Sarayu Roy: ನಾನು ಕನ್ಯತ್ವ ಕಳೆದುಕೊಂಡಿದ್ದೇನೆ ಎಂದ ಬಿಗ್ ಬಾಸ್ ಸ್ಪರ್ಧಿ!
Sarayu Roy Bigg Boss Season 5 contestant: ನಟಿ ಸರಯೂ ರಾಯ್ ಮನಸ್ಸಿಗೆ ಅನಿಸಿದ್ದನ್ನು ನೇರವಾಗಿ ಹೇಳುವ ಸ್ವಭಾವದವರು. ಯಾವ ವಿಚಾರವಾದರು ಸರಿಯೇ ಮುಚ್ಚು ಮರೆ ಮಾಡದೆ ಜನರೆದುರು ಇದ್ದದ್ದನ್ನು ಹಾಗೆಯೇ ಹೇಳುತ್ತಾ ಬಂದಿದ್ದಾರೆ. ಅದರಂತೆ ನಟಿ ಇದೀಗ ತಮ್ಮ ವೈಯ್ಯಕ್ತಿಕ ಜೀವನದ ಬಗ್ಗೆ ಬೋಲ್ಡ್ ಆಗಿ ಮಾತನಾಡುವ ಮೂಲಕ ಸುದ್ದಿಯಾಗಿದ್ದಾರೆ.
ಟಾಲಿವುಡ್ ನಟಿ ಸರಯೂ ರಾಯ್ ತಮ್ಮ ಬೋಲ್ಡ್ ಮಾತಿನಿಂದ ಸುದ್ದಿಯಾದವರು. ಇತ್ತೀಚೆಗೆ ತೆಲುಗಿನ ಬಿಗ್ಬಾಸ್ -5ಕ್ಕೆ ಎಂಟ್ರಿಕೊಟ್ಟಿದ್ದ ನಟಿ ಮೊದಲ ವಾರದಲ್ಲೇ ಎಲಿಮೇಶನ್ ಮೂಲಕ ಮನೆಯಿಂದ ಹೊರಬಂದಿದ್ದಾರೆ.
2/ 6
ನಟಿ ಸರಯೂ ರಾಯ್ ಮನಸ್ಸಿಗೆ ಅನಿಸಿದ್ದನ್ನು ನೇರವಾಗಿ ಹೇಳುವ ಸ್ವಭಾವದವರು. ಯಾವ ವಿಚಾರವಾದರು ಸರಿಯೇ ಮುಚ್ಚು ಮರೆ ಮಾಡದೆ ಜನರೆದುರು ಇದ್ದದ್ದನ್ನು ಹಾಗೆಯೇ ಹೇಳುತ್ತಾ ಬಂದಿದ್ದಾರೆ. ಅದರಂತೆ ನಟಿ ಇದೀಗ ತಮ್ಮ ವೈಯ್ಯಕ್ತಿಕ ಜೀವನದ ಬಗ್ಗೆ ಬೋಲ್ಡ್ ಆಗಿ ಮಾತನಾಡುವ ಮೂಲಕ ಸುದ್ದಿಯಾಗಿದ್ದಾರೆ.
3/ 6
ಬಿಗ್ಬಾಸ್ ಮನೆಯಿಂದ ಹೊರಬಂದಂತೆ ಮಾಧ್ಯಮ ಎದುರು ಸಂದರ್ಶನ ಎದುರಿಸುತ್ತಿದ್ದಾರೆ. ಕೆಲವು ಸಂದರ್ಶನ ಕಾರ್ಯಕ್ರಮದ ವೇಳೆ ಜೀವನದಲ್ಲಾದ ಕೆಲವು ಘಟನೆಗಳ ಬಗ್ಗೆ ಹೇಳಿಕೊಂಡಿದ್ದಾರೆ. ಅದರಲ್ಲೂ ವೈಯ್ಯಕ್ತಿಕ ಜೀವನದಲ್ಲಾದ ಏರುಪೇರುಗಳ ಬಗ್ಗೆ ಮನಬಿಚ್ಚುವ ಮೂಲಕ ಅಭಿಮಾನಿಗಳ ಅಚ್ಚರಿಗಣ್ಣಿನಿಂದ ನೋಡುವಂತೆ ಮಾಡಿದ್ದಾರೆ.
4/ 6
ಸರಯೂ ಮಾಧ್ಯಮದವರ ಮುಂದೆ ಮಾತನಾಡುವ ವೇಳೆ ತಾನು ಕನ್ಯತ್ವ ಕಳೆದುಕೊಂಡಿರುವ ಬಗ್ಗೆ ಹೇಳಿದ್ದಾರೆ. 7 ವರ್ಷ ಒಬ್ಬನ ಜೊತೆ ಸಂಬಂಧದಲ್ಲಿದ್ದೆ. ಆತನಿಗಾಗಿ ವೃತ್ತಿ ಜೀವನವನ್ನು ಶೇ.100ರಷ್ಟು ಬದಿಗಿಟ್ಟಿದೆ. ಅಲ್ಲದೆ ನಾನು ಆತನ ಜತೆಗೆ ಕತ್ಯತ್ವ ಕಳೆದುಕೊಂಡಿದ್ದೇನೆಂದು ಬೋಲ್ಡ್ ಆಗಿ ಮಾತನಾಡಿದ್ದಾರೆ.
5/ 6
ನಾವಿಬ್ಬರು ಮದುವೆ ಆಗಲು ಬಯಸಿದ್ದೆವು ಹಾಗಾಗಿ ಮದುವೆಗೂ ಮುನ್ನ ಒಂದೇ ಮನೆಯಲ್ಲಿದ್ದೆವು. ವಿವಾಹದ ಬಗ್ಗೆ ಪ್ರಿಯಕರನ ಮನೆಯಲ್ಲಿ ಕೇಳಿದಾಗ ವರದಕ್ಷಿಣೆ ಕೇಳಿದರು. ಪ್ರಾರಂಭದಲ್ಲಿ 25 ಲಕ್ಷ ನೀಡಬೇಕೆಂದರು. ಬಳಿಕ 5 ಲಕ್ಷ, ಸ್ವಲ್ಪ ದಿನದ ಬಳಿ ಅರ್ಧ ಆಸ್ತಿ ಕೇಳಿದರು ಎಂದು ಹೇಳೀದ್ದಾರೆ.
6/ 6
ಇಷ್ಟಪಟ್ಟ ಹುಡುಗನ ಮನೆಯವರು ಮದುವೆಗೂ ಮುನ್ನವೇ ಹೀಗೆ ಆಸ್ತಿ ಮತ್ತು ವರದಕ್ಷಿಣೆ ಕೇಳಿದರೆ ವಿವಾಹದ ನಂತರ ಜೀವನದ ಬಗ್ಗೆ ಚಿಂತಿಸಿದ ಸರಯೂ ರಾಯ್ ಇಷ್ಟಪಟ್ಟಿದ್ದ ಹುಡುಗನ ಜೊತೆಗಿನ ವಿವಾಹವಕ್ಕೆ ಫುಲ್ಸ್ಟಾಪ್ ನೀಡಿದರು. ಹೀಗೆ ಸರಯು ತಮ್ಮ ಜೀವನದಲ್ಲಾದ ಘಟನೆಯನ್ನು ಮಾಧ್ಯಮದ ಮುಂದೆ ಬಿಚ್ಚಿಟ್ಟಿದ್ದಾರೆ.