ಇದಾದ ಬಳಿಕ ಏಪ್ರಿಲ್ 16ರಂದು ಲಕ್ನೋ ಸೂಪರ್ ಜೈಂಟ್ಸ್ ವರ್ಸಸ್ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ, ರಾಹುಲ ಆಕರ್ಷಕ ಶತಕ ಬಾರಿಸಿದ್ದರು. ಈ ಫೋಟೋ ಹಂಚಿಕೊಂಡ ಸುನೀಲ್ ಶೆಟ್ಟಿ ಟ್ರೋಲ್ ಮಾಡಿದವನಿಗೆ ಖಡಕ್ ಉತ್ತರ ನೀಡಿದ್ದರು.
ಟೀಂ ಇಂಡಿಯಾ(Team India) ಓಪನಿಂಗ್ ಬ್ಯಾಟ್ಸ್ಮ್ಯಾನ್ ಕನ್ನಡಿಗ ಕೆ.ಎಲ್.ರಾಹುಲ್(KL Rahul) ಹಾಗೂ ಬಾಲಿವುಡ್ ನಟ ಸುನೀಲ್ ಶೆಟ್ಟಿ(Sunil Shetty) ಅವರ ಪುತ್ರಿ ಆತಿಯಾ ಶೆಟ್ಟಿ(Athiya Shetty) ಪ್ರೀತಿಯಲ್ಲಿರುವುದು ಎಲ್ಲರಿಗೂ ಗೊತ್ತೆ ಇದೆ.
2/ 7
ಪ್ರಸ್ತುತ ಐಪಿಎಲ್ ಸೀಸನ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಕೆ.ಎಲ್.ರಾಹುಲ್ ಮುನ್ನಡೆಸುತ್ತಿದ್ದಾರೆ. ಏಪ್ರಿಲ್ 10ರಂದು ಲಕ್ನೋ ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಡಕ್ ಔಟ್ ಆಗಿದ್ದರು.
3/ 7
ಈ ಪಂದ್ಯ ನೋಡಲು ಆತಿಯಾ ಶೆಟ್ಟಿ ಹಾಗೂ ಸುನೀಲ್ ಶೆಟ್ಟಿ ಗ್ರೌಂಡ್ಗೆ ಬಂದಿದ್ದರು. ಲಕ್ನೋ ಸೂಪರ್ ಜೈಂಟ್ಸ್ ಜೆರ್ಸಿ ತೊಟ್ಟು ತಂಡಕ್ಕೆ ಸಪೋರ್ಟ್ ಮಾಡಿದ್ದರು. ಆದರೆ, ಅದೇ ಪಂದ್ಯದಲ್ಲಿ ರಾಹುಲ್ ಡಕ್ ಔಟ್ ಆಗಿದ್ದಕ್ಕೆ, ಕೆಲವರು ಸುನೀಲ್ ಶೆಟ್ಟಿಯವರನ್ನು ಟ್ರೋಲ್ ಮಾಡಿದ್ದರು.
4/ 7
ಇದಾದ ಬಳಿಕ ಏಪ್ರಿಲ್ 16ರಂದು ಲಕ್ನೋ ಸೂಪರ್ ಜೈಂಟ್ಸ್ ವರ್ಸಸ್ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ, ರಾಹುಲ ಆಕರ್ಷಕ ಶತಕ ಬಾರಿಸಿದ್ದರು. ಈ ಫೋಟೋ ಹಂಚಿಕೊಂಡ ಸುನೀಲ್ ಶೆಟ್ಟಿ ಟ್ರೋಲ್ ಮಾಡಿದವನಿಗೆ ಖಡಕ್ ಉತ್ತರ ನೀಡಿದ್ದರು.
5/ 7
ಸುನೀಲ್ ಶೆಟ್ಟಿ, ಆತಿಯಾ ಶೆಟ್ಟಿ ಗ್ರೌಂಡ್ಗೆ ಬಂದಿದ್ದಕ್ಕೆ ರಾಹುಲ್ ಡಕ್ ಔಟ್ ಆದರು ಎಂದು ಕಮೆಂಟ್ ಮಾಡಿದ್ದರು. ಬಳಿಕ ಸೆಂಚುರಿ ಹೊಡೆದ ಮೇಲೆ ನೋಡಿ ಇವತ್ತು ಅವತು ಬಂದಿಲ್ಲ. ಅದಕ್ಕೆ ರಾಹುಲ್ ಸೆಂಚುರಿ ಮಡಿದ್ದಾರೆ ಎಂದು ವ್ಯಕ್ತಿಯೊಬ್ಬ ಕಮೆಂಟ್ ಮಾಡಿದ್ದ. ಇದಕ್ಕೆ ಸುನೀಲ್ ಶೆಟ್ಟಿ. 'ಕಂದ ನೀನು ಮನೆಗೆ ಹೋಗಿ ಮಲಕೋ' ಎಂದು ಕಮೆಂಟ್ ಮಾಡಿದ್ದರು.
6/ 7
ಅಥಿಯಾ ಶೆಟ್ಟಿ ..ಬಾಲಿವುಡ್ ಆಕ್ಷನ್ ಹೀರೋ ಸುನಿಲ್ ಶೆಟ್ಟಿ ಅವರ ಪ್ರೀತಿಯ ಮಗಳು. ಅತಿಯಾ ‘ಹೀರೋ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.ಆ ನಂತರ ‘ಮುಬಾರಕ್’ ಸಿನಿಮಾದಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದರು.ಬಳಿಕ ‘ನವಾಬ್ ಜಡೆ’ಯಲ್ಲಿ ಅತಿಥಿ ಪಾತ್ರದಲ್ಲಿ ಮನರಂಜಿಸಿದರು.
7/ 7
ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿ, ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಅವರನ್ನು ಕೆಲ ದಿನಗಳಿಂದ ಪ್ರೀತಿಸುತ್ತಿರುವುದು ಎಲ್ಲರಿಗೂ ಗೊತ್ತೆ ಇದೆ. ಶೀಘ್ರದಲ್ಲೇ ಈ ಜೋಡಿ ಹಸೆಮಣೆ ಏರಲಿದ್ದಾರೆ ಅನ್ನುವ ಗುಸು ಗುಸು ಹರಿದಾಡುತ್ತಿದೆ.