ನಟಿ ಸುರ್ವೀನ್ ಚಾವ್ಲಾ ಎಂದರೆ ಹೆಚ್ಚಿನವರಿಗೆ ನೆನಪಿರಲಿಕ್ಕಿಲ್ಲ. ಅದೇ ಶಿವರಾಜ್ ಕುಮಾರ್ ಅಭಿನಯದ 'ಪರಮೇಶ ಪಾನ್ವಾಲಾ' ಚಿತ್ರದ ಮುದ್ದುಮುಖ ಬೆಡಗಿ ಅಂದರೆ..ಎಸ್ ಆ ಚಿತ್ರದ ನಾಯಕಿಯೇ ಸುರ್ವೀನ್.
2/ 29
ಇನ್ನು ಅರ್ಜುನ್ ಸರ್ಜಾ ಅಭಿನಯದ 'ಅಭಿಮನ್ಯು' ಚಿತ್ರದಲ್ಲೂ ಸುರ್ವೀನ್ ಚಾವ್ಲಾ ಸಖತ್ತಾಗೆ ಕಾಣಿಸಿಕೊಂಡಿದ್ದರು.
3/ 29
ಸ್ಯಾಂಡಲ್ವುಡ್ ಮೂಲಕವೇ ಸಿನಿರಂಗಕ್ಕೆ ಎಂಟ್ರಿ ಕೊಟ್ಟರೂ ಸುರ್ವೀನ್ ಮಿಂಚಿದ್ದು ಮಾತ್ರ ಪರಭಾಷೆಯಲ್ಲಿ.
4/ 29
ಮೊದಲ ಚಿತ್ರದಲ್ಲೇ ಎಲ್ಲರ ಗಮನ ಸೆಳೆದ ಈ ಪಂಜಾಬಿ ಬೆಡಗಿ ಬಳಿಕ ತಮಿಳು, ತೆಲುಗು, ಪಂಜಾಬಿ ಮತ್ತು ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.
5/ 29
ಅದರಲ್ಲೂ ಬಾಲಿವುಡ್ನಲ್ಲಿ 'ಹೇಟ್ ಸ್ಟೋರಿ 2' ಚಿತ್ರದಲ್ಲಿ ಹಾಟ್ ಅ್ಯಂಡ್ ಬೋಲ್ಡ್ ಲುಕ್ ನಲ್ಲಿ ಕಾಣಿಸಿ ಪಡ್ಡೆ ಹೈಕ್ಳ ನಿದ್ದೆ ಕದ್ದಿದ್ದರು ಸುರ್ವೀನ್.
6/ 29
ಇತ್ತೀಚಿನ ದಿನಗಳಲ್ಲಿ ವೆಬ್ ಸೀರೀಸ್ನಲ್ಲಿ ತೊಡಗಿಸಿಕೊಂಡಿರುವ ಈ ನಟಿ, ಸಿನಿರಂಗದಲ್ಲಿ ತಮಗಾದ ಕಹಿ ಅನುಭವವನ್ನು ಮನಬಿಚ್ಚಿ ಮಾತನಾಡಿದ್ದಾರೆ.
7/ 29
ಪಿಂಕ್ ವಿಲ್ಲಾ ವೆಬ್ಸೈಟ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸುರ್ವೀನ್ ಚಿತ್ರರಂಗದಲ್ಲಿ ಪಾತ್ರಕ್ಕಾಗಿ ಪಲ್ಲಂಗ ಇರುವುದು ಒಪ್ಪಿಕೊಂಡಿದ್ದಾರೆ.
8/ 29
ನನ್ನ ವೃತ್ತಿಜೀವನದ ಅವಧಿಯಲ್ಲಿ ಐದು ಬಾರಿ ಕಾಸ್ಟಿಂಗ್ ಕೌಜ್ ಅನುಭವವಾಗಿತ್ತು.
