Bigg Boss 8: ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ ಈ ಸ್ಯಾಂಡಲ್ವುಡ್ ಸ್ಟಾರ್ಗಳು...!
Bigg Boss Kannada 8: ಕನ್ನದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಆರಂಭಕ್ಕೆ ಇನ್ನು ಕೇವಲ ಐದೇ ದಿನಗಳು ಉಳಿದಿವೆ. ಪ್ರತಿ ದಿನ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಸ್ಪರ್ಧಿಗಳ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಹೀಗಿರುವಾಗಲೇ ಈಗ ಸ್ಯಾಂಡಲ್ವುಡ್ನ ಖ್ಯಾತ ಹಿರಿಯ ನಟಿ ಹಾಗೂ ಸ್ಟಾರ್ ನಟನ ಹೆಸರು ಸಹ ಕೇಳಿ ಬಂದಿದೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)
ಬಿಗ್ ಬಾಸ್ ಮನೆಗೆ ಯಾರೆಲ್ಲ ಹೋಗುತ್ತಾರೆ ಅನ್ನೋ ಕುತೂಹಲ ಕಿರುತೆರೆ ಪ್ರೇಕ್ಷಕರಲ್ಲಿದೆ. ಈಗಾಗಲೇ ಈ ಸೀಸನ್ನ ಸ್ಪರ್ಧಿಗಳ ಆಯ್ಕೆ ಸಹ ಮುಗಿದಿದೆ. ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಸ್ಪರ್ಧಿಗಳನ್ನು ಕರೋನಾ ಕಾರಣದಿಂದಾಗಿ ಕ್ವಾರಂಟೈನ್ನಲ್ಲಿ ಇಡಲಾಗಿದೆಯಂತೆ.
2/ 7
ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಲು ಇನ್ನು ಐದು ದಿನಗಳು ಮಾತ್ರ ಬಾಕಿ ಉಳಿದಿದೆ. ಈ ಕಾರ್ಯಕ್ರಮದ ಕುರಿತಾಗಿ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ.
3/ 7
ಈ ಕಾರ್ಯಕ್ರಮದಲ್ಲಿ ಸಿನಿಮಾ, ಮಾಧ್ಯಮ ಸೇರಿದಂತೆ ವಿವಿಧ ಕ್ಷೇತಗಳಲ್ಲಿನ ವ್ಯಕ್ತಿಗಳನ್ನು ಸ್ಪರ್ಧಿಗಳನ್ನಾಗಿ ಮಾಡಲಾಗುತ್ತದೆ.
4/ 7
ಈ ಸಲ ಸಿನಿ ರಂಗದಿಂದ ಯಾರೆಲ್ಲ ಸ್ಪರ್ಧಿಯಾಗಲಿದ್ದಾರೆ ಅನ್ನೋದರ ಬಗ್ಗೆ ಈಗಾಗಲೇ ಹಲವರ ಹೆಸರುಗಳು ಕೇಳಿ ಬಂದಿದೆ.
5/ 7
ಅದರಲ್ಲೂ ಸ್ಯಾಂಡಲ್ವುಡ್ನ ಹಿರಿಯ ನಟಿ ತಾರಾ ಈ ಸಲ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.
6/ 7
ಅಷ್ಟೇ ಅಲ್ಲ ನೆನಪಿರಲಿ ಸಿನಿಮಾ ಖ್ಯಾತಿಯ ಪ್ರೇಮ್ ಸಹ ಸೀಸನ್ 8ರಲ್ಲಿ ಇರಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಬಿಗ್ಬಾಸ್ ಕಾರ್ಯಕ್ರಮದ ತಂಡ ಪ್ರೇಮ್ ಅವರನ್ನೂ ಸಹ ಸಮಪರ್ಕಿಸಿದೆಯಂತೆ.
7/ 7
ಆದರೆ ನಿಜಕ್ಕೂ ಯಾರೆಲ್ಲ ಈ ಸೀಸನ್ನಲ್ಲಿ ರಂಜಿಸಲಿದ್ದಾರೆ ಅನ್ನೋದು ಇನ್ನೇನು ಕೆಲವೇ ದಿನಗಳಲ್ಲಿ ತಿಳಿಯಲಿದೆ.