Upendra-Sunny Leone: ಮತ್ತೆ ಸ್ಯಾಂಡಲ್ವುಡ್ಗೆ ಬಂದ ಸನ್ನಿ, ಉಪ್ಪಿ ಜೊತೆ 'ಯುಐ' ಹೇಳಿದ ಸೇಸಮ್ಮ!
ನಟ-ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಸಖತ್ ಬ್ಯುಸಿಯಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅವರ ಅನಾರೋಗ್ಯದ ಕುರಿತಂತೆ ವದಂತಿ ಹಬ್ಬಿತ್ತು. ಆದರೆ ನನಗೇನೂ ಆಗಿಲ್ಲ ಅಂತ ಅವರೇ ಸ್ಪಷ್ಟಪಡಿಸಿದ್ದರು. ಇದೀಗ ಕರುನಾಡ ಪಡ್ಡೆ ಹುಡುಗರ ಎದೆ ಬಡಿತ ಹೆಚ್ಚಿಸೋಕೆ ಉಪ್ಪಿ ಸಜ್ಜಾಗಿದ್ದಾರೆ. ಬಾಲಿವುಡ್ ಬ್ಯೂಟಿ ಸನ್ನಿ ಲಿಯೋನ್ ಅವರನ್ನು ಮತ್ತೆ ಸ್ಯಾಂಡಲ್ವುಡ್ಗೆ ಕರೆತಂದಿದ್ದಾರಂತೆ ರಿಯಲ್ ಸ್ಟಾರ್!
ಸ್ಯಾಂಡಲ್ವುಡ್ನಲ್ಲಿ ಬಹು ಬೇಡಿಕೆಯ ನಿರ್ದೇಶಕ, ನಟ, ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಮುಂಬರುವ ಚಿತ್ರ ಯುಐ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಸೆಟ್ನಲ್ಲಿ ಉಪೇಂದ್ರ ಕ್ಯಾಮೆರಾ ಹಿಡಿದಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
2/ 7
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮೂರು ದಶಕಗಳನ್ನು ಪೂರೈಸಿರುವ ನಟ-ನಿರ್ದೇಶಕ ಉಪ್ಪಿಗೆ ಅಪಾರ ಪ್ರಮಾಣದ ಫ್ಯಾನ್ಸ್ ಇದ್ದಾರೆ. ಅಭಿಮಾನಿಗಳ ಕೋರಿಕೆಯಂತೆ ನಿರ್ದೇಶಕನಾಗಿ ತನ್ನ 11ನೇ ಫಿಲ್ಮ್ ಆಗಿ ಯುಐ ಸಿನಿಮಾವನ್ನು ಉಪ್ಪಿ ಘೋಷಿಸಿದ್ದಾರೆ. ಏಳು ವರ್ಷಗಳ ನಂತರ ನಿರ್ದೇಶಕರಾಗಿ ಮತ್ತೆ ಮರಳಿದ್ದಾರೆ.
3/ 7
ಈ ಸಿನಿಮಾದ ಮೂಲಕ ಮತ್ತೆ ಸನ್ನಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ಕೆಲ ಸಿನಿಮಾದ ಹಾಡಿನಲ್ಲಿ ಕುಣಿದು ಹೋಗಿದ್ದ ಸನ್ನಿ ಲಿಯೋನ್ ಈ ಸಿನಿಮಾದ ಮೂಲಕ ಮತ್ತೆ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದಾರಂತೆ.
4/ 7
‘ಯುಐ’ ಸಿನಿಮಾಗೆ ಸದ್ದಿಲ್ಲದೇ ಎಂಟ್ರಿ ಕೊಟ್ಟಿದ್ದಾರೆ ಹಾಟ್ ತಾರೆ ಸನ್ನಿ ಲಿಯೋನ್. ಈ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರವೊಂದನ್ನು ಮಾಡಿದ್ದು, ಅವರ ಭಾಗದ ಶೂಟಿಂಗ್ ಕೂಡ ಮುಗಿದಿದೆ ಎನ್ನಲಾಗುತ್ತಿದೆ.
5/ 7
ಸನ್ನಿ ಲಿಯೋನ್ ಭಾಗದ ಶೂಟಿಂಗ್ ಬೆಂಗಳೂರಿನಲ್ಲಿ ನಡೆದಿದ್ದು, ಯುಐನಲ್ಲಿ ಪ್ರಮುಖ ಪಾತ್ರವನ್ನೇ ಅವರು ನಿರ್ವಹಿಸಿದ್ದಾರಂತೆ. ಈವರೆಗೂ ಕನ್ನಡ ಸಿನಿಮಾ ರಂಗದಲ್ಲಿ ಸನ್ನಿ ಕೇವಲ ಹಾಡಿನಲ್ಲಿ ಮಾತ್ರ ಬಂದು ಹೋಗಿದ್ದು, ಈ ಸಿನಿಮಾದಲ್ಲಿ ತುಂಬಾ ಹೊತ್ತು ಸ್ಕ್ರೀನ್ ಮೇಲೆ ಇರುತ್ತಾರೆ ಎಂದು ಹೇಳಲಾಗುತ್ತಿದೆ.
6/ 7
ಸನ್ನಿ ಕನ್ನಡದಲ್ಲಿ ಹಲವಾರು ಹಾಡುಗಳಲ್ಲಿ ಕಾಣಿಸಿಕೊಂಡರೂ, ಜೋಗಿ ಪ್ರೇಮ್ ಸಿನಿಮಾದ ಶೇಷಮ್ಮ ಹಾಡಿನ ಮೂಲಕ ಫೇಮಸ್ ಆಗಿದ್ದರು. ಯುಐ ಬಂದ ನಂತರ ಈ ಚಿತ್ರದ ಮೂಲಕ ಮತ್ತಷ್ಟು ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
7/ 7
ಉಪ್ಪಿ ಕೆಲ ದಿನಗಳ ಹಿಂದಷ್ಟೇ ಅವರ ಅನಾರೋಗ್ಯದ ವದಂತಿ ಹಬ್ಬಿತ್ತು. ಆದರೆ ನನಗೇನೂ ಆಗಿಲ್ಲ ಅಂತ ಅವರೇ ಸ್ಪಷ್ಟಪಡಿಸಿದ್ದರು. ಇದೀಗ ಕರುನಾಡ ಪಡ್ಡೆ ಹುಡುಗರ ಎದೆ ಬಡಿತ ಹೆಚ್ಚಿಸೋಕೆ ಉಪ್ಪಿ ಸಜ್ಜಾಗಿದ್ದಾರೆ. ಬಾಲಿವುಡ್ ಬ್ಯೂಟಿ ಸನ್ನಿ ಲಿಯೋನ್ ಅವರನ್ನು ಮತ್ತೆ ಸ್ಯಾಂಡಲ್ವುಡ್ಗೆ ಕರೆತಂದಿದ್ದಾರಂತೆ ರಿಯಲ್ ಸ್ಟಾರ್!