Taapsee Pannu: ಮತ್ತೊಮ್ಮೆ ಕ್ರೀಡಾಪಟು ಪಾತ್ರದಲ್ಲಿ ತಾಪ್ಸಿ ಪನ್ನು: ಹೊಸ ಲುಕ್ನಲ್ಲಿ ಮಿಂಚಿದ ನಟಿ..! Rashmi Rocket: ತಾಪ್ಸಿ ಪನ್ನು ಈಗಾಗಲೇ ಕ್ರೀಡಾಪಟು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಕಿ ಹಿಡಿದು ಮೈದಾನದಲ್ಲಿ ಧೂಳೆಬ್ಬಿಸಿದ್ದಾರೆ. ಈಗ ಮತ್ತೆ ಅಥ್ಲೀಟ್ ಆಗಿ ಮೈದಾನಕ್ಕಿಳಿಯುವ ತಯಾರಿಯಲ್ಲಿದ್ದಾರೆ. ಮುಂದಿದೆ ತಾಪ್ಸಿಯ ಹೊಸ ಸಿನಿಮಾದ ವಿವರ. (ಚಿತ್ರಗಳು ಕೃಪೆ ತಾಪ್ಸಿ ಪನ್ನು ಇನ್ಸ್ಟಾಗ್ರಾಂ ಖಾತೆ)
1 / 10
ತಾಪ್ಸಿ ಪನ್ನು ಇತ್ತೀಚೆಗಷ್ಟೆ ತಮ್ಮ ಹೊಸ ಸಿನಿಮಾದ ಪೋಸ್ಟರ್ ಹಂಚಿಕೊಂಡಿದ್ದು, ಅದರಲ್ಲಿ ಸಖತ್ ಕ್ರೇಜಿ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
2 / 10
ತಾಪ್ಸಿ ಪನ್ನು ಈ ಸಲ ಅಥ್ಲೀಟ್ ಆಗಿ ಮೈದಾನಕ್ಕಿಳಿಯಲಿದ್ದು, ಮಿಂಚಿನಂತೆ ಓಡಲಿದ್ದಾರಂತೆ.
3 / 10
ವೇಗವಾಗಿ ಓಡುವ ರಶ್ಮಿ ರಾಕೆಟ್ ಎಂಬ ಪಾತ್ರದಲ್ಲಿ ತಾಪ್ಸಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತಾಗಿ ತಮ್ಮ ಸಿನಿಮಾ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ ನಟಿ.
4 / 10
ತಾಪ್ಸಿ ಈ ಹಿಂದೆ ಹಾಕಿ ಹಿಡಿದು ಎರಡು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಒಂದು ಸೂರ್ಮಾ ಹಾಗೂ ಮತ್ತೊಂದು ಮನ್ಮರ್ಜಿಯಾನ್ ಸಿನಿಮಾ.
5 / 10
ಇನ್ನು ಮಹಿಳಾ ಕ್ರಿಕೆಟ್ ಆಟಗಾರ್ತಿ ಮಿಥಾಲಿ ಅವರ ಪಾತ್ರಕ್ಕೂ ಬಣ್ಣ ಹಚ್ಚಿದ್ದಾರೆ. ಆದರೆ ಈ ಸಿನಿಮಾ ಇನ್ನೂ ಚಿತ್ರೀಕರಣದ ಹಂತದಲ್ಲಿದೆ.
6 / 10
ಈಗ ಗುಜರಾತಿನ ಕಚ್ನಲ್ಲಿರುವ ಅಥ್ಲೀಟ್ ರಶ್ಮಿ ರಾಕೆಟ್ ಪಾತ್ರಕ್ಕೆ ಜೀವ ತುಂಬಲಿದ್ದಾರೆ.
7 / 10
ಕಳೆದ ವರ್ಷವೇ ನಟ ಅಕ್ಷಯ್ ಕುಮಾರ್ ಈ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದರು. ಈಗ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.
8 / 10
ತಾಪ್ಸಿ ಪನ್ನು ಅವರ ಹೊಸ ಸಿನಿಮಾಗೆ ಹೃತಿಕ್ ರೋಷನ್ ಹಾಗೂ ಭೂಮಿ ಪೆಡ್ನೆಕರ್ ಶುಭ ಕೋರಿದ್ದಾರೆ.
9 / 10
ನವೆಂಬರ್ನಿಂದ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಆಕರ್ಷ್ ಖುರಾನ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
10 / 10
ಈ ಸಿನಿಮಾದಲ್ಲೂ ತಾಪ್ಸಿ ಕ್ರೀಡಾಪಟುವಿನ ಜೊತೆಗೆ ಗೃಹಿಣಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
First published: August 26, 2020, 14:18 IST