Sushant Singh Rajput: ಸಾಯುವುದಕ್ಕೂ ಮೊದಲು ತನ್ನ ಹೆಸರನ್ನೇ ಎರಡು ಗಂಟೆ ಗೂಗಲ್ ಮಾಡಿದ್ದ ಸುಶಾಂತ್ ಸಿಂಗ್!
Sushant Singh Rajput Death Case: ನೋವಿಲ್ಲದೆ ಸಾಯುವುದು ಹೇಗೆ ಎನ್ನುವ ಬಗ್ಗೆಯೂ ಸುಶಾಂತ್ ಹುಡುಕಿದ್ದರು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಈ ಮೂಲಕ ಆಗಲೇ ಅವರು ಸಾಯುವ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದೆ.
ಸುಶಾಂತ್ ಸಿಂಗ್ ಸಾವಿನ ವಿಚಾರ ಕಳೆದ ಸುಮಾರು ಒಂದುವರೆ ತಿಂಗಳಿಂದ ಭಾರೀ ಚರ್ಚೆಯಲ್ಲಿದೆ. ಅವರ ಸಾವಿನ ಕುರಿತಾಗಿ ಸಿಬಿಐ ತನಿಖೆ ನಡೆಯಬೇಕು ಎಂದು ಅಭಿಮಾನಿಗಳು ಒತ್ತಾಯಿಸುತ್ತಲೇ ಇದ್ದಾರೆ.
2/ 12
ಮಧ್ಯಮ ವರ್ಗದಿಂದ ಬಂದು ಇಷ್ಟೊಂದು ದೊಡ್ಡ ಮಟ್ಟಿನ ಸಾಧನೆ ಮಾಡಿದ್ದರೂ ಸುಶಾಂತ್ ಸಿಂಗ್ ಈ ರೀತಿ ನಿರ್ಧಾರ ತೆಗೆದುಕೊಂಡಿದ್ದೇಕೆ ಎನ್ನುವ ಪ್ರಶ್ನೆ ಅನೇಕರದ್ದು.
3/ 12
ಹೀಗಾಗಿ, ಸುಶಾಂತ್ ಸಾವಿನ ಹಿಂದೆ ಏನೋ ರಹಸ್ಯವಿದೆ ಎನ್ನುವುದು ಅನೇಕರ ಅನುಮಾನ. ಇದೇ ಕಾರಣಕ್ಕೆ ಸಿಬಿಐ ತನಿಖೆಗೆ ಒತ್ತಾಯಿಸಲಾಗುತ್ತಿದೆ. ಆದರೆ, ಜನ ಪ್ರತಿನಿಧಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಮಾತ್ರ ಇದಕ್ಕೆ ಬೆಂಬಲ ಸೂಚಿಸುತ್ತಿಲ್ಲ.
4/ 12
ಸುಶಾಂತ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಹೆಸರು ಕೂಡ ಈ ಆತ್ಮಹತ್ಯೆ ಪ್ರಕರಣದಲ್ಲಿ ತಳಕು ಹಾಕಿಕೊಂಡಿದೆ.
5/ 12
ಸುಶಾಂತ್ ಸಾವಿಗೆ ಸಂಬಂಧಿಸಿ ರಿಯಾ ಸೇರಿ 40ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ವೇಳೆ ಯಾವುದೇ ಅನುಮಾನಾಸ್ಪದ ವಿಚಾರಗಳು ಬೆಳಕಿಗೆ ಬಂದಿಲ್ಲ ಎಂದು ಅನೇಕ ಬಾರಿ ಮುಂಬೈ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
6/ 12
ಇಂದು ಮತ್ತೊಂದು ಸುದ್ದಿಗೋಷ್ಠಿ ನಡೆಸಿರುವ ಪೊಲೀಸರು ಮತ್ತಷ್ಟು ಅಚ್ಚರಿಯ ವಿಚಾರ ಹೊರ ಹಾಕಿದ್ದಾರೆ.
7/ 12
ಸುಶಾಂತ್ ಸಾಯುವುದಕ್ಕೂ ಮೊದಲು ಎರಡು ಗಂಟೆಗಳ ಕಾಲ ತಮ್ಮ ಹೆಸರನ್ನು ಗೂಗಲ್ ನಲ್ಲಿ ಸರ್ಚ್ ಮಾಡಿದ್ದರಂತೆ. ಅಷ್ಟೇ ಅಲ್ಲ ಅವರ ಮಾಜಿ ಪಿಎ ದಿಶಾ ಸಾಲಿಯಾನ್ ಆತ್ಮಹತ್ಯೆ ಮಾಡಿಕೊಂಡ ವಿಚಾರದಲ್ಲಿ ಸುಶಾಂತ್ ಹೆಸರನ್ನು ತಳುಕು ಹಾಕಿದ ಸುದ್ದಿಗಳನ್ನು ಓದಿ ಸುಶಾಂತ್ ಬೇಸರಗೊಂಡಿದ್ದರಂತೆ.
8/ 12
ಇನ್ನು, ನೋವಿಲ್ಲದೆ ಸಾಯುವುದು ಹೇಗೆ ಎನ್ನುವ ಬಗ್ಗೆಯೂ ಸುಶಾಂತ್ ಹುಡುಕಿದ್ದರು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಈ ಮೂಲಕ ಆಗಲೇ ಅವರು ಸಾಯುವ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದೆ.