ಸಹೋದರನ ಆರೋಗ್ಯ ವಿಚಾರಿಸಿದ ಸೂಪರ್ ಸ್ಟಾರ್ ರಜನಿಕಾಂತ್​​

ಸೂಪರ್ ಸ್ಟಾರ್ ರಜನಿಕಾಂತ್ ಇಂದು ಬೆಂಗಳೂರಿಗೆ ಆಗಮಿಸಿದ್ದರು. ಅವರ ಸಹೋದರ ಸತ್ಯನಾರಾಯಣ ರಾವ್​ ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಯೋಗಕ್ಷೇಮ ವಿಚಾರಿಸಲು ರಜನಿಕಾಂತ್ ಆಸ್ಪತ್ರೆಗೆ ಬಂದಿದ್ದರು ಎನ್ನಲಾಗಿದೆ. ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿರುವ ಅವರಿಗೆ ನಿನ್ನೆ ಆಪರೇಷನ್​​​ ಮಾಡಲಾಗಿದೆ. ನಟ ರಜನಿಕಾಂತ್ ಅವರು ಆಸ್ಪತ್ರೆಗೆ ಬರುತ್ತಾರೆ ಎಂಬ ಸುದ್ದಿ ತಿಳಿದ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಆಸ್ಪತ್ರೆ ಬಳಿ ಬಂದಿದ್ದರು. ಅಭಿಮಾನಿಗಳ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡಬೇಕಾಯಿತು. ಅಪೋಲೋ ಆಸ್ಪತ್ರೆ ಇರುವ ಶೇಷಾದ್ರಿಪುರಂ  ಪ್ರಮುಖ ರಸ್ತೆಗಳಲ್ಲಿ ಇದರಿಂದಾಗಿ ಸಂಚಾರದಟ್ಟಣೆ ಉಂಟಾಗಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಉಂಟಾಯಿತು.

  • News18
  • |
First published: