ಸುಶಾಂತ್ ಸಿಂಗ್ ರಜಪೂತ್ ಸಾವನ್ನಪ್ಪಿ ಮೂರು ವರ್ಷಗಳ ನಂತರ ಅವರ ನೆಚ್ಚಿನ ನಾಯಿ ಫಡ್ಜ್ ಸಾವನ್ನಪ್ಪಿದೆ. ಸುಶಾಂತ್ ಸಹೋದರಿ ಪ್ರಿಯಾಂಕ ಸಿಂಗ್ ಅವರು ಲೇಟೆಸ್ಟ್ ಪೋಸ್ಟ್ನಲ್ಲಿ ಈ ವಿಚಾರ ರಿವೀಲ್ ಮಾಡಿದ್ದಾರೆ.
2/ 8
ಬಾಲಿವುಡ್ ನಟನ ಶಾಕಿಂಗ್ ಸಾವು ಸಂಭವಿಸಿ ಮೂರು ವರ್ಷಗಳ ನಂತರ ನಟನ ನೆಚ್ಚಿನ ನಾಯಿ ಮೃತಪಟ್ಟಿದೆ. ಕಪ್ಪು ಬಣ್ಣದ ಈ ನಾಯಿ ಹೆಸರು ಫಡ್ಜ್.
3/ 8
ನಟನ ಬರ್ತ್ ಆನ್ಯವರ್ಸರಿಗೆ ಕೆಲವೇ ದಿನ ಇರುವಾಗ ಈ ಸುದ್ದಿ ಹೊರಬಿದ್ದಿದೆ. ಸುಶಾಂತ್ ಹಾಗೂ ತಾನು ಫಡ್ಜ್ ಜೊತೆಗಿರುವ ಕೆಲವು ಥ್ರೋಬ್ಯಾಕ್ ಫೋಟೋ ಶೇರ್ ಮಾಡಿದ್ದಾರೆ ಪ್ರಿಯಾಂಕ.
4/ 8
ಫಡ್ಜ್ ನೀನು ಸ್ವರ್ಗದಲ್ಲಿರುವ ನಿನ್ನ ಗೆಳೆಯನ ಜೊತೆ ಸೇರಿಕೊಂಡಿದ್ದಿ. ನಾವೂ ನಿನ್ನ ಜೊತೆ ಸೇರುತ್ತೇವೆ. ನಿಜಕ್ಕೂ ಹಾರ್ಟ್ ಬ್ರೇಕ್ ಆಗಿದೆ ಎಂದು ಪ್ರಿಯಾಂಕ ಕ್ಯಾಪ್ಶನ್ನಲ್ಲಿ ಬರೆದಿದ್ದಾರೆ.
5/ 8
ಅವರು ಪೋಸ್ಟ್ ಅನ್ನು ಹಂಚಿಕೊಂಡ ತಕ್ಷಣ ಹಲವಾರು ಅಭಿಮಾನಿಗಳು ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಅವರ ದುಃಖವನ್ನು ವ್ಯಕ್ತಪಡಿಸಲು ಕಮೆಂಟ್ ಮಾಡಿದ್ದಾರೆ.
6/ 8
ಅಭಿಮಾನಿಯೊಬ್ಬರು ಕಮೆಂಟ್ ಮಾಡಿ 'ಅವರು ಈಗ ಸ್ವರ್ಗದಲ್ಲಿ ಮತ್ತೆ ಒಂದಾಗಿದ್ದಾರೆ. ನಾಯಿಗಳು ತಮ್ಮ ಮಾಲೀಕರು ಹೋದ ನಂತರ ಶಾಶ್ವತವಾಗಿ ಉಳಿಯುವುದಿಲ್ಲ ಎಂದಿದ್ದಾರೆ.
7/ 8
ಸುಶಾಂತ್ಗೆ ಸಂಬಂಧಿಸಿದ ಯಾರಾದರೂ/ ಯಾವುದಾದರೂ ಕೂಡಾ ಅದು ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ನಾನು ಮೂಕನಾಗಿದ್ದೇನೆ. ತುಂಬಾ ನೋವಾಗುತ್ತಿದೆ ಎಂದು ಇನ್ನೊಬ್ಬ ಅಭಿಮಾನಿ ಕಮೆಂಟ್ ಮಾಡಿದ್ದಾರೆ.
8/ 8
ನಟ ಸುಶಾಂತ್ ಫಡ್ಜ್ ಜೊತೆಗಿರುವ ಹಲವಾರು ಫೋಟೋಗಳು ಈಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ.