Taraka Ratna: ತಾರಕ ರತ್ನ ಆರೋಗ್ಯ ಸ್ಥಿತಿ ಈಗ ಹೇಗಿದೆ?

Taraka Ratna: ತಾರಕ ರತ್ನ ಅವರ ಆರೋಗ್ಯ ಸ್ಥಿತಿ ಏನೆಂದು ತಿಳಿಯದೆ ನಂದಮೂರಿ ಅಭಿಮಾನಿಗಳು ಆತಂಕದಲ್ಲಿದ್ದಾರೆ. ಜನವರಿ 27 ರಂದು ತಾರಕ ರತ್ನ ಅವರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ವೇಳೆ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅವರ ಆರೋಗ್ಯದ ಬಗ್ಗೆ ಈವರೆಗೂ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ. ಅವರನ್ನು ಆಸ್ಪತ್ರೆಯಲ್ಲಿ ಹೋಗಿ ನೋಡಿ ಬಂದ ಸೆಲೆಬ್ರಿಟಿ ಗಣ್ಯರು ಅವರ ಆರೋಗ್ಯದ ಕುರಿತು ಅಪ್ಡೇಟ್ ಕೊಟ್ಟಿದ್ದಾರೆ.

First published:

  • 19

    Taraka Ratna: ತಾರಕ ರತ್ನ ಆರೋಗ್ಯ ಸ್ಥಿತಿ ಈಗ ಹೇಗಿದೆ?

    ತಾರಕರತ್ನ ಅವರು ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು, ರಾಜಕಾರಣಿಗಳು ಮತ್ತು ಚಿತ್ರರಂಗದ ಗಣ್ಯರು ಸೋಷಿಯಲ್ ಮೀಡಿಯಾದಲ್ಲಿ ಹಾರೈಸುತ್ತಿದ್ದಾರೆ. ತಾರಕ ರತ್ನ ಆರೋಗ್ಯ ಸ್ಥಿತಿ ಕುರಿತು ವೈದ್ಯರು ಬುಲೆಟಿನ್ ಬಿಡುಗಡೆ ಮಾಡಿದ್ದಾರೆ. ಅವರ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.

    MORE
    GALLERIES

  • 29

    Taraka Ratna: ತಾರಕ ರತ್ನ ಆರೋಗ್ಯ ಸ್ಥಿತಿ ಈಗ ಹೇಗಿದೆ?

    ಟಿಡಿಪಿ ನಾಯಕ ಬುಚ್ಚಯ್ಯ ಚೌಧರಿ ಅವರು ಕೂಡಾ ತಾರಕ ರತ್ನ ಆರೋಗ್ಯದ ಬಗ್ಗೆ ಪ್ರತಿಕ್ರಿಯಿದ್ದಾರೆ. ತಾರಕರತ್ನ ಕುಪ್ಪಂ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ವೇಳೆ ಕುಸಿದು ಬಿದ್ದಿದ್ದರು. ಅವರ ನಾಡಿಮಿಡಿತವೂ ಕ್ಷೀಣಿಸಿತ್ತು ಎಂದು ಅವರು ಹೇಳಿದ್ದಾರೆ.

    MORE
    GALLERIES

  • 39

    Taraka Ratna: ತಾರಕ ರತ್ನ ಆರೋಗ್ಯ ಸ್ಥಿತಿ ಈಗ ಹೇಗಿದೆ?

    ತಾರಕ ರತ್ನ ಅವರ ಮೆದುಳಿಗೆ ಹಾನಿಯಾಗಿದೆ ಎನ್ನುತ್ತಾರೆ ವೈದ್ಯರು. ಇದೀಗ ತಾರಕರತ್ನ ಸ್ಥಿತಿ ಚಿಂತಾಜನಕವಾಗಿದೆ ಎಂದು ಅವರು ತಿಳಿಸಿದ್ದಾರೆ.

    MORE
    GALLERIES

  • 49

    Taraka Ratna: ತಾರಕ ರತ್ನ ಆರೋಗ್ಯ ಸ್ಥಿತಿ ಈಗ ಹೇಗಿದೆ?

    ತಾರಕರತ್ನ ಆರೋಗ್ಯ ಸ್ಥಿತಿ ಕುರಿತು ಮಾಧ್ಯಮದವರ ಪ್ರಶ್ನೆಗಳಿಗೆ ಜೂನಿಯರ್ ಎನ್ ಟಿಆರ್ ಕೂಡ ಉತ್ತರಿಸಿದ್ದಾರೆ. ತಾರಕರತ್ನ ದೇಹ ಚಿಕಿತ್ಸೆಗೆ ಸಹಕರಿಸುತ್ತಿದ್ದು, ಇದೀಗ ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    MORE
    GALLERIES

  • 59

    Taraka Ratna: ತಾರಕ ರತ್ನ ಆರೋಗ್ಯ ಸ್ಥಿತಿ ಈಗ ಹೇಗಿದೆ?

