Rajinikanth: ನನಗೆ ವಿಪರೀತ ಕುಡಿತ ಹಾಗೂ ಸಿಗರೇಟ್ ಚಟವಿತ್ತು; ಪತ್ನಿ ಲತಾ ಪ್ರೀತಿಯೇ ನನ್ನನ್ನು ಬದಲಿಸಿತು! -ರಜನಿಕಾಂತ್

Super star Rajinikanth: ಸೂಪರ್ ಸ್ಟಾರ್ ರಜನಿಕಾಂತ್ ದೇಶ-ವಿದೇಶಗಳಲ್ಲೂ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಲೈವಾ ಚಿತ್ರಕ್ಕಾಗಿ ಫ್ಯಾನ್ಸ್ ಕಾದು ಕುಳಿತ್ತಿರುತ್ತಾರೆ. ರಜನಿಕಾಂತ್ ತಮ್ಮ ವೈಯಕ್ತಿಕ ಜೀವನ ಬಗ್ಗೆ ಹಂಚಿಕೊಂಡಿದ್ದಾರೆ.

First published:

  • 18

    Rajinikanth: ನನಗೆ ವಿಪರೀತ ಕುಡಿತ ಹಾಗೂ ಸಿಗರೇಟ್ ಚಟವಿತ್ತು; ಪತ್ನಿ ಲತಾ ಪ್ರೀತಿಯೇ ನನ್ನನ್ನು ಬದಲಿಸಿತು! -ರಜನಿಕಾಂತ್

    ಭಾರತೀಯ ಚಿತ್ರರಂಗದ ಜೀವಂತ ದಂತಕಥೆ ರಜನಿಕಾಂತ್ ತಮ್ಮ ಹಿಂದಿನ ಜೀವನವೆಲ್ಲಾ ನೆನಪಿಸಿಕೊಂಡಿದ್ದಾರೆ. ಈ ವೇಳೆ ತನ್ನ ಧರ್ಮಪತ್ನಿ ಲತಾ ಅವರನ್ನು ಕೊಂಡಿದ್ದಾರೆ.

    MORE
    GALLERIES

  • 28

    Rajinikanth: ನನಗೆ ವಿಪರೀತ ಕುಡಿತ ಹಾಗೂ ಸಿಗರೇಟ್ ಚಟವಿತ್ತು; ಪತ್ನಿ ಲತಾ ಪ್ರೀತಿಯೇ ನನ್ನನ್ನು ಬದಲಿಸಿತು! -ರಜನಿಕಾಂತ್

    ನಟ ರಜನಿಕಾಂತ್ ಅವರಿಗೆ ತಮ್ಮ ಪತ್ನಿ ಲತಾ ಬಗ್ಗೆ ವಿಶೇಷ ಪ್ರೀತಿ ಜೊತೆಗೆ ಅಭಿಮಾನ ಹೊಂದಿದ್ದಾರೆ. ಪತ್ನಿ ಜೊತೆ ಅನೇಕ ಕಾರ್ಯಕ್ರಮಗಳಲ್ಲಿ ರಜನಿಕಾಂತ್ ಕಾಣಿಸಿಕೊಂಡಿದ್ದಾರೆ. ತಮ್ಮ ಪತ್ನಿ ಬಗ್ಗೆ ಅನೇಕ ಬಾರಿ ರಜನಿಕಾಂತ್ ಹೇಳಿಕೊಂಡಿದ್ದಾರೆ. ನನ್ನ ಯಶಸ್ಸಿನ ಹಿಂದಿನ ಪ್ರೇರಣೆ ಹಾಗೂ ಶಕ್ತಿ ನನ್ನ ಪತ್ನಿ ಲತಾ ಎಂದು ರಜನಿಕಾಂತ್ ಹೇಳಿದ್ದಾರೆ.

