Actor Vikram: ಸಿನಿಮಾ ಶೂಟಿಂಗ್ ವೇಳೆ ನಟ ವಿಕ್ರಂ ಚಿಯಾನ್​ಗೆ ಗಂಭೀರ ಗಾಯ; ನಟನ ಪಕ್ಕೆಲುಬು ಮುರಿತ

ಪೊನ್ನಿಯಿನ್ ಸೆಲ್ವನ್ 2 ನಟ ವಿಕ್ರಂ ತಮಿಳಿನ ಮತ್ತೊಂದು ಸಿನಿಮಾ ಶೂಟಿಂಗ್ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿನಿಮಾಗಾಗಿ ರಿಸ್ಕ್ ತೆಗೆದುಕೊಳ್ಳಲು ನಟ ವಿಕ್ರಂ ಹಿಂದೆ ಮುಂದೆ ನೋಡಲ್ಲ. ಇದೇ ರೀತಿ ಸಾಹಸ ದೃಶ್ಯದ ಶೂಟಿಂಗ್ ವೇಳೆ ನಟ ಗಾಯಗೊಂಡಿದ್ದಾರೆ.

First published:

  • 18

    Actor Vikram: ಸಿನಿಮಾ ಶೂಟಿಂಗ್ ವೇಳೆ ನಟ ವಿಕ್ರಂ ಚಿಯಾನ್​ಗೆ ಗಂಭೀರ ಗಾಯ; ನಟನ ಪಕ್ಕೆಲುಬು ಮುರಿತ

    ನಟ ವಿಕ್ರಂ ಅಭಿನಯದ ಪೊನ್ನಿಯಿನ್ ಸೆಲ್ವನ್ 2 ಸಿನಿಮಾ ಹಿಟ್ ಆಗಿದ್ದು, ಇದೀಗ ತಂಗಳನ್ ಸಿನಿಮಾದ ಚಿತ್ರೀಕರಣದಲ್ಲಿ ವಿಕ್ರಂ ಬ್ಯುಸಿ ಆಗಿದ್ದಾರೆ. ಸಿನಿಮಾದ ದೃಶ್ಯವೊಂದರ ಚಿತ್ರೀಕರಣದ ಸಮಯದಲ್ಲಿ ನಡೆದ ಅವಘಡದಲ್ಲಿ ವಿಕ್ರಂಗೆ ತೀವ್ರ ಪೆಟ್ಟಾಗಿದೆ.

    MORE
    GALLERIES

  • 28

    Actor Vikram: ಸಿನಿಮಾ ಶೂಟಿಂಗ್ ವೇಳೆ ನಟ ವಿಕ್ರಂ ಚಿಯಾನ್​ಗೆ ಗಂಭೀರ ಗಾಯ; ನಟನ ಪಕ್ಕೆಲುಬು ಮುರಿತ

    ಆಕ್ಷನ್ ಸೀನ್ ಚಿತ್ರೀಕರಣದ ವೇಳೆ ವಿಕ್ರಂ ಗಾಯಗೊಂಡಿದ್ದು, ಅವರ ಪಕ್ಕೆಲುಬು ಮುರಿದೆ. ನಟ ವಿಕ್ರಂಗೆ ಸರ್ಜರಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ ವಿಕ್ರಮ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    MORE
    GALLERIES

  • 38

    Actor Vikram: ಸಿನಿಮಾ ಶೂಟಿಂಗ್ ವೇಳೆ ನಟ ವಿಕ್ರಂ ಚಿಯಾನ್​ಗೆ ಗಂಭೀರ ಗಾಯ; ನಟನ ಪಕ್ಕೆಲುಬು ಮುರಿತ

    ಬಿ. ಇರಂಜಿತ್ ನಿರ್ದೇಶನದ ತಂಗಳನ್ ಚಿತ್ರದಲ್ಲಿ ನಟ ವಿಕ್ರಮ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಐತಿಹಾಸಿಕ ಚಿತ್ರದ ಚಿತ್ರೀಕರಣ ಅಂತಿಮ ಹಂತ ತಲುಪಿದೆ.

    MORE
    GALLERIES

  • 48

    Actor Vikram: ಸಿನಿಮಾ ಶೂಟಿಂಗ್ ವೇಳೆ ನಟ ವಿಕ್ರಂ ಚಿಯಾನ್​ಗೆ ಗಂಭೀರ ಗಾಯ; ನಟನ ಪಕ್ಕೆಲುಬು ಮುರಿತ

    ತಂಗಳನ್ ಸಿನಿಮಾದ ಅಂತಿಮ ಶೆಡ್ಯೂಲ್, ನಿನ್ನೆ ಚೆನ್ನೈನ ಇವಿಪಿ ಫಿಲ್ಮ್ ಸಿಟಿಯಲ್ಲಿ ಶುರುವಾಗಿತ್ತು. ಆದರೆ ಶೂಟಿಂಗ್ ವೇಳೆ ನಟ ವಿಕ್ರಮ್ ಅವರಿಗೆ ಅನಿರೀಕ್ಷಿತ ಗಾಯವಾಗಿದ್ದು, ಪಕ್ಕೆಲುಬು ಮುರಿತವಾಗಿದೆ.

