ಎನ್.ಟಿ.ಆರ್ ಅವರ ಶತದಿನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು 22 ವರ್ಷಗಳ ನಂತರ ಇತ್ತೀಚೆಗೆ ಶೂಟಿಂಗ್ಗಾಗಿ ಹೈದರಾಬಾದ್ಗೆ ಬಂದಾಗ, ನಾನು ಭಾರತದಲ್ಲಿದ್ದೀನಾ ಅಥವಾ ಅದು ನ್ಯೂಯಾರ್ಕ್‌ನಲ್ಲಿದ್ದೀನಾ ಎಂದು ಗೊಂದಲ ಉಂಟಾಯಿತು. ಜುಬಿಲಿ ಹಿಲ್ಸ್ ಮತ್ತು ಬಂಜಾರಾ ಹಿಲ್ಸ್ ಪ್ರದೇಶಗಳು ಹೆಚ್ಚು ಅಭಿವೃದ್ಧಿ ಹೊಂದಿವೆ ಎಂದು ಹೇಳಿದರು. ರಜನೀಕಾಂತ್ ಬಾಲಕೃಷ್ಣ ಬಗ್ಗೆ ಮಾತನಾಡುತ್ತಾ, ಕಣ್ಣಿನ ನೋಟದಲ್ಲೆ ಆತ ಕೊಲ್ಲುತ್ತಾರೆ. ಆತ ಒದ್ದರೆ ಕಾರು 30 ಅಡಿ ದೂರ ಹೋಗುತ್ತದೆ. ಇವರಿಗೆ ಸಿಟ್ಟು ಜಾಸ್ತಿ, ಆದರೆ ಅವರ ಮನಸ್ಸು ಬೆಣ್ಣೆಯಂತಿದೆ. ಅವರಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದರು. (Photo : Twitter)
ಇದೇ ಸಂದರ್ಭದಲ್ಲಿ ಹೈದರಾಬಾದ್ ನಗರ ನಿರ್ಮಾಣದಲ್ಲಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ದೃಷ್ಟಿಕೋನದ ಕುರಿತು ಸೂಪರ್ಸ್ಟಾರ್ ನಟ ರಜನೀಕಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ನಗರವನ್ನು ನ್ಯೂಯಾರ್ಕ್ ನಗರ ಹೋಲುವಂತೆ ನಿರ್ಮಾಣ ಮಾಡಲು ಚಂದ್ರಬಾಬು ಸಾಕಷ್ಟು ಶ್ರಮವಹಿಸಿದ್ದಾರೆ. ಇಂದು ಲಕ್ಷಾಂತರ ತೆಲುಗು ಜನರು ಐಟಿ ವಲಯದಲ್ಲಿ ಕೆಲಸ ಮಾಡಿ, ಐಷಾರಾಮಿಯಾಗಿ ಜೀವನ ನಿರ್ವಹಣೆ ಮಾಡಲು ಕಾರಣ ಚಂದ್ರಬಾಬು ಅವರು. ಚಂದ್ರಬಾಬು ಅವರು ವಿಷನ್ 2047 ಜಾರಿಗೆ ಬಂದರೆ ರಾಜ್ಯ ದೇಶದಲ್ಲಿಯೇ ಅಗ್ರಸ್ಥಾನದಲ್ಲಿರಲಿದೆ. ಅವರ ಯೋಜನೆಗಳು ಜಾರಿಗೆ ತರಲು ದೇವರು ಕೂಡ ಬಯಸಿದ್ದಾನೆ ಎಂದಿದ್ದಾರೆ. (Photo : Twitter)
1996-97ರಲ್ಲಿ ಅವರು 2020 ವಿಷನ್ ಕುರಿತು ತಿಳಿಸಿದರು. ಅವರು ಐಟಿ ಉದ್ಯಮದ ಭವಿಷ್ಯವನ್ನು ಅಂದಾಜಿಸಿದ್ದರು. ಅಂದು ಅವರು ಹೇಳಿದ ಡಿಜಿಟಲ್ ಜಗತ್ತಿನ ಬಗ್ಗೆ ಯಾರಿಗೂ ಗಮನವೂ ಇರಲಿಲ್ಲ. ಇದೀಗ ಹೈದರಾಬಾದ್ ಹೈ-ಟೆಕ್ ಸಿಟಿಯಾಗಿ ಮಾರ್ಪಟ್ಟಿದೆ. ಬಿಲ್ಗೇಟ್ಸ್ನಂತಹ ಐಟಿ ದಿಗ್ಗಜರು ಇಲ್ಲಿಗೆ ಆಗಮಿಸಿ, ಕಂಪನಿಯನ್ನು ಶುರು ಮಾಡಿದ್ದಾರೆ ಎಂದು ಆಂಧ್ರ ಪ್ರದೇಶದ ಮಾಜಿ ಸಿಎಂರನ್ನು ಕೊಂಡಾಡಿದರು. (Photo : Twitter)
ಇನ್ನು ರಜನಿಕಾಂತ್ ಸಿನಿಮಾಗಳ ವಿಚಾರಕ್ಕೆ ಬಂದರೆ. ರಜನಿಕಾಂತ್ ಪುತ್ರಿ ಐಶ್ವರ್ಯಾ 'ಲಾಲ್ ಸಲಾಂ' ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರದಲ್ಲಿ ರಜನಿಕಾಂತ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಯನ್ನು ಹುಟ್ಟು ಹಾಕಿದೆ. (Photo : Twitter)