    MORE
    GALLERIES

  • 38

    Rajinikanth: ನನಗೆ ವಿಪರೀತ ಕುಡಿತ ಹಾಗೂ ಸಿಗರೇಟ್ ಚಟವಿತ್ತು; ಪತ್ನಿ ಲತಾ ಪ್ರೀತಿಯೇ ನನ್ನನ್ನು ಬದಲಿಸಿತು! -ರಜನಿಕಾಂತ್

    ಇತ್ತೀಚೆಗೆ ವೈ ಜೀ ಮಹೇಂದ್ರನ್ ಅವರ ಚಾರುಕೇಸಿ ನಾಟಕದ 50ನೇ ದಿನದ ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ರಜನಿಕಾಂತ್, ವೈ ಜೀ ಮಹೇಂದ್ರನ್ ಅವರೇ ನನಗೆ ಲತಾಳನ್ನು ಪರಿಚಯಿಸಿದ್ದು, ಅವರಿಗೆ ನನ್ನ ಧನ್ಯವಾದಗಳು ಎಂದಿದ್ದಾರೆ.

    MORE
    GALLERIES

  • 48

    Rajinikanth: ನನಗೆ ವಿಪರೀತ ಕುಡಿತ ಹಾಗೂ ಸಿಗರೇಟ್ ಚಟವಿತ್ತು; ಪತ್ನಿ ಲತಾ ಪ್ರೀತಿಯೇ ನನ್ನನ್ನು ಬದಲಿಸಿತು! -ರಜನಿಕಾಂತ್

    ರಜನಿಕಾಂತ್ ಹಿಂದೆ ತನಗಿದ್ದ ದುರಭ್ಯಾಸಗಳ ಬಗ್ಗೆ ಹೇಳಿಕೊಂಡಿದ್ದಾರೆ. ತಾವು ಕಂಡಕ್ಟರ್ ಆಗಿದ್ದಾಗ, ನಟನಾದ ನಂತರವೂ ಕುಡಿತ, ನಾನ್ ವೆಜ್, ಸಿಗರೇಟ್ ಚಟಕ್ಕೆ ಬಿದ್ದಿದ್ದೆ, ಬಳಿಕ ನನ್ನನ್ನು ಮನುಷ್ಯನನ್ನಾಗಿ ಬದಲಾಯಿಸಿದ್ದು ಲತಾ ಎಂದರು.

    MORE
    GALLERIES

  • 58

    Rajinikanth: ನನಗೆ ವಿಪರೀತ ಕುಡಿತ ಹಾಗೂ ಸಿಗರೇಟ್ ಚಟವಿತ್ತು; ಪತ್ನಿ ಲತಾ ಪ್ರೀತಿಯೇ ನನ್ನನ್ನು ಬದಲಿಸಿತು! -ರಜನಿಕಾಂತ್

    ತಮಗಿದ್ದ ಮದ್ಯಪಾನ ಮತ್ತು ಧೂಮಪಾನದ ಚಟದ ಬಗ್ಗೆ ರಜನಿಕಾಂತ್ ಹೇಳಿಕೊಂಡಿದ್ದಾರೆ. ನನ್ನ ಪತ್ನಿ ಲತಾ ಅವರನ್ನು ಪರಿಚಯಿಸಿದ ವೈ ಜೀ ಮಹೇಂದ್ರನ್ ಅವರಿಗೆ ನಾನು ಚಿರ ಋಣಿಯಾಗಿದ್ದೇನೆ ಎಂದು ರಜನಿಕಾಂತ್ ಹೇಳಿದ್ರು.