    MORE
    GALLERIES

  • 58

    Actor Vikram: ಸಿನಿಮಾ ಶೂಟಿಂಗ್ ವೇಳೆ ನಟ ವಿಕ್ರಂ ಚಿಯಾನ್​ಗೆ ಗಂಭೀರ ಗಾಯ; ನಟನ ಪಕ್ಕೆಲುಬು ಮುರಿತ

    2024ರ ಆರಂಭದಲ್ಲಿ ತಂಗಳನ್ ಸಿನಿಮಾ ಬಿಡುಗಡೆ ಮಾಡಲು ನಿರ್ದೇಶಕ-ನಿರ್ಮಾಪಕರು ಪ್ಲಾನ್ ಮಾಡಿದ್ದಾರೆ. ವಿಕ್ರಮ್ ಹುಟ್ಟುಹಬ್ಬದ ಸಂದರ್ಭದಲ್ಲಿ ಇತ್ತೀಚೆಗೆ ಬಿಡುಗಡೆಯಾದ ತಂಗಳನ್ ಗ್ಲಿಂಪ್ಸಸ್ ವಿಡಿಯೋ ಚಿತ್ರದ ಬಗ್ಗೆ ಕುತೂಹಲ ಮತ್ತು ನಿರೀಕ್ಷೆಯನ್ನು ಹೆಚ್ಚಿಸಿದೆ.

    MORE
    GALLERIES

  • 68

    Actor Vikram: ಸಿನಿಮಾ ಶೂಟಿಂಗ್ ವೇಳೆ ನಟ ವಿಕ್ರಂ ಚಿಯಾನ್​ಗೆ ಗಂಭೀರ ಗಾಯ; ನಟನ ಪಕ್ಕೆಲುಬು ಮುರಿತ

    2ಡಿ ಹಾಗೂ 3ಡಿ ಮಾದರಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಮಾಳವಿಕಾ ಮೋಹನನ್, ಪಾರ್ವತಿ ತಿರುವೋತ್ತು ಮತ್ತು ವಿಕ್ರಮ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

    MORE
    GALLERIES

  • 78

    Actor Vikram: ಸಿನಿಮಾ ಶೂಟಿಂಗ್ ವೇಳೆ ನಟ ವಿಕ್ರಂ ಚಿಯಾನ್​ಗೆ ಗಂಭೀರ ಗಾಯ; ನಟನ ಪಕ್ಕೆಲುಬು ಮುರಿತ

    ಕೋಲಾರ ಗೋಲ್ಡ್ ಫೀಲ್ಡ್ ನಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿದ ಈ ಚಿತ್ರವನ್ನು ಸ್ಟುಡಿಯೋ ಗ್ರೀನ್ ಮತ್ತು ನೀಲಂ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಕೆ.ಇ.ಜ್ಞಾನವೇಲ್ ರಾಜ ನಿರ್ಮಿಸುತ್ತಿದ್ದಾರೆ. ಸಿನಿಮಾಗೆ ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ.

    MORE
    GALLERIES

  • 88

    Actor Vikram: ಸಿನಿಮಾ ಶೂಟಿಂಗ್ ವೇಳೆ ನಟ ವಿಕ್ರಂ ಚಿಯಾನ್​ಗೆ ಗಂಭೀರ ಗಾಯ; ನಟನ ಪಕ್ಕೆಲುಬು ಮುರಿತ

    ಈ ಅನಿರೀಕ್ಷಿತ ಘಟನೆಯಿಂದ ವಿಕ್ರಂ ಗಾಯಗೊಂಡಿರುವ ಹಿನ್ನೆಲೆ ತಂಗಳನ್ ಚಿತ್ರದ ಶೂಟಿಂಗ್ ಸ್ಥಗಿತಗೊಂಡಿದೆ. ನಟ ವಿಕ್ರಂ ಚೇತರಿಸಿಕೊಂಡ ಬಳಿಕ ಮತ್ತೆ ಶೂಟಿಂಗ್ ಆರಂಭಿಸುವ ಸಾಧ್ಯತೆಗಳಿವೆ.

    MORE
    GALLERIES