ಅಜಿತ್ ಅವರ ವಲಿಮೈ ಚಿತ್ರವನ್ನು ನೇರ್ಕೊಂಡ ಪಾರ್ವೈ ಚಿತ್ರವನ್ನು ನಿರ್ದೇಶಿಸಿದ ಎಚ್ ವಿನೋದ್ ನಿರ್ದೇಶಿಸುತ್ತಿದ್ದು. ವಲಿಮೈ ಮಸಾಲಾ ಎಂಟರ್ಟೈನರ್ ಎಂದು ಹೇಳಲಾಗುತ್ತಿದ್ದು, ಈ ಚಿತ್ರದ ಬಗ್ಗೆ ಅಜಿತ್ ಅಭಿಮಾನಿಗಳು ಹೆಚ್ಚು ನಿರೀಕ್ಷೆಯನ್ನು ಹೊಂದಿದ್ದಾರೆ.
9/ 10
ಈ ಚಿತ್ರದಲ್ಲಿ ಹುಮಾ ಖುರೇಷಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಮತ್ತು ಕಾರ್ತಿಕೇಯ ಗುಮ್ಮಕೊಂಡ ವಿಲನ್ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ.
10/ 10
ಚಿತ್ರತಂಡ ಅಧಿಕೃತ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಿಲ್ಲ. ಆದರೆ ಮೂಲಗಳ ಪ್ರಕಾರ ವಲಿಮೈ ಬಿಡುಗಡೆ ದಿನಾಂಕ ಘೋಷಣೆಯನ್ನು ಸೆಪ್ಟೆಂಬರ್ ಅಂತ್ಯದಲ್ಲಿ ಮಾಡುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.