ತಮಿಳು ಕಿರುತೆರೆ ನಟಿ ಜಾಕ್ವೆಲಿನ್ ಲಿಧಿಯಾ ನೆರೆಹೊರೆಯವರು ತನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
2/ 10
ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಜಾಕ್ವೆಲಿನ್ ಮಾಹಿತಿ ಹಂಚಿಕೊಂಡಿದ್ದು, ಜನರು ಒಂದು ಸಣ್ಣ ತಪ್ಪಿಗೂ ಹೇಗೆ ಧರ್ಮವನ್ನು ಎಳೆದು ತರುತ್ತಾರೆ ಎಂಬುದನ್ನು ತಿಳಿಸಿದ್ದಾರೆ.
3/ 10
ಕೊರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಹಲವಾರು ಮಂದಿ ಸಂಕಷ್ಟಕ್ಕೀಡಾಗಿದ್ದಾರೆ. ಹಾಗೆಯೇ ಬೀದಿ ನಾಯಿಗಳು ಸಹ ಒಂದೊತ್ತಿನ ಊಟಕ್ಕಾಗಿ ಅಲೆದಾಡುತ್ತಿದೆ.
4/ 10
ಹೀಗಾಗಿ ನಾನು ಮನೆಯ ಪಕ್ಕದಲ್ಲಿ ನಾಯಿಗಳಿಗೆ ಆಹಾರ ಇರಿಸಿದ್ದೆ. ಆದರೆ ಇದರಿಂದ ಕುಪಿತಗೊಂಡ ನೆರೆ ಮನೆಯವರು ಅವರ ಗೇಟ್ ಬಳಿಯಿಂದ ಆಹಾರವನ್ನು ಆಚೆಗೆ ತೆಗೆಯುವಂತೆ ಸೂಚಿಸಿದ್ದರು.
5/ 10
ಆದರೆ ನಾನು ಅಲ್ಲಿ ಆಹಾರ ಇರಿಸಲು ಮುಖ್ಯ ಕಾರಣ ನಮ್ಮ ಮನೆಯಲ್ಲಿ ನಾಯಿ ಇದೆ. ನಮ್ಮ ಗೇಟ್ ಬಳಿ ಆಹಾರ ಇಟ್ಟರೆ ಬೊಗಳಲು ಪ್ರಾರಂಭಿಸುತ್ತದೆ. ಹೀಗಾಗಿ ಮನೆಯ ಪಕ್ಕದಲ್ಲಿ ಇರಿಸಿದರೆ ನಾಯಿಗಳು ತಿಂದು ಹೋಗುತ್ತವೆ ಎಂದು ಅವರಿಗೆ ತಿಳಿಸಿದೆ.
6/ 10
ಇದಕ್ಕೆ ನೆರೆಮನೆಯಾತ ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ನಾನು ಕ್ಷಮೆ ಕೇಳಿದೆ. ಆದರೆ ಆತ ಮನೆಗೆ ನುಗ್ಗಿ ಹೊಡಿತೀನಿ , ಕ್ರಿಶ್ಚಿಯನ್ ಹುಡುಗಿ ಅಂತ ಬಿಡ್ತಿದ್ದೀನಿ ಎಂದು ಬೆದರಿಕೆ ಹಾಕಿದ್ದನು.
7/ 10
ಆದರೆ ಇಲ್ಲಿ ಧರ್ಮ ಯಾಕೆ ಬಂತು...ಅದು ಕೂಡ ಕೊರೋನಾ ಮಹಾಮಾರಿಯಿಂದ ಎಲ್ಲರೂ ಸಂಕಷ್ಟಕ್ಕೆ ಈಡಾಗಿರುವ ಸಂದರ್ಭದಲ್ಲಿ ಇಂತಹ ಯೋಚನೆ. ಕನಿಷ್ಠ ಪಕ್ಷ ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಮನುಷ್ಯರಾಗಿರಿ ಎಂದು ಜಾಕ್ವೆಲಿನ್ ಲಿಧಿಯಾ ನೋವು ತೋಡಿಕೊಂಡಿದ್ದಾರೆ.
8/ 10
ಜಾಕ್ವೆಲಿನ್ ಲಿಧಿಯಾ ಮಾಡಿರುವ ಪೋಸ್ಟ್ ಇದೀಗ ಭಾರೀ ವೈರಲ್ ಆಗಿದ್ದು, ಇಡೀ ವಿಶ್ವವೇ ಸಂಕಷ್ಟದಲ್ಲಿರುವಾಗ ಭಾರತೀಯರು ಇನ್ನೂ ಕೂಡ ಜಾತಿ-ಧರ್ಮದ ಹಿಂದೆ ಬಿದ್ದಿದ್ದಾರೆ ಎಂಬುದಕ್ಕೆ ಇದುವೇ ತಾಜಾ ನಿದರ್ಶನ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
9/ 10
ತಮಿಳು ಟೆಲಿವಿಷನ್ನಲ್ಲಿ ಕನಾ ಕಾನುಂ ಕಾಲಂಗಲ್ ಧಾರಾವಾಯಿಯಲ್ಲಿ ಬಣ್ಣ ಹಚ್ಚಿರುವ ಜಾಕ್ವೆಲಿನ್ ಸದ್ಯ ಕಲಕ್ಕ ಪೊವಾಧು ಯಾರು ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.