Sunny Leone: ಮುಂಬೈನಲ್ಲಿ ಹೊಸ ಮನೆ ಖರೀದಿಸಿದ ಮಾಜಿ ನೀಲಿ ತಾರೆ ಸನ್ನಿ ಲಿಯೋನ್..!
ನೀಲಿ ಸಿನಿಮಾಗಳಿಗೆ ವಿದಾಯ ಹೇಳಿ ಬಾಲಿವುಡ್ಗೆ ಬಂದು ಇಲ್ಲೇ ಭವಿಷ್ಯ ಕಂಡುಕೊಂಡ ಸನ್ನಿ ಲಿಯೋನ್ ಈಗ ಮುಂಬೈನಲ್ಲಿ ಮನೆ ಖರೀದಿಸಿದ್ದಾರೆ. ಈಗ ಕುಟುಂಬ ಸಮೇತರಾಗಿ ಹೊಸ ಮನೆಗೆ ಕಾಲಿಟ್ಟಿರುವ ನಟಿ, ಮನೆಯ ಕೆಲವು ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಸನ್ನಿ ಲಿಯೋನ್ ಇನ್ಸ್ಟಾಗ್ರಾಂ ಖಾತೆ)
ಸನ್ನಿ ಲಿಯೋನ್ ಬಾಲಿವುಡ್ಗೆ ಐಟಂ ಹಾಡುಗಳಿಗೆ ಹೆಜ್ಜೆ ಹಾಕುವ ನಟಿಯಾಗಿ ಕಾಲಿಟ್ಟು ನಂತರ ಸಿನಿಮಾ ನಿರ್ಮಾಣ ಮಾಡುವ ಮಟ್ಟಕ್ಕೆ ಬೆಳೆದರು.
2/ 16
ನೀಲಿ ಸಿನಿಮಾಗಳಿಗೆ ವಿದಾಯ ಹೇಳಿ ಭಾರತಕ್ಕೆ ಬಂದು ಇಲ್ಲಿನ ಹಿಂದಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ನಂತರ ಹಿಂದಿ ಸಿನಿಮಾಗಳಲ್ಲಿ ಐಟಂ ಹಾಡುಗಳಿಗೆ ಹೆಜ್ಜೆ ಹಾಕುತ್ತಲೇ ನಾಯಕಿಯಾಗಿ ಕೆಲವು ಚಿತ್ರಗಳಲ್ಲಿ ನಟಿಸಿದರು.
3/ 16
ಸಿನಿಮಾಗಳಲ್ಲಿ ಅಭಿನಯಿಸುತ್ತಲೇ ಈಗ ನಿರ್ಮಾಪಕಿಯಾಗಿ ಬಡ್ತಿ ಪಡೆದಿರುವ ಸನ್ನಿ ಲಿಯೋನ್ ಮುಂಬೈನಲ್ಲಿ ಸ್ವಂತ ಮನೆ ಖರೀದಿಸಿದ್ದಾರೆ.
4/ 16
ಹೌದು, ಖರೀದಿಸಿರುವ ಹೊಸ ಮನೆಗೆ ಸನ್ನಿ ಲಿಯೋನ್ ಹಾಗೂ ಕುಟುಂಬದವರು ಗೃಹ ಪ್ರವೇಶ ಮಾಡಿದ್ದಾರೆ.
5/ 16
ಮನೆಗೆ ಕಾಲಿಟ್ಟ ಸಂಭ್ರಮದಲ್ಲಿ ಸನ್ನಿ ಲಿಯೋನ್, ಪತಿ ಹಾಗೂ ಮಕ್ಕಳು ಪಿಜ್ಜಾ ಪಾರ್ಟಿ ಮಾಡಿದ್ದಾರೆ.
6/ 16
ಮನೆ ಖರೀದಿಸಿರುವ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿರುವ ನಟಿ, ಮನೆಯಲ್ಲಿ ತೆಗೆದ ಕೆಲವು ಫೋಟೋಗಳನ್ನೂ ಶೇರ್ ಮಾಡಿದ್ದಾರೆ.