Tamannaah Bhatia: ಬಾಲಯ್ಯ ಸಿನಿಮಾದಲ್ಲಿ ಡ್ಯಾನ್ಸ್ ಮಾಡೋಕೆ ತಮನ್ನಾ ಕೇಳಿದ್ದೆಷ್ಟು?

Tamanna | Balakrishna: ಸ್ಟಾರ್ ಹೀರೋಯಿನ್ ತಮನ್ನಾ ದೊಡ್ಡ ಹೀರೋಗಳ ಜೊತೆ ನಟಿಸುತ್ತಾ ಮತ್ತೊಂದೆಡೆ ಐಟಂ ಸಾಂಗ್ಸ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಬಾಲಕೃಷ್ಣ ಜೊತೆ ಸ್ಪೆಷಲ್ ಸಾಂಗ್ ಮಾಡುವ ಅವಕಾಶ ಗಿಟ್ಟಿಸಿಕೊಂಡಿರುವ ಈ ಚೆಲುವೆ ಭಾರೀ ಸಂಭಾವನೆಗೆ ಬೇಡಿಕೆ ಇಡುತ್ತಿದ್ದಾರೆ.

First published:

  • 17

    Tamannaah Bhatia: ಬಾಲಯ್ಯ ಸಿನಿಮಾದಲ್ಲಿ ಡ್ಯಾನ್ಸ್ ಮಾಡೋಕೆ ತಮನ್ನಾ ಕೇಳಿದ್ದೆಷ್ಟು?

    ಸ್ಟಾರ್ ಹೀರೋಯಿನ್ ತಮನ್ನಾ ಸತತವಾಗಿ ದೊಡ್ಡ ಹೀರೋಗಳ ಜೊತೆ ನಟಿಸುತ್ತಾ ಮತ್ತೊಂದೆಡೆ ಐಟಂ ಸಾಂಗ್ಸ್ ಮಾಡುತ್ತಿದ್ದಾರೆ. ಜೈ ಲವಕುಶ ಸಿನಿಮಾದಲ್ಲಿ ಎನ್ ಟಿಆರ್ ಜೊತೆ ಹೆಜ್ಜೆ ಹಾಕಿದ ಈ ಚೆಲುವೆ ಸರಿಲೇರು ನೀಕೆವ್ವರು ಸಿನಿಮಾದಲ್ಲಿ ಮಹೇಶ್ ಬಾಬು ಜೊತೆ ನಟಿಸಿದ್ದರು. ಇದೀಗ ಹಿರಿಯ ನಾಯಕ ಬಾಲಯ್ಯ ಬಾಬು ಜೊತೆ ಹೆಜ್ಜೆ ಹಾಕಲು ರೆಡಿಯಾಗುತ್ತಿದ್ದಾರೆ.

    MORE
    GALLERIES

  • 27

    Tamannaah Bhatia: ಬಾಲಯ್ಯ ಸಿನಿಮಾದಲ್ಲಿ ಡ್ಯಾನ್ಸ್ ಮಾಡೋಕೆ ತಮನ್ನಾ ಕೇಳಿದ್ದೆಷ್ಟು?

    ಅನಿಲ್ ರವಿಪುಡಿ-ಬಾಲಕೃಷ್ಣ ಕಾಂಬಿನೇಷನ್‌ನ ಮುಂಬರುವ ಚಿತ್ರ NBK 108 ನಲ್ಲಿ ತಮನ್ನಾ ಸ್ಪೆಷಲ್ ಸಾಂಗ್ ಮಾಡಲಿದ್ದಾರೆ. ನಿರ್ದೇಶಕ ಅನಿಲ್ ರವಿಪುಡಿ ಅವರೊಂದಿಗೆ ತಮನ್ನಾ ಉತ್ತಮ ಸಂಬಂಧವನ್ನು ಹೊಂದಿರುವ ಕಾರಣ, ಈ ಚಿತ್ರದಲ್ಲಿ ಅವರೊಂದಿಗೆ ಸ್ಪೆಷಲ್ ಸಾಂಗ್ ಮಾಡಲು ನಿರ್ಧರಿಸಿದ್ದಾರೆ.

    MORE
    GALLERIES

  • 37

    Tamannaah Bhatia: ಬಾಲಯ್ಯ ಸಿನಿಮಾದಲ್ಲಿ ಡ್ಯಾನ್ಸ್ ಮಾಡೋಕೆ ತಮನ್ನಾ ಕೇಳಿದ್ದೆಷ್ಟು?

    ಮೊದಲ ಬಾರಿಗೆ ಬಾಲಯ್ಯ ಬಾಬು ಜೊತೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕಿದ್ದಕ್ಕೆ ತಮನ್ನಾ ತುಂಬಾ ಖುಷಿಯಾಗಿದ್ದಾರೆ. ಆದರೆ ಸಂಭಾವನೆ ವಿಚಾರದಲ್ಲಿ ಯಾವುದೇ ಕಡಿತ ಇಲ್ಲ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಬಂದಿರುವ ಮಾಹಿತಿ ಪ್ರಕಾರ ಈ ಐಟಂ ಸಾಂಗ್‌ಗಾಗಿ ತಮನ್ನಾ ಒಂದೂವರೆ ಕೋಟಿಯವರೆಗೂ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

    MORE
    GALLERIES

  • 47

    Tamannaah Bhatia: ಬಾಲಯ್ಯ ಸಿನಿಮಾದಲ್ಲಿ ಡ್ಯಾನ್ಸ್ ಮಾಡೋಕೆ ತಮನ್ನಾ ಕೇಳಿದ್ದೆಷ್ಟು?

