ಭಾರತೀಯ ವೆಬ್ ಸಿರೀಸ್ನಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ 'ಸೇಕ್ರೆಡ್ ಗೇಮ್ಸ್' ಸರಣಿಯ 2ನೇ ಭಾಗ ಬಿಡುಗಡೆಯಾಗಿದೆ. 2ನೇ ಸರಣಿಗೂ ಉತ್ತಮ ವಿಮರ್ಶೆಗಳು ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ನೂತನ ಸರಣಿ ಆನ್ಲೈನ್ನಲ್ಲಿ ಲೀಕ್ ಆಗಿದೆ. ನೆಟ್ಫ್ಲಿಕ್ಸ್ ನಿರ್ಮಿಸುತ್ತಿರುವ ಈ ಸಿರೀಸ್ ಇದೀಗ ಪೈರಸಿಗೆ ತುತ್ತಾಗಿದೆ. ಈ ಹಿಂದೆ 'ಗೇಮ್ ಆಫ್ ಥ್ರೊನ್ಸ್ 'ಸಿರೀಸ್ ಕೂಡ ಪೈರಸಿ ಸಮಸ್ಯೆಯನ್ನು ಎದುರಿಸಿತ್ತು. ಇದೀಗ ಭಾರತದಲ್ಲಿ ವೆಬ್ ಸಿರೀಸ್ ಮಾರುಕಟ್ಟೆಯ ಸೂಪರ್ ಸರಣಿ ಲೀಕ್ ಆಗಿರುವುದು ನೆಟ್ಫ್ಲಿಕ್ಸ್ ನಿರ್ಮಾಪಕರ ನಿದ್ದೆಗೆಡಿಸಿದೆ.
ಇದೀಗ ಎರಡನೇ ಸರಣಿ ಆಗಸ್ಟ್ 15 ರಂದು ಬಿಡುಗಡೆಯಾಗಿದ್ದು, ಇದರಲ್ಲೂ ಸೈಫ್ ಅಲಿ ಖಾನ್, ನವಾಜುದ್ದೀನ್ ಸಿದ್ದಿಕಿ ಇರಲಿದ್ದಾರೆ. ಹಾಗೆಯೇ ರಣವೀರ್ ಶೋರೆ ಹಾಗೂ ಕಲ್ಕಿ ಕೋಚ್ಲಿನ್ ಹೊಸ ಸೇರ್ಪಡೆಯಾಗಿರುವುದು 'ಸೇಕ್ರೆಡ್ ಗೇಮ್ಸ್ 2' ಮೇಲಿನ ನಿರೀಕ್ಷೆ ಹೆಚ್ಚಿಸಿತ್ತು. ಆದರೀಗ ಬಿಡುಗಡೆಯಾದ 2ನೇ ದಿನದಲ್ಲೇ ಲೀಕ್ ಆಗಿರುವುದು ನೆಟ್ಫ್ಲಿಕ್ಸ್ ವೀಕ್ಷಕರ ಸಂಖ್ಯೆಯ ಮೇಲೆ ಪ್ರಭಾವ ಬೀರಲಿದೆ.