Taapsee Pannu Tweet: ಜೆಎನ್ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಗೆ ವಿರೋಧ ವ್ಯಕ್ತಪಡಿಸಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೆಎನ್ಯು ವಿದ್ಯಾರ್ಥಿಗಳ ಪರವಾಗಿ ನಿಂತಿದ್ದರು. ಇದಕ್ಕೆ ದೇಶಾದ್ಯಂತ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿತ್ತು. ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸಿರುವ 'ಚಪಾಕ್' ಸಿನಿಮಾವನ್ನು ಬಾಯ್ಕಟ್ ಮಾಡಬೇಕೆಂಬ ಆಂದೋಲನವೂ ಶುರುವಾಗಿತ್ತು. ಇದೀಗ ಇನ್ನೋರ್ವ ನಟಿ ತಾಪ್ಸಿ ಪನ್ನು ಕೂಡ ಇದೇ ವಿಚಾರವಾಗಿ ಟೀಕೆಗೆ ಒಳಗಾಗಿದ್ದಾರೆ. ಜೆಎನ್ಯುನಲ್ಲಿ ನಡೆದ ಹಲ್ಲೆಯನ್ನು ವಿರೋಧಿಸಿರುವ ತಾಪ್ಸಿಗೆ ಟ್ವಿಟ್ಟರ್ನಲ್ಲಿ ಕ್ಲಾಸ್ ತೆಗೆದುಕೊಂಡಿರುವ ಟ್ವಿಟ್ಟಿಗರು 'ನೀನೂ ಓರ್ವ ಭಾರತೀಯಳಾ?' ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ತಾಪ್ಸಿ ನೀಡಿರುವ ಉತ್ತರವೇನು ಗೊತ್ತಾ?
ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಬೇಡಿಕೆ ಗಿಟ್ಟಿಸಿಕೊಂಡಿರುವ ನಟಿ ತಾಪ್ಸಿ ಪನ್ನು ಇದೀಗ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
2/ 24
ಜೆಎನ್ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಗೆ ವಿರೋಧ ವ್ಯಕ್ತಪಡಿಸಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜೆಎನ್ಯು ವಿದ್ಯಾರ್ಥಿಗಳ ಪರವಾಗಿ ನಿಂತಿದ್ದರು. ಇದಕ್ಕೆ ದೇಶಾದ್ಯಂತ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿತ್ತು.
3/ 24
ಇದೀಗ ಇನ್ನೋರ್ವ ನಟಿ ತಾಪ್ಸಿ ಪನ್ನು ಕೂಡ ಇದೇ ವಿಚಾರವಾಗಿ ಟೀಕೆಗೆ ಒಳಗಾಗಿದ್ದಾರೆ. ಜೆಎನ್ಯುನಲ್ಲಿ ನಡೆದ ಹಲ್ಲೆಯನ್ನು ವಿರೋಧಿಸಿರುವ ತಾಪ್ಸಿಗೆ ಟ್ವಿಟ್ಟರ್ನಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.
4/ 24
9 ವರ್ಷದ ಹಿಂದೆ ಟಾಲಿವುಡ್ ಮೂಲಕ ನಟನಾಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ತಾಪ್ಸಿ ತಮಿಳಿನ 'ಆಡುಕಲಂ', 'ಕಾಂಚನಾ-2', ತೆಲುಗಿನ 'ಮಿ. ಪರ್ಫೆಕ್ಟ್', ಹಿಂದಿಯ 'ಬೇಬಿ', 'ಪಿಂಕ್', 'ಮುಲ್ಕ್' ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.
5/ 24
ಜೆಎನ್ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆಯನ್ನು ಖಂಡಿಸಿರುವ ತಾಪ್ಸಿ ಪನ್ನು ಅವರನ್ನು ಟ್ವಿಟ್ಟರ್ನಲ್ಲಿ ಟ್ರೋಲ್ ಮಾಡಲಾಗುತ್ತಿದೆ.
6/ 24
ಟ್ವಿಟ್ಟಿಗನೊಬ್ಬ ತಾಪ್ಸಿ ಪನ್ನು ಮೇಲೆ ಕೆಂಡ ಕಾರಿದ್ದು, ಜೆಎನ್ಯು ವಿದ್ಯಾರ್ಥಿಗಳ ಪರವಾಗಿ ಮಾತನಾಡುತ್ತಿರುವ ನೀನೂ ಓರ್ವ ಭಾರತೀಯಳೇ? ಎಂದು ಪ್ರಶ್ನಿಸಿದ್ದಾನೆ.
