SS Rajamouli: ಬಂಡೀಪುರದಲ್ಲಿ ಸಫಾರಿ ನಡೆಸಿದ ತೆಲುಗಿನ ಸ್ಟಾರ್ ನಿರ್ದೇಶಕ ರಾಜಮೌಳಿ
ತೆಲುಗಿನ ಸ್ಟಾರ್ ನಿರ್ದೇಶಕರಾದ ಎಸ್ಎಸ್ ರಾಜಮೌಳಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದಾರೆ. ಸೆಪ್ಟೆಂಬರ್ 15ರಂದು ತಮ್ಮ ಹೆಂಡತಿ ಸಮೇತ ಇಲ್ಲಿನ ಖಾಸಗಿ ರೆಸಾರ್ಟ್ನಲ್ಲಿ ಒಂದು ದಿನ ವಾಸ್ತವ್ಯ ಹೂಡಿದ್ದರು. ಇಂದು ಅವರು ಬಂಡೀಪುರದಲ್ಲಿ ಸಫಾರಿ ನಡೆಸಿ, ಹಿಮವದ್ ಗೋಪಾಲ ಸ್ವಾಮಿ ದರ್ಶನ ಪಡೆದಿದ್ದಾರೆ.
ತೆಲುಗಿನ ಅತ್ಯಂತ ಬೇಡಿಕೆಯ ಸ್ಟಾರ್ ಡೈರೆಕ್ಟರ್ ರಾಜಮೌಳಿ ತಮ್ಮ ಹೆಂಡತಿ ರಮಾ ಸಮೇತ ಚಾಮರಾಜನಗರಕ್ಕೆ ಭೇಟಿ ನೀಡಿದ್ದಾರೆ
2/ 9
ಇಲ್ಲಿನ ಖಾಸಗಿ ರೇಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ ಅವರು, ಇದೇ ವೇಳೆ ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಸಫಾರಿ ನಡೆಸಿದ್ದಾರೆ
3/ 9
ಲಾಕ್ಡೌನ್ ಹಿನ್ನಲೆ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ನೀಡಿದ್ದ ಅವರು, ಈ ಪ್ರವಾಸ ಮುಂದಿನ ಚಿತ್ರೀಕರಣದ ಸ್ಥಳ ವೀಕ್ಷಣೆಗಾ ಎಂಬ ಕುತೂಹಲ ಕೂಡ ಮೂಡಿದೆ
4/ 9
ಇದೇ ವೇಳೆ ಇಲ್ಲಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೂ ಅವರು ಭೇಟಿ ನೀಡಿದ್ದಾರೆ.
5/ 9
ಬಳ್ಳಾರಿ ಮೂಲದ ರಾಜಮೌಳಿ ಅವರು ಬಂಡೀಪುರದ ಸಫಾರಿಯ ಜೊತೆಗೆ ಇಲ್ಲಿನ ಪ್ರಕೃತಿ ಸವಿ ಸವಿದಿದ್ದು, ಸಂತಸ ಪಟ್ಟಿದ್ದಾರೆ.
6/ 9
ರಾಜಮೌಳಿಯವರು ಆಗಮನ ಇಲ್ಲಿನ ಸಿಬ್ಬಂದಿಗೆ ಅಚ್ಚರಿ ಜೊತೆಗೆ ಖುಷಿಯನ್ನು ನೀಡಿದೆ.
7/ 9
ಇತ್ತೀಚೆಗೆ ಕೊರೋನಾ ವೈರಸ್ ಸೋಂಕಿಗೆ ರಾಜಮೌಳಿ ಮತ್ತು ಅವರ ಕುಟುಂಬ ತುತ್ತಾಗಿತ್ತು. ಇದರಿಂದ ಚೇತರಿಕೆ ಕೊಂಡ ಬಳಿಕ ಅವರು ಈ ಪ್ರವಾಸ ನಡೆಸಿದ್ದಾರೆ.
8/ 9
ಈ ವೇಳೆ ರಾಜಮೌಳಿ ಅವರಿಗೆ ಅವರ ಹೆಂಡತಿ ರಮಾ ಕೂಡ ಜೊತೆಯಾಗಿದ್ದಾರೆ
9/ 9
ಬಾಹುಬಲಿ ಬಳಿ ತೆಲುಗಿನಲ್ಲಿ ಬಹುನಿರೀಕ್ಷೆಯ 'ಆರ್ಆರ್ ಆರ್' ಸಿನಿಮಾ ಚಿತ್ರವನ್ನು ಅವರು ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ಜ್ಯೂ. ಎನ್ಟಿಆರ್ ಹಾಗೂ ರಾಮಚರಣ್ ಅಭಿನಯಿಸುತ್ತಿದ್ದಾರೆ.