    ತಾರಕರತ್ನ ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ಮಂಚು ಮನೋಜ್ ಹೇಳಿದ್ದಾರೆ. ಅವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿದೆ ಎಂದು ಹೇಳಿದ್ದು ನಂದಮೂರಿ ಅಭಿಮಾನಿಗಳಿಗೆ ಸ್ವಲ್ಪ ನಿರಾಳ ಕೊಟ್ಟಿದೆ.

    MORE
    GALLERIES

  • 69

    Taraka Ratna: ತಾರಕ ರತ್ನ ಆರೋಗ್ಯ ಸ್ಥಿತಿ ಈಗ ಹೇಗಿದೆ?

    ತಾರಕರತ್ನ ತಂದೆ ರಾಮಕೃಷ್ಣ ಪ್ರತಿಕ್ರಿಯಿಸಿ ಯಾವುದೇ ಕೃತಕ ಉಸಿರಾಟ ಚಿಕಿತ್ಸೆ ಕೊಟ್ಟಿಲ್ಲ. ತಾರಕ ರತ್ನ ಸಹಜವಾಗಿ ಉಸಿರಾಡುತ್ತಿದ್ದಾರೆ ಎಂದು ಹೇಳಿದರು.

    MORE
    GALLERIES

  • 79

    Taraka Ratna: ತಾರಕ ರತ್ನ ಆರೋಗ್ಯ ಸ್ಥಿತಿ ಈಗ ಹೇಗಿದೆ?

    ತಾರಕರತ್ನ ಅವರ ಪತ್ನಿ ಅಲೇಖ್ಯಾ ರೆಡ್ಡಿ ಅವರ ಹಿರಿಯ ಸಹೋದರ, ವೈಸಿಪಿ ಸಂಸದೀಯ ಪಕ್ಷದ ನಾಯಕ ವಿಜಯಸಾಯಿ ರೆಡ್ಡಿ ಅವರು ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾರಕರತ್ನ ಅವರನ್ನು ಭೇಟಿ ಮಾಡಿದರು. ತಾರಕರತ್ನ ಅವರ ಹೃದಯ ಮತ್ತಿತರ ಅಂಗಾಂಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎನ್ನಲಾಗಿದೆ. ಮೆದುಳು ಚಿಕಿತ್ಸೆ ಮಾತ್ರ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.

    MORE
    GALLERIES

  • 89

    Taraka Ratna: ತಾರಕ ರತ್ನ ಆರೋಗ್ಯ ಸ್ಥಿತಿ ಈಗ ಹೇಗಿದೆ?

    ಶಿವರಾಜ್​ ಕುಮಾರ್ ಹಾಗೂ ಬಾಲಯ್ಯ ಅವರು ಜೊತೆಯಾಗಿ ತಾರಕ ರತ್ನ ಅವರ ಆರೋಗ್ಯ ವಿಚಾರಿಸಿದ್ದರು. ತಾರಕ ರತ್ನ ಅವರು ಬೆಂಗಳೂರಿನ ಆಸ್ಪತ್ರೆಗೆ ದಾಖಲಾದಾಗ 40 ಕಾರುಗಳಲ್ಲಿ ಅವರ ಕುಟುಂಬಸ್ಥರು ಬೆಂಗಳೂರು ತಲುಪಿದ್ದರು.

    MORE
    GALLERIES

  • 99

    Taraka Ratna: ತಾರಕ ರತ್ನ ಆರೋಗ್ಯ ಸ್ಥಿತಿ ಈಗ ಹೇಗಿದೆ?

    ಹೀಗಿದ್ದರೂ ಗಣ್ಯರು ಕೊಡುತ್ತಿರುವ ಹೇಳಿಕೆ ತಾರಕ ರತ್ನ ಅಭಿಮಾನಿಗಳಿಗೆ ಸಮಾಧಾನ ಕೊಡುತ್ತಿಲ್ಲ. ನಟನ ಆರೋಗ್ಯ ಸುಧಾರಿಸಿ ಬೇಗ ಹೊರಗೆ ಬರುವಂತಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

    MORE
    GALLERIES