ಅಶು ರೆಡ್ಡಿ ಎಂಬ ಹೆಸರು ಕೇಳಿದಾಗ ಎಲ್ಲರಿಗೂ ಈಕೆಯ ಹಾಟ್ ಆ್ಯಂಗಲ್ ನೆನಪಾಗುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ನಿಯಮಿತವಾಗಿ ಹಾಟ್ ಲುಕ್ ಪೋಸ್ಟ್ ಮಾಡುವ ಅಶು ರೆಡ್ಡಿ ಇತ್ತೀಚೆಗೆ ವಿಭಿನ್ನ ಲುಕ್ ಪೋಸ್ಟ್ ಮಾಡುವ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.
2/ 7
ಮಾಡರ್ನ್ ಬಟ್ಟೆಯಲ್ಲಿ ಮಿಂಚುತ್ತಿದ್ದ ಆಶು ರೆಡ್ಡಿ ಈಗ ಸೀರೆಯುಟ್ಟು ಕಾಣಿಸಿಕೊಂಡಿದ್ದಾರೆ. ರೇಷ್ಮೆ ಸೀರೆಯಲ್ಲಿ ನಟಿ ಸಖತ್ ಕ್ಯೂಟ್ ಆಗಿ ಕಾಣಿಸಿದ್ದಾರೆ.
3/ 7
ಇಲ್ಲಿ ವಿಶೇಷ ಏನಪ್ಪಾ ಅಂದ್ರೆ ಈ ಈ ತೆಲುಗು ನಟಿಯನ್ನು ನೋಡಿದ ಜನರು ಅರೆ ಸಮಂತಾ ಥರಾನೇ ಕಾಣ್ತಿದ್ದಾರಲ್ಲಾ ಎಂದು ಕಮೆಂಟ್ ಮಾಡುತ್ತಿದ್ದಾರೆ.
4/ 7
ಜೂನಿಯರ್ ಸಮಂತಾ ಆಗಿ ಅಶು ರೆಡ್ಡಿಗೆ ಒಳ್ಳೆಯ ಜನಪ್ರಿಯತೆ ಇದೆ. ಆದರೆ ಇಷ್ಟು ಹೋಲಿಕೆಯ ಫೋಟೋ ಪೋಸ್ಟ್ ಮಾಡಿದ್ದು ಬಹುಶಃ ಇದೇ ಮೊದಲ ಬಾರಿ.
5/ 7
ಆಶು ರೆಡ್ಡಿಯನ್ನು ಜೂನಿಯರ್ ಸಮಂತಾ ಎಂದು ಕರೆಯುತ್ತಾರೆ. ಇತ್ತೀಚೆಗೆ ಆಕೆ ಹಾಕಿರುವ ಟ್ರೆಡಿಷನಲ್ ಲುಕ್ ನೋಡಿ ನೆಟ್ಟಿಗರು ಅದನ್ನೇ ಮತ್ತೆ ನೆನಪಿಸುತ್ತಿದ್ದಾರೆ.
6/ 7
ಮಯೋಟಿಟಿಸ್ ಎಂಬ ಅಪರೂಪದ ಕಾಯಿಲೆಯಿಂದ ಸಮಂತಾ ಸ್ವಲ್ಪ ದುರ್ಬಲರಾಗಿದ್ದಾರೆ ಎಂದು ಹೇಳಲಾಗಿದೆ. ಈ ಹಿನ್ನಲೆಯಲ್ಲಿ ಅಶು ರೆಡ್ಡಿ ಹಾಕಿರುವ ಈ ಲುಕ್ ನೋಡಿ ನೆಟ್ಟಿಗರು 'ಸಮಂತ ಅವರ ಕೊರತೆಯನ್ನು ಆಶು ನೀಗಿಸಿದ್ದಾರೆ' ಎಂದು ವಿಭಿನ್ನ ಕಮೆಂಟ್ ಮಾಡುತ್ತಿದ್ದಾರೆ.
7/ 7
ಥಟ್ಟನೇ ನೋಡಿದಾಗ ಇವರು ಕೂಡಾ ಸಮಂತಾರಂತೆಯೇ ಕಾಣುತ್ತಾರೆ. ಇವರನ್ನು ಟ್ಯಾಟೂ ಸಮಂತಾ ಅಂತಾನೂ ಕರೆಯುತ್ತಾರೆ.