ಮಹಾಲಕ್ಷ್ಮಿ, ರವೀಂದ್ರ ಇಬ್ಬರ ಜೋಡಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಟ್ರೋಲ್ಗಳಿಗೂ ಒಳಗಾಗಿದ್ದಾರೆ. ನೆಗೆಟಿವ್ ಕಮೆಂಟ್ಗಳಿಗೆ ಈ ಜೋಡಿ ಡೋಂಟ್ ಕೇರ್ ಅಂತಿದೆ.
2/ 8
ಮದುವೆ ಬಳಿಕ ಬಂದ ಮೊದಲ ಸಂಕ್ರಾಂತಿ ಹಬ್ಬವನ್ನು ಈ ಜೋಡಿ ಸಂಭ್ರಮದಿಂದ ಆಚರಿಸಿದೆ. ಫೋಟೋಗಳನ್ನು ಶೇರ್ ಮಾಡುವ ಮೂಲಕ ಸಡಗರ ಹಂಚಿಕೊಂಡಿದ್ದಾರೆ.
3/ 8
3 ದಿನಗಳ ಕಾಲ ತಮಿಳುನಾಡಿನಲ್ಲಿ ಪೊಂಗಲ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಮಹಾಲಕ್ಷ್ಮಿ ಕೂಡ ಹಬ್ಬವನ್ನು ಸಖತ್ ಆಗಿ ಆಚರಿಸಿದ್ದಾರೆ.
4/ 8
ಗೋಲ್ಡನ್ ಸೀರೆ ಮೇಲೆ ಹ್ಯಾಂಡ್ ವರ್ಕ್ ಮಾಡಿರುವ ಸೀರೆಯುಟ್ಟು ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
5/ 8
ಇತ್ತೀಚೆಗೆ ಮಹಾಲಕ್ಷ್ಮಿ ಹಂಚಿಕೊಂಡ ಹೊಸ ಫೋಟೋ ಕೂಡ ಗಮನ ಸೆಳೆಯಿತು. ‘We are not made for each other. We are mad for each other’ ಎಂದು ಕ್ಯಾಪ್ಷನ್ ನೀಡಿದರು. ಈ ಫೋಟೋ ಕೂಡ ಸಿಕ್ಕಾಪಟ್ಟೆ ಟ್ರೋಲ್ ಆಗಿದೆ.
6/ 8
ನೆಗೆಟಿವ್ ಕಮೆಂಟ್ ಬಳಿಕ ಮಹಾಲಕ್ಷ್ಮಿ ಅವರು ಈ ಫೋಟೋವನ್ನು ಡಿಲೀಟ್ ಮಾಡಿದರು. ದುಡ್ಡಿಗಾಗಿ ನಿರ್ಮಾಪಕನನ್ನು ನಟಿ ಮದುವೆಯಾಗಿದ್ದಾರೆ ಎಂದು ಅನೇಕರು ಕಮೆಂಟ್ ಮಾಡಿದ್ರು.
7/ 8
ಮಹಾಲಕ್ಷ್ಮಿ ಹಾಗೂ ರವೀಂದರ್ ಚಂದ್ರಶೇಖರನ್ ಅವರಿಗೆ ಇದು ಎರಡನೇ ಮದುವೆಯಾಗಿದ್ದು, ನಟಿಗೆ ಒಬ್ಬ ಮಗ ಕೂಡ ಇದ್ದಾನೆ.
8/ 8
ಟ್ರೋಲ್ ಗಳಿಗೆ ಈ ಹಿಂದೆ ಪ್ರತಿಕ್ರಿಯಿಸಿದ್ದ ನಟಿ ಮಹಾಲಕ್ಷ್ಮಿ, ನಮ್ಮದು ನಿಜವಾದ ಪ್ರೀತಿ, ನನ್ನ ಗಂಡನಿಗೆ ಅವಮಾನ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದರು.