ಖ್ಯಾತ ಚಿತ್ರನಟ ಕೈಕಲಾ ಸತ್ಯನಾರಾಯಣ (87) ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಬೆಳಗಿನ ಜಾವ 4 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.
2/ 7
ಫಿಲಂನಗರದಲ್ಲಿರುವ ತಮ್ಮ ನಿವಾಸದಲ್ಲಿ ಸತ್ಯನಾರಾಯಣ ಅಸುನೀಗಿದ್ದಾರೆ. ನಾಳೆ ಜುಬಿಲಿ ಹಿಲ್ಸ್ನ ಮಹಾಪ್ರಸ್ಥಾನದಲ್ಲಿ ಸತ್ಯನಾರಾಯಣ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
3/ 7
ಕೈಕಾಲಾ ಅವರ ನಿಧನ ಚಿತ್ರರಂಗಕ್ಕೆ ತೀವ್ರ ದುಃಖ ತಂದಿದೆ. ಹಲವು ಸೆಲೆಬ್ರಿಟಿಗಳು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.
4/ 7
ಸತ್ಯನಾರಾಯಣ ಅವರು ಕೃಷ್ಣಾ ಜಿಲ್ಲೆಯ ಕೌತಾರಂ ಗ್ರಾಮದಲ್ಲಿ 1935 ರಲ್ಲಿ ಜನಿಸಿದರು. ಗುಡಿವಾಡ ಕಾಲೇಜಿನಲ್ಲಿ ಪದವಿ ಮುಗಿಸಿದರು. ನಟನೆಯ ಆಸಕ್ತಿಯಿಂದಾಗಿ ಕಾಲೇಜು ದಿನಗಳಲ್ಲಿ ಹಲವು ಪ್ರದರ್ಶನಗಳನ್ನು ನೀಡಿದ್ದರು.
5/ 7
ಖ್ಯಾತ ನಿರ್ಮಾಪಕ ಡಿ.ಎಲ್.ನಾರಾಯಣ ಅವರು ಸತ್ಯನಾರಾಯಣ ಅವರ ಪ್ರತಿಭೆಯನ್ನು ಗುರುತಿಸಿ ಅವರಿಗೆ ‘ಸಿಪಾಯಿ ಕುಟುರು’ ಚಿತ್ರದಲ್ಲಿ ಅವಕಾಶ ನೀಡಿದರು. ಪೌರಾಣಿಕ, ಜಾನಪದ, ಕಮರ್ಷಿಯಲ್ ಚಿತ್ರಗಳಲ್ಲಿ ನಾಯಕ ಮತ್ತು ಖಳನಾಯಕನಾಗಿ ಕಾಣಿಸಿಕೊಂಡರು.
6/ 7
ಎನ್ಟಿಆರ್, ಎಎನ್ಎನ್ಆರ್, ಕೃಷ್ಣ, ಶೋಭನ್ ಬಾಬು, ಸತ್ಯನಾರಾಯಣ ಜೊತೆಗೆ ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ, ವೆಂಕಟೇಶ್ ಮುಂತಾದವರ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
7/ 7
ವಿಶೇಷ ಅಂದರೆ 1962ರಲ್ಲಿ ತೆರೆಗೆ ಬಂದ ರಾಜ್ಕುಮಾರ್ ನಟನೆಯ ‘ಸ್ವರ್ಣಗೌರಿ’ ಚಿತ್ರದಲ್ಲಿ ಅವರು ಶಿವನ ಪಾತ್ರ ಮಾಡಿದ್ದರು.