7/ 24
ಅದಕ್ಕೆ ಅಷ್ಟೇ ಖಾರವಾಗಿ ಉತ್ತರಿಸಿರುವ ತಾಪ್ಸಿ 'ಓಹ್, ನಾನು ಭಾರತೀಯಳು ಎನ್ನುವುದಕ್ಕೆ ಈಗ ನಿಗೂ ಕೂಡ ದಾಖಲೆ ತೋರಿಸಬೇಕಾ?' ಎಂದು ಪ್ರಶ್ನಿಸಿದ್ದಾಳೆ.
8/ 24
ಸಿಎಎ, ಎನ್ಆರ್ಸಿ ವಿರೋಧಿಸಿ ಆಂದೋಲನಗಳು ನಡೆಯುತ್ತಿವೆ. ಭಾರತೀಯ ಪ್ರಜೆ ಎಂಬುದಕ್ಕೆ ಸೂಕ್ತ ದಾಖಲೆ ಬೇಕೆಂದು ಸರ್ಕಾರ ನಿಯಮ ಜಾರಿಗೆ ತರಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ತಾಪ್ಸಿ ಪನ್ನು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
9/ 24
ತಾಪ್ಸಿ ಪನ್ನು ಟ್ವೀಟ್ಗೆ ಹಲವು ಜನ ಮೆಚ್ಚುಗೆ ಸೂಚಿಸಿದ್ದಾರೆ.
10/ 24
ಇನ್ನು ಕೆಲವರು ತಾಪ್ಸಿ ಕಾಲೆಳೆದಿದ್ದು, 'ಭಾರತೀಯಳೆಂದು ಸಾಬೀತುಪಡಿಸಲು ಆಕೆಯ ಬಳಿ ಸರಿಯಾದ ದಾಖಲೆಗಳು ಇಲ್ಲವೆಂದು ಕಾಣುತ್ತದೆ. ಅದಕ್ಕೆ ಆಕೆ ಸಿಟ್ಟಾಗಿದ್ದಾಳೆ' ಎಂದು ವ್ಯಂಗ್ಯವಾಡಿದ್ದಾರೆ.
11/ 24
ತಾಪ್ಸಿ ಪನ್ನು ಅಭಿನಯದ 'ಬೇಬಿ', 'ಪಿಂಕ್', 'ದಿ ಗಾಝೀ ಅಟ್ಯಾಕ್', 'ನಾಮ್ ಶಬಾನಾ', 'ಸೂರಮಾ', 'ಮಿಷನ್ ಮಂಗಲ್' ಹಾಗೂ 'ಸಾಂಡ್ ಕಿ ಆಂಖ್' ಚಿತ್ರಗಳು ಸೂಪರ್ ಹಿಟ್ ಆಗಿವೆ.
12/ 24
2019ರಲ್ಲಿ ತಾಪ್ಸಿ ನಟನೆಯ ಸುಜಯ್ ಘೋಷ್ ಅವರ ಬದ್ಲಾ, ಅಶ್ವಿನ್ ಸರವಣನ್ ಅವರ ಗೇಮ್ ಓವರ್, ಜಗನ್ ಶಕ್ತಿ ಅವರ ಮಿಷನ್ ಮಂಗಲ್ ಮತ್ತು ತುಷಾರ್ ಹೀರಾನಂದಾನಿ ಅವರ ಸಾಂದ್ ಕಿ ಆಂಖ್ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿದ್ದವು.
13/ 24
ಈ ವರ್ಷ ತಾಪ್ಸಿ ಬ್ಯಾಕ್ ಟು ಬ್ಯಾಕ್ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ವರ್ಷ 'ರಶ್ಮಿ ರಾಕೆಟ್', 'ಥಪ್ಪಡ್', 'ಷಭಾಶ್ ಮಿಟ್ಟೂ', 'ಹಸೀನ್ ದಿಲ್ ರುಬಾ', 'ವೆಮೆನಿಯಾ' ಹಾಗೂ 'ತಡಕಾ' ಚಿತ್ರಗಳ ಮೂಲಕ ತಾಪ್ಸಿ ತೆರೆಗೆ ಬರಲಿದ್ದಾರೆ.