9/ 29
ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಮೂರು ಬಾರಿ ಮತ್ತು ಬಾಲಿವುಡ್ನಲ್ಲಿ ಎರಡು ಬಾರಿ ಕಾಸ್ಟಿಂಗ್ ಕೌಚ್ ಅನ್ನು ಎದುರಿಸಬೇಕಾಯಿತು ಎಂದು ಹೇಳಿದ್ದಾರೆ.
10/ 29
ಆದರೆ ಅವರ ಇಂತಹ ಕೆಟ್ಟ ಆಫರ್ಗಳನ್ನು ನಾನು ನಿರಾಕರಿಸಿದ್ದೆ ಎಂದು ಸುರ್ವೀನ್ ಹೇಳಿದ್ದಾರೆ. ಅದಾಗ್ಯೂ ಚಿತ್ರರಂಗದಲ್ಲಿ...
11/ 29
ಚಿತ್ರರಂಗದಲ್ಲಿ ನನಗೆ ಹೆಸರಿದ್ದರೂ ಕೆಲ ನಿರ್ದೇಶಕರು ನನ್ನ ಎದೆ ಭಾಗದ ಸೀಳು ನೋಡಲು ಬಯಸುತ್ತಿದ್ದರು. ಮತ್ತೆ ಕೆಲ ಡೈರೆಕ್ಟರ್ಗಳು...
12/ 29
ಮತ್ತೆ ಕೆಲ ಡೈರೆಕ್ಟರ್ಗಳು ತೊಡೆ ನೋಡಲು ಇಚ್ಛಿಸುತ್ತಿದ್ದರು ಎಂದು 'ಪರಮೇಶ ಪಾನ್ವಾಲಾ' ನಟಿ ಹೇಳಿದ್ದಾರೆ.
13/ 29
ಒಂದು ಬಾರಿ ನಾನು ಆಡಿಷನ್ಗೆ ಹೋಗಿದ್ದಾಗ, ವ್ಯಕ್ತಿಯೊಬ್ಬರು ನನ್ನ ತೂಕ ಹೆಚ್ಚಾಗಿದೆ ಎಂದು ಹೇಳಿದ್ದರು.
14/ 29
ಆದರೆ ನನ್ನ ತೂಕ ಕೇವಲ 56 ಕೆಜಿ ಇತ್ತು. ಆ ವ್ಯಕ್ತಿಗೆ ಕನ್ನಡಕದ ಅಗತ್ಯ ಇತ್ತು ಅಂತ ಕಾಣಿಸುತ್ತದೆ ಎಂದು ತಮ್ಮ ಕಹಿ ಅನುಭವವನ್ನು ಸುರ್ವೀನ್ ವ್ಯಂಗ್ಯವಾಡಿದ್ದಾರೆ.
15/ 29
ಈ ಹಿಂದೊಮ್ಮೆ ಕೂಡ ನಟಿ ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿಯೆತ್ತಿದ್ದರು. ಇದಾಗ್ಯೂ ನೇಮ್-ಫೇಮ್ ಗಳಿಸಿದರೂ ಅಂತಹದ್ದೇ ಕೆಟ್ಟ ಅನುಭವಗಳಾಗುತ್ತಿರುತ್ತದೆ ಎಂದು ಸುರ್ವೀನ್ ಹೇಳಿದ್ದಾರೆ.
16/ 29
ವಿವಿಧ ಭಾಷೆಗಳಲ್ಲಿ 19ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ಸುರ್ವೀನ್ ಚಾವ್ಲಾ ಅವರ ಹೇಳಿಕೆಯು ಇದೀಗ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.
17/ 29
ಇದರೊಂದಿಗೆ ಸಿನಿರಂಗದಲ್ಲಿ ಮೀಟೂ ಅಭಿಯಾನ ಮತ್ತೆ ಪ್ರಾರಂಭವಾಗಬೇಕೆಂಬ ಕೂಗು ಕೇಳಿ ಬಂದಿದೆ.