Actor Prabhu: ಖ್ಯಾತ ಹಿರಿಯ ನಟ ಪ್ರಭು ಆಸ್ಪತ್ರೆಗೆ ದಾಖಲು; ಆರೋಗ್ಯ ಸ್ಥಿತಿ ಹೇಗಿದೆ?

ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಖ್ಯಾತ ನಟ ಪ್ರಭು ಅವರನ್ನು ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ರಾತ್ರಿ ಚೆನ್ನೈನ ಕೋಡಂಬಾಕ್ಕಂನಲ್ಲಿರುವ ಮೆಡ್ವೇ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ.

First published:

  • 18

    Actor Prabhu: ಖ್ಯಾತ ಹಿರಿಯ ನಟ ಪ್ರಭು ಆಸ್ಪತ್ರೆಗೆ ದಾಖಲು; ಆರೋಗ್ಯ ಸ್ಥಿತಿ ಹೇಗಿದೆ?

    ಖ್ಯಾತ ಹಿರಿಯ ನಟ ಪ್ರಭುಗೆ ವೈದ್ಯರು ಚಿಕಿತ್ಸೆ ನಡೆಸುತ್ತಿದ್ದಾರೆ. ಆರೋಗ್ಯ ತಪಾಸಣೆ ನಡೆಸಿದ ಡಾಕ್ಟರ್ಸ್ ಕಿಡ್ನಿಯಲ್ಲಿ ಕಲ್ಲು ಇರುವುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ತಕ್ಷಣವೇ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದಾರೆ.

    MORE
    GALLERIES

  • 28

    Actor Prabhu: ಖ್ಯಾತ ಹಿರಿಯ ನಟ ಪ್ರಭು ಆಸ್ಪತ್ರೆಗೆ ದಾಖಲು; ಆರೋಗ್ಯ ಸ್ಥಿತಿ ಹೇಗಿದೆ?

    ತಮಿಳು ಮಾಧ್ಯಮಗಳ ವರದಿಗಳ ಪ್ರಕಾರ ಪ್ರಭು ಅವರನ್ನು ತಕ್ಷಣವೇ ಶಸ್ತ್ರಚಿಕಿತ್ಸೆಗೆ ಕಳುಹಿಸಲಾಗಿದೆ. ನಟ ಪ್ರಭು ಅವರಿಗೆ ಲೇಸರ್ ಎಂಡೋಸ್ಕೋಪಿ ಸಹ ಮಾಡಲಾಯಿತು. ಇದೀಗ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಆಸ್ಪತ್ರೆ ಹೆಲ್ತ್ ಅಪ್ಡೇಟ್ ನೀಡಿದೆ.

    MORE
    GALLERIES

  • 38

    Actor Prabhu: ಖ್ಯಾತ ಹಿರಿಯ ನಟ ಪ್ರಭು ಆಸ್ಪತ್ರೆಗೆ ದಾಖಲು; ಆರೋಗ್ಯ ಸ್ಥಿತಿ ಹೇಗಿದೆ?

    ಶಸ್ತ್ರಚಿಕಿತ್ಸೆಗೆ ಬಳಿಕ ಕೆಲ ದಿನಗಳ ಕಾಲ ನಟನ ಪ್ರಭು ಅವರಿಗೆ ವಿಶ್ರಾಂತಿ ಅಗತ್ಯವಿದೆ ಎನ್ನಲಾಗ್ತಿದೆ. ಒಂದೆರಡು ದಿನಗಳಲ್ಲಿ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ. ಕೆಲ ದಿನಗಳಿಂದ ನಟ ಪ್ರಭು ಹೊಟ್ಟೆ ನೋವಿನಿಂದ ಬಳಲುತ್ತಿದ್ದರಂತೆ.

    MORE
    GALLERIES

  • 48

    Actor Prabhu: ಖ್ಯಾತ ಹಿರಿಯ ನಟ ಪ್ರಭು ಆಸ್ಪತ್ರೆಗೆ ದಾಖಲು; ಆರೋಗ್ಯ ಸ್ಥಿತಿ ಹೇಗಿದೆ?

