ತಾರಕರತ್ನ: ಜನವರಿ 27ರಂದು ಯುವಗಲಂ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾಗ ಹೃದಯಾಘಾತವಾಗಿ ನಂದಮೂರಿ ತಾರಕರತ್ನ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ರವಾನಿಸಲಾಗಿತ್ತು. 18/2/2022ರಂದು ನಿಧನರಾದರು. ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದುಕೊಂಡಿದ್ದ ತಾರಕರತ್ನ ತಮ್ಮ 39ನೇ ವಯಸ್ಸಿನಲ್ಲಿ ಅಕಾಲಿಕ ಮರಣ ಹೊಂದಿದ್ದು ದುರಂತ.
ನಟ ಪುನೀತ್ ರಾಜ್‌ಕುಮಾರ್: ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ನಿಧನವನ್ನು ಅವರ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಗೆ ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪುನೀತ್ ರಾಜ್ ಕುಮಾರ್ ಅವರು 46 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ನಟನ ಅಕಾಲಿಕ ಮರಣವು ಕನ್ನಡ ಚಿತ್ರರಂಗದ ಜೊತೆಗೆ ಭಾರತೀಯ ಚಿತ್ರರಂಗವನ್ನು ಆಘಾತಕ್ಕೀಡುಮಾಡಿದೆ.
ಚಿರಂಜೀವಿ ಸರ್ಜಾ: ಹೀರೋ ಚಿರಂಜೀವಿ ಸರ್ಜಾ 2020 ರಲ್ಲಿ ಪುನೀತ್ ರಾಜ್‌ಕುಮಾರ್‌ಗಿಂತ ಮೊದಲು ಹೃದಯಾಘಾತದಿಂದ ನಿಧನರಾದರು. ಕನ್ನಡದಲ್ಲಿ ಸ್ಟಾರ್ ಹೀರೋ ಆಗಿ ನಟಿಸುತ್ತಿದ್ದ ಚಿರಂಜೀವಿ ಸರ್ಜಾ ಕೇವಲ 35 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ಇವರು ಸೌತ್ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಸೋದರಳಿಯ. ಸಾಯುವ ಹೊತ್ತಿಗೆ ಅವರ ಕೈಯಲ್ಲಿ ಅರ್ಧ ಡಜನ್‌ಗಿಂತಲೂ ಹೆಚ್ಚು ಚಿತ್ರಗಳಿದ್ದವು.