Swetha Changappa: ಮುದ್ದಾದ ಮಗನೊಂದಿಗೆ ಕ್ಯಾಮೆರಾಗೆ ಪೋಸ್ ಕೊಟ್ಟ ಶ್ವೇತಾ ಚೆಂಗಪ್ಪ
ನಟಿ, ನಿರೂಪಕಿ ಶ್ವೇತಾ ಚೆಂಗಪ್ಪಗಿಂತ ಈಗ ಸಾಮಾಜಿಕ ಜಾಲತಾಣದಲ್ಲಿ ಆಕೆಯ ಮಗನದೇ ಸದ್ದು. ಬ್ಯುಸಿ ನಟಿಯಾಗಿದ್ದ ಶ್ವೇತಾ ಈಗ ಮಗನ ಆರೈಕೆಯಲ್ಲಿಯೇ ತಲ್ಲೀನರಾಗಿದ್ದಾರೆ. ಇತ್ತೀಚೆಗಷ್ಟೇ ವರ್ಷ ಪೂರೈಸಿದ ಜಿಯಾನ್ ಅಯ್ಯಪ್ಪ ಕೊಡಗಿನ ಕುವರನ ವೇಷ ತೊಟ್ಟು ಸದ್ದು ಮಾಡಿದ್ದ. ಈ ಮುದ್ದಾದ ಫೋಟೋಗಳನ್ನು ಶ್ವೇತಾ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.