    MORE
    GALLERIES

  • 68

    Rajinikanth: ನನಗೆ ವಿಪರೀತ ಕುಡಿತ ಹಾಗೂ ಸಿಗರೇಟ್ ಚಟವಿತ್ತು; ಪತ್ನಿ ಲತಾ ಪ್ರೀತಿಯೇ ನನ್ನನ್ನು ಬದಲಿಸಿತು! -ರಜನಿಕಾಂತ್

    ನಾನು ಕಂಡಕ್ಟರ್ ಆಗಿದ್ದಾಗ ಪ್ರತಿದಿನ ಕುಡಿಯುತ್ತಿದ್ದೆ. ಅಷ್ಟೇ ಅಲ್ಲದೇ ನಿತ್ಯ ನಾನು ಲೆಕ್ಕವಿಲ್ಲದಷ್ಟು ಸಿಗರೇಟು ಸೇದುತ್ತಿದ್ದೆ. ಧೂಮಪಾನ, ಮಾಂಸ ಸೇವನೆಯಿಂದ ದಿನ ಪ್ರಾರಂಭಿಸುತ್ತಿದ್ದೆ. ನನ್ನ ಬಾಳಲಿ ಲತಾ ಬಂದ ಬಳಿಕ ಎಲ್ಲಾ ಬದಲಾಯಿತು ಎಂದು ರಜನಿಕಾಂತ್ ಹೇಳಿದ್ದಾರೆ.

    MORE
    GALLERIES

  • 78

    Rajinikanth: ನನಗೆ ವಿಪರೀತ ಕುಡಿತ ಹಾಗೂ ಸಿಗರೇಟ್ ಚಟವಿತ್ತು; ಪತ್ನಿ ಲತಾ ಪ್ರೀತಿಯೇ ನನ್ನನ್ನು ಬದಲಿಸಿತು! -ರಜನಿಕಾಂತ್

    ದಿನಕ್ಕೆ 2 ಬಾರಿ ಮಾಂಸಾಹಾರಿ ಊಟ ಮಾಡದಿದ್ದರೆ ನನಗೆ ಆಗುತ್ತಿರಲಿಲ್ಲ. ಆಗ ಸಸ್ಯಾಹಾರಿಗಳನ್ನು ನೋಡಿದ್ರೆ ನನಗೆ ಬೇಸರವಾಗುತ್ತಿತ್ತು. ಆದರೆ, ಈ 3 ಅಭ್ಯಾಸಗಳು ಮನುಷ್ಯನ ದೇಹಕ್ಕೆ ಮಾರಕವಾಗಿದೆ ಎಂದು ರಜನಿಕಾಂತ್ ಹೇಳಿದ್ದಾರೆ.

    MORE
    GALLERIES

  • 88

    Rajinikanth: ನನಗೆ ವಿಪರೀತ ಕುಡಿತ ಹಾಗೂ ಸಿಗರೇಟ್ ಚಟವಿತ್ತು; ಪತ್ನಿ ಲತಾ ಪ್ರೀತಿಯೇ ನನ್ನನ್ನು ಬದಲಿಸಿತು! -ರಜನಿಕಾಂತ್

    ನನ್ನ ಪ್ರಕಾರ ಈ ಮೂರು ಚಟಗಳನ್ನು ಹೊಂದಿದವರು 60ರ ನಂತರ ಆರೋಗ್ಯಕರ ಜೀವನವನ್ನು ನಡೆಸುವುದಿಲ್ಲ ಎಂದು ಹೇಳಿದ್ರು. ನನ್ನ ಹೆಂಡತಿ ಲತಾಗೆ ನನ್ನ ಮೇಲೆ ಅಪಾರ ಪ್ರೀತಿ ಇದೆ. ಹೀಗಾಗಿ ನನ್ನನ್ನು ಈ ದುಶ್ಚಟಗಳಿಂದ ದೂರವಾಗುವಂತೆ ಮಾಡಿದರು. ಇದರಿಂದ ಇಂದು ನಾನು ಶಿಸ್ತಿನ ಜೀವನವನ್ನು ನಡೆಸುತ್ತೇನೆ ಎಂದು ರಜನಿಕಾಂತ್ ಹೇಳಿದ್ದಾರೆ.

    MORE
    GALLERIES