ಈ ಚಿತ್ರದ ಫ್ಲ್ಯಾಶ್ ಬ್ಯಾಕ್ ನಲ್ಲಿ ರಜನಿಕಾಂತ್ ನಟಿಸಲಿದ್ದಾರೆ. ರಜನಿಕಾಂತ್‌ಗೆ ಅತಿಥಿ ಪಾತ್ರಗಳು ಹೊಸದೇನಲ್ಲ. ಈ ಹಿಂದೆ ವಿಜಯಾ, ತೆಲುಗಿನಲ್ಲಿ ಪೆದರಾಯುಡು ಮತ್ತು ಹಿಂದಿಯಲ್ಲಿ ಹಲವು ಅತಿಥಿ ಪಾತ್ರಗಳನ್ನು ನಿರ್ವಹಿಸಿದ ದಾಖಲೆಯನ್ನು ತಲೈವಾ ಹೊಂದಿದ್ದಾರೆ. ಈಗ ಅವರು ತಮ್ಮ ಮಗಳ ನಿರ್ದೇಶನದಲ್ಲಿ ವಿಶೇಷ ಅತಿಥಿ ಪಾತ್ರದಲ್ಲಿ ರಂಜಿಸಲಿದ್ದಾರೆ. (Photo : Twitter)
ಇದೇ ವೇಳೆ ಪೆದ್ದನ್ನ ನಂತರ ತಮಿಳಿನಲ್ಲಿ ಕ್ರಮವಾಗಿ 'ಕೋಲಮಾವು ಕೋಗಿಲೆ' ಮತ್ತು 'ವರುಣ್ ಡಾಕ್ಟರ್' ಬೀಸ್ಟ್' ಚಿತ್ರಗಳನ್ನು ನಿರ್ದೇಶಿಸಿರುವ ನೆಲ್ಸನ್ ದಿಲೀಪ್ ಕುಮಾರ್ ಅವರ ನಿರ್ದೇಶನದಲ್ಲಿ ಅವರು ತಮ್ಮ 169 ನೇ ಚಿತ್ರವನ್ನು ಮಾಡುತ್ತಿದ್ದಾರೆ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಕಲಾನಿಧಿ ಮಾರನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅನಿರುದ್ ರವಿಚಂದ್ರನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಈ ಸಿನಿಮಾ ಮಾಡುವಾಗ ರಜನಿಕಾಂತ್ ತಮ್ಮ ಮಗಳು ನಿರ್ದೇಶನದ ‘ಲಾಲ್ ಸಲಾಂ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಜೀವಿತಾ ರಾಜಶೇಖರ್ ರಜನಿಕಾಂತ್ ಅವರ ತಂಗಿಯಾಗಿ ನಟಿಸಲಿದ್ದಾರೆ ಎಂದು ವರದಿಯಾಗಿದೆ. (Photo : Twitter)
ಇನ್ನು ರಜನಿಕಾಂತ್ ವಿಷಯಕ್ಕೆ ಬಂದರೆ. ಕಳೆದ ಕೆಲವು ವರ್ಷಗಳಿಂದ ರಜನಿಕಾಂತ್ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿಲ್ಲ. ರೋಬೋಟ್ ನಂತರ ರಜನಿಕಾಂತ್‌ಗೆ ಆ ಮಟ್ಟದ ಯಶಸ್ಸು ಸಿಗಲಿಲ್ಲ. ಈ ನಡುವೆ ಕೊಚ್ಚಡಿಯನ್, ಲಿಂಗಾ, ಕಾಲಾ, ಕಬಾಲಿ, 2.0 ಸಿನಿಮಾಗಳು ರಜನಿಕಾಂತ್‌ಗೆ ಹಿಟ್ ತಂದುಕೊಡಲಿಲ್ಲ. ಅದಾದ ನಂತರ ದರ್ಬಾರ್ ಸಿನಿಮಾ ಕೂಡ ಸಾಧಾರಣ ಪ್ರದರ್ಶನ ಕಂಡಿತ್ತು. (Photo : Twitter)
ಇತ್ತೀಚೆಗಷ್ಟೇ ಡಾಕ್ಟರ್ ಮತ್ತು ಬೀಸ್ಟ್ ಸಿನಿಮಾ ಮೂಲಕ ಯಶಸ್ಸು ಸಾಧಿಸಿರುವ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಜೊತೆ ಮುಂದಿನ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ‘ಜೈಲರ್’ ಎಂದು ಟೈಟಲ್ ಫೈನಲ್ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ಟೈಟಲ್ ಪೋಸ್ಟರ್ ಜೊತೆಗೆ ರಜನಿಕಾಂತ್ ಅವರ ಲುಕ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. . ಈ ವರ್ಷ ದೀಪಾವಳಿ ಉಡುಗೊರೆಯಾಗಿ ಈ ಚಿತ್ರವನ್ನು ತೆರೆಗೆ ತರಲು ಮುಂದಾಗಿದ್ದಾರೆ. (Photo : Twitter)