6ನೇ ವಸಂತಕ್ಕೆ ಕಾಲಿಟ್ಟ Nisha Weber: ಇಲ್ಲಿವೆ ನಟಿ Sunny Leone ಮಗಳ ಹುಟ್ಟುಹಬ್ಬದ ಚಿತ್ರಗಳು..!
ಮಾದಕ ನಟಿ ಸನ್ನಿ ಲಿಯೋನ್ ತಮ್ಮ ಮಗಳ ಹುಟ್ಟುಹಬ್ಬವನ್ನು ಕುಟುಂಬದೊಂದಿಗೆ ಆಚರಿಸಿದ್ದಾರೆ. ಮಗಳು ನಿಶಾ ವೆಬರ್ 6ನೇವಸಂತಕ್ಕೆ ಕಾಲಿಟ್ಟಿದ್ದಾಳೆ. (ಚಿತ್ರಗಳು ಕೃಪೆ: ಸನ್ನಿ ಲಿಯೋನ್ ಇನ್ಸ್ಟಾಗ್ರಾಂ ಖಾತೆ)
ಸನ್ನಿ ಲಿಯೋನ್ ಅವರ ಮಗಳು ನಿಶಾ ವೇಬರ್ 6ನೇ ವಸಂತಕ್ಕೆ ಕಾಲಿಟ್ಟಿದ್ದಾಳೆ. ಮಗಳ ಹುಟ್ಟುಹಬ್ಬವನ್ನು ನಟಿ ತಮ್ಮ ಹೊಸ ಮನೆಯಲ್ಲಿ ಕುಟುಂಬದೊಂದಿಗೆ ಆಚರಿಸುವ ಮೂಲಕ ಸಂಭ್ರಮಿಸಿದ್ದಾರೆ.
2/ 7
ಹೊಸ ಮನೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಮಗಳ ಹುಟ್ಟುಹಬ್ಬ ಆಚರಿಸಿದ್ದಾರೆ ಸನ್ನಿ ಲಿಯೋನ್. ಈ ಬರ್ತ್ ಡೇ ಪಾರ್ಟಿಯಲ್ಲಿ ಸ್ನೇಹಿತರು ಹಾಗೂ ಕುಟುಂಬದವರು ಭಾಗಿಯಾಗಿದ್ದಾರೆ.
3/ 7
ಮಗಳ 6ನೇ ಹುಟ್ಟುಹಬ್ಬದ ವಿಷಯವನ್ನು ಸನ್ನಿ ಲಿಯೋನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಬರ್ತ್ ಡೇ ಪಾರ್ಟಿಯ ಕೆಲವು ಫೋಟೋಗಳನ್ನೂ ಶೇರ್ ಮಾಡಿದ್ದಾರೆ.
4/ 7
ನೀಲಿ ಸಿನಿಮಾಗಳಿಗೆ ವಿದಾಯ ಹೇಳಿ ಬಾಲಿವುಡ್ನಲ್ಲಿ ಭವಿಷ್ಯ ಕಂಡುಕೊಂಡು ಭಾರತದಲ್ಲೇ ನೆಲೆಸಿದ ನಂತರ ನಟಿ ಸನ್ನಿ ಲಿಯೋನ್ ಮತ್ತು ಪತಿ ಡೇನಿಯಲ್ ವೆಬರ್ ಅವರು 21 ತಿಂಗಳ ಹೆಣ್ಣು ಮಗುವನ್ನು ದತ್ತು ಪಡೆದುಕೊಂಡರು.
5/ 7
2017ರಲ್ಲಿ ಮಹಾರಾಷ್ಟ್ರದ ಲಾತೂರ್ನಿಂದ ಹೆಣ್ಣು ಮಗುವನ್ನು ದತ್ತು ಪಡೆದ ದಂಪತಿ, ಮಗುವಿಗೆ ನಿಶಾ ಕೌರ್ ವೆಬರ್ ಎಂದು ನಾಮಕರಣ ಮಾಡಿದರು. ಮಗುವನ್ನು ಕಾನೂನಾತ್ಮಕವಾಗಿ ದತ್ತು ಪಡೆದಿದ್ದಾರೆ.
6/ 7
ಎರಡು ವರ್ಷಗಳ ಸತತ ಪ್ರಯತ್ನದ ನಂತರ ನಿಶಾಳನ್ನು ಅನಾಥಾಶ್ರಮದಿಂದ ದತ್ತು ಪಡೆಯುವಲ್ಲಿ ಸನ್ನಿ ಲಿಯೋನ್ ಹಾಗೂ ಡೇನಿಯಲ್ ವೆಬರ್ ಯಶಸ್ವಿಯಾಗಿದ್ದರು.
7/ 7
ನಿಶಾಳನ್ನು ದತ್ತು ಪಡೆದ ನಂತರದಲ್ಲಿ ಬಾಡಿಗೆ ತಾಯಿ ಮೂಲಕ ಮತ್ತೆ ಸನ್ನಿ ಲಿಯೋನ್ ಹಾಗೂ ಡೇನಿಯಲ್ ವೆಬರ್ ಅವರು ಅವಳಿ ಗಂಡು ಮಕ್ಕಳನ್ನು ಪಡೆದರು. ಈಗ ಮೂವರು ಮಕ್ಕಳ ಜೊತೆ ಮುಂಬೈನಲ್ಲೇ ಸ್ವಂತ ಮನೆಯಲ್ಲಿ ವಾಸಿಸುತ್ತಿದ್ದಾರೆ.