ನಾವು ಬಹಳಷ್ಟು ಹಣವನ್ನು ಸಿನಿಮಾ ಮೇಲೆ ಹಾಕಿದ್ದೆವು. ನಮ್ಮ ನಿರ್ಮಾಪಕರು ಸಾಕಷ್ಟು ಹಣವನ್ನು ಖರ್ಚು ಮಾಡಿದ್ದರು. ಒಂದು ವೇಳೆ ಜನ ಮಾತನಾಡಿದಂತೆ ಸಿನಿಮಾ ಸೋತರೆ ನನ್ನೊಂದಿಗೆ ಮೂರು ವರ್ಷ ಕೆಲಸ ಮಾಡಿದ ಅಷ್ಟೂ ಜನರಿಗೂ ತೊಂದರೆಯಾಗುತ್ತದೆ. ಆ ಸಂದರ್ಭ ನಾನೆಷ್ಟು ಕೆಳಗೆ ಬೀಳುತ್ತೇನೆಂದರೆ ಮತ್ತೆ ಅಲ್ಲಿಂದ ನಾನು ಏಳಲು ಸಾಧ್ಯವಿಲ್ಲ. ಅಂಥಹ ಸಂದರ್ಭದಲ್ಲಿ ಏನು ಮಾಡಬೇಕೆಂದು ತಿಳಿಯಲಿಲ್ಲ ಎಂದಿದ್ದಾರೆ.