    ಆಸ್ಪತ್ರೆ ನಟ ಪ್ರಭು ಅವರ ಆರೋಗ್ಯದ ಕುರಿತು ಬುಲೆಟಿನ್ ಬಿಡುಗಡೆ ಮಾಡಿದೆ. ಪ್ರಭು ಈಗ ಸಂಪೂರ್ಣ ಆರೋಗ್ಯವಾಗಿದ್ದು, ಸಾಮಾನ್ಯ ಶಸ್ತ್ರಚಿಕಿತ್ಸೆಯ ನಡೆಸಲಾಗಿದ್ದು, ವೈದ್ಯಕೀಯ ಪರೀಕ್ಷೆಗಳ ನಂತರ ಅವರು ಒಂದು ಅಥವಾ ಎರಡು ದಿನಗಳಲ್ಲಿ ಮನೆಗೆ ಮರಳುತ್ತಾರೆ ಎಂದು ಆಸ್ಪತ್ರೆಯ ಆಡಳಿತದಿಂದ ಬಿಡುಗಡೆಯಾದ ಹೇಳಿಕೆ ತಿಳಿಸಿದೆ.

    MORE
    GALLERIES

  • 58

    Actor Prabhu: ಖ್ಯಾತ ಹಿರಿಯ ನಟ ಪ್ರಭು ಆಸ್ಪತ್ರೆಗೆ ದಾಖಲು; ಆರೋಗ್ಯ ಸ್ಥಿತಿ ಹೇಗಿದೆ?

    ಪ್ರಭು ಅವರು ಖ್ಯಾತ ನಟ ಶಿವಾಜಿ ಗಣೇಶನ್ ಅವರ ಪುತ್ರ. ಅವರು  300 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರಗಳು ಹಾಗೂ ಪೊಲೀಸ್​ ಪಾತ್ರಗಳ ಮೂಲಕ  ಪ್ರಭು ತಮಿಳು ಸಿನಿಮಾಗಳಲ್ಲಿ ಸಖತ್​ ಫೇಮಸ್ ಆಗಿದ್ದಾರೆ. 

    MORE
    GALLERIES

  • 68

    Actor Prabhu: ಖ್ಯಾತ ಹಿರಿಯ ನಟ ಪ್ರಭು ಆಸ್ಪತ್ರೆಗೆ ದಾಖಲು; ಆರೋಗ್ಯ ಸ್ಥಿತಿ ಹೇಗಿದೆ?

    ಟಾಲಿವುಡ್​, ಕಾಲಿವುಡ್​, ಮಾಲಿವುಡ್​ನಲ್ಲಿ ಪ್ರಭು ಬಹುಬೇಡಿಕೆಯ ನಟ ಕೂಡ ಆಗಿದ್ದಾರೆ. ತಮಿಳು, ತೆಲುಗು , ಮಲಯಾಳಂ ಹಾಗೂ ಕನ್ನಡ ಸಿನಿಮಾಗಳಲ್ಲಿಯೂ ನಟಿಸಿ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ.

    MORE
    GALLERIES

  • 78

    Actor Prabhu: ಖ್ಯಾತ ಹಿರಿಯ ನಟ ಪ್ರಭು ಆಸ್ಪತ್ರೆಗೆ ದಾಖಲು; ಆರೋಗ್ಯ ಸ್ಥಿತಿ ಹೇಗಿದೆ?

    ಸಂಕ್ರಾಂತಿ ಸಂದರ್ಭದಲ್ಲಿ ಬಿಡುಗಡೆಯಾದ ವಿಜಯ್ ಅಭಿನಯದ ವಾರಿಸು ಚಿತ್ರದಲ್ಲಿ ಪ್ರಭು ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಕೂಡ ನಟಿಸಿದ್ದಾರೆ. ಪ್ರಭು ತಮ್ಮ ನಟನೆ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. 

    MORE
    GALLERIES

  • 88

    Actor Prabhu: ಖ್ಯಾತ ಹಿರಿಯ ನಟ ಪ್ರಭು ಆಸ್ಪತ್ರೆಗೆ ದಾಖಲು; ಆರೋಗ್ಯ ಸ್ಥಿತಿ ಹೇಗಿದೆ?

    ಪ್ರಭು ಅನಾರೋಗ್ಯದ ಬಗ್ಗೆ ತಿಳಿದ ಅಭಿಮಾನಿಗಳು ಆತಂಕ ಹೊರಹಾಕಿದ್ದು, ಶೀಘ್ರವೇ ಗುಣಮುಖರಾಗಿ ಬರಲಿ ಎಂದು ಹಾರೈಸಿದ್ದಾರೆ.

    MORE
    GALLERIES