Actor Suicide: ಪ್ರಖ್ಯಾತ ಧಾರಾವಾಹಿ ನಟ ಆತ್ಮಹತ್ಯೆ; ಸಾವಿಗೆ ಕಾರಣವಾಯ್ತಾ ಗಂಡ ಹೆಂಡತಿ ಜಗಳ?
ನಾನು ಲೋಕೇಶ್ ಅವರನ್ನು ಕೊನೆಯದಾಗಿ ಶುಕ್ರವಾರ ನೋಡಿದೆ, ಅವರು ಸ್ವಲ್ಪ ಹಣ ಬೇಕು ಎಂದು ನನ್ನ ಬಳಿ ಕೇಳಿದ್ದರು. ನಾನೂ ಹಣವನ್ನು ಕೊಟ್ಟಿದ್ದೆ ಎಂದು ಲೋಕೇಶ್ ರಾಜೇಂದ್ರನ್ ಅವರ ತಂದೆ ಹೇಳಿದ್ದಾರೆ.
ಜನಪ್ರಿಯ ತಮಿಳು ಕಿರುತೆರೆ ನಟ ಲೋಕೇಶ್ ರಾಜೇಂದ್ರನ್ (34) ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜನಪ್ರಿಯ ಟೆಲಿ ಧಾರಾವಾಹಿ ‘ಮರ್ಮದೇಶಂ’ನಲ್ಲಿ ಬಾಲ ಕಲಾವಿದನಾಗಿ ಕೆಲಸ ಮಾಡಿದ ಭಾರೀ ಜನಪ್ರಿಯತೆ ಗಳಿಸಿದ್ದ ಅವರ ಆತ್ಮಹತ್ಯೆಯಿಂದ ತಮಿಳು ಚಿತ್ರರಂಗ ಆಘಾತಕ್ಕೆ ಸಿಲುಕಿದೆ.
2/ 7
ಒಂದು ತಿಂಗಳ ಹಿಂದೆ ಲೋಕೇಶ್ ಮತ್ತು ಅವರ ಪತ್ನಿಯ ನಡುವೆ ಕೆಲವು ತಪ್ಪು ತಿಳುವಳಿಕೆ ಇತ್ತು ಎಂದು ನನಗೆ ತಿಳಿದಿತ್ತು ಎಂದು ಅವರ ತಂದೆ ತಿಳಿಸಿದ್ದಾರೆ.
3/ 7
ನಾಲ್ಕು ದಿನಗಳ ಹಿಂದೆ ಪತ್ನಿಯಿಂದ ವಿಚ್ಛೇದನಕ್ಕೆ ಲೀಗಲ್ ನೋಟಿಸ್ ಬಂದಿತ್ತು. ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಸಹ ಅವರ ಅಪ್ಪ ತಿಳಿಸಿದ್ದಾರೆ.
4/ 7
ನಾನು ಲೋಕೇಶ್ ಅವರನ್ನು ಕೊನೆಯದಾಗಿ ಶುಕ್ರವಾರ ನೋಡಿದೆ, ಅವರು ಸ್ವಲ್ಪ ಹಣ ಬೇಕು ಎಂದು ನನ್ನ ಬಳಿ ಕೇಳಿದ್ದರು. ನಾನೂ ಹಣವನ್ನು ಕೊಟ್ಟಿದ್ದೆ ಎಂದು ಲೋಕೇಶ್ ರಾಜೇಂದ್ರನ್ ಅವರ ತಂದೆ ಹೇಳಿದ್ದಾರೆ.
5/ 7
ಲೋಕೇಶ್ ಅವರ ತಂದೆಯ ಪ್ರಕಾರ ಅವರ ಮಗ 150 ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.
6/ 7
ಅಲ್ಲದೇ 15 ಚಲನಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ಲೋಕೇಶ್ ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
7/ 7
ಒಟ್ಟಾರೆ ಈ ಲೋಕೇಶ್ ರಾಜೇಂದ್ರನ್ ಆತ್ಮಹತ್ಯೆಯಿಂದ ತಮಿಳು ಚಿತ್ರರಂಗ ಶಾಕ್ಗೆ ಒಳಗಾಗಿದೆ.