    ಎನ್‌ಬಿಕೆ 108 ಎಂಬ ವರ್ಕಿಂಗ್ ಶೀರ್ಷಿಕೆಯೊಂದಿಗೆ ಅನಿಲ್ ರವಿಪುಡಿ ನಿರ್ದೇಶನದಲ್ಲಿ ಈ ಚಿತ್ರ ತಯಾರಾಗುತ್ತಿದೆ. ತಮ್ಮದೇ ಬ್ರಾಂಡ್ ಕಾಮಿಡಿ ಸೇರಿಸಿ ಪವರ್ ಫುಲ್ ಆಕ್ಷನ್ ಎಂಟರ್ ಟೈನರ್ ಆಗಿ ಈ ಸಿನಿಮಾ ಮಾಡಲು ಹೊರಟಿರುವ ಅನಿಲ್ ರವಿಪುಡಿ ಈ ಸಿನಿಮಾಗೆ ಪರ್ಫೆಕ್ಟ್ ಪ್ಲಾನ್ ಮಾಡುತ್ತಿದ್ದಾರೆ. ಬಾಲಯ್ಯ ಬಾಬು ಅವರ ಕೆರಿಯರ್‌ನಲ್ಲಿ ಇದೊಂದು ವಿಭಿನ್ನ ಸಿನಿಮಾ ಎಂದು ಸ್ಕೆಚ್ ಹಾಕಲಾಗಿತ್ತು.

    MORE
    GALLERIES

  • 57

    Tamannaah Bhatia: ಬಾಲಯ್ಯ ಸಿನಿಮಾದಲ್ಲಿ ಡ್ಯಾನ್ಸ್ ಮಾಡೋಕೆ ತಮನ್ನಾ ಕೇಳಿದ್ದೆಷ್ಟು?

    ಸದ್ಯ ಈ ಚಿತ್ರದ ಶೂಟಿಂಗ್ ಶರವೇಗದಲ್ಲಿ ಸಾಗುತ್ತಿದೆ. ಇತ್ತೀಚೆಗಷ್ಟೇ ಎಫ್3 ಸಿನಿಮಾ ಮೂಲಕ ಮೋಜು ಮಸ್ತಿಯ ಹಿನ್ನೆಲೆಯಲ್ಲಿ ಫನ್ ಕ್ರಿಯೇಟ್ ಮಾಡಿದ್ದ ಅನಿಲ್ ರವಿಪುಡಿ ಈ ಬಾರಿ ಬಾಲಯ್ಯ ಬಾಬು ಜೊತೆ ವಿನೂತನ ಪ್ರಯೋಗ ಮಾಡುತ್ತಿದ್ದಾರೆ. ವಿಶಿಷ್ಟ ಕಾಂಬೋದಲ್ಲಿ ಬರುತ್ತಿರುವ ಈ ಸಿನಿಮಾದ ಮೇಲೆ ನಂದಮೂರಿ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

    MORE
    GALLERIES

  • 67

    Tamannaah Bhatia: ಬಾಲಯ್ಯ ಸಿನಿಮಾದಲ್ಲಿ ಡ್ಯಾನ್ಸ್ ಮಾಡೋಕೆ ತಮನ್ನಾ ಕೇಳಿದ್ದೆಷ್ಟು?

    ಈ ಚಿತ್ರವನ್ನು ಶೈನ್ ಸ್ಕ್ರೀನ್ ಬ್ಯಾನರ್ ಅಡಿಯಲ್ಲಿ ಹರೀಶ್ ಪೆದ್ದಿ ಮತ್ತು ಸಾಹು ಗರಪಾಟಿ ನಿರ್ಮಿಸುತ್ತಿದ್ದಾರೆ. ಎಸ್ ಎಸ್ ಥಮನ್ ಸಂಗೀತ ನೀಡಿದ್ದಾರೆ. ಅಖಂಡ ಮತ್ತು ವೀರಸಿಂಹ ರೆಡ್ಡಿಯಂತಹ ದೊಡ್ಡ ಹಿಟ್‌ಗಳ ನಂತರ ಬರುತ್ತಿರುವ ಬಾಲಯ್ಯ ಈ ಸಿನಿಮಾದ ಮೂಲಕ ಹ್ಯಾಟ್ರಿಕ್ ಪಡೆಯುತ್ತಾರೆ ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

    MORE
    GALLERIES

  • 77

    Tamannaah Bhatia: ಬಾಲಯ್ಯ ಸಿನಿಮಾದಲ್ಲಿ ಡ್ಯಾನ್ಸ್ ಮಾಡೋಕೆ ತಮನ್ನಾ ಕೇಳಿದ್ದೆಷ್ಟು?

    ಈ ಸಿನಿಮಾದಲ್ಲಿ ಬಾಲಕೃಷ್ಣ ಅವರ ಪತ್ನಿಯಾಗಿ ಕಾಜಲ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಮೇಲಾಗಿ ಇದರಲ್ಲಿ ಮತ್ತೊಬ್ಬ ನಾಯಕಿಗೆ ಸ್ಕೋಪ್ ಇದ್ದು, ಫ್ಲಾಷ್ ಬ್ಯಾಕ್ ನಲ್ಲಿ ಮತ್ತೊಬ್ಬ ನಾಯಕಿ ಕಾಣಿಸಿಕೊಳ್ಳಲಿದ್ದಾರೆ ಎಂದು ಗೊತ್ತಾಗಿದ್ದು, ಎಲ್ಲರಲ್ಲೂ ಕುತೂಹಲ ಮೂಡಿದೆ.

    MORE
